ಶಿವಮೊಗ್ಗ, ಫೆ.06:
ಕರ್ನಾಟಕ ರಾಜ್ಯ ಗೆಳೆಯರ ಬಳಗ ಶಿವಮೊಗ್ಗದ ವತಿಯಿಂದ ಮಣ್ಣು ಮತ್ತು ಮರಳು ಮಾಫಿಯಾದ ಅಕ್ರಮ ಗಣಿಗಾರಿಕೆ ವಿರುದ್ಧ ಫೆ..07 ರ ಬೆಳಗ್ಗೆ 11:00 ಗಂಟೆಗೆ ಪ್ರತಿಭಟನೆ ನಡೆಸಲಿದೆ.
ನಗರದ ಗೋಪಿ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯ ಮೆರವಣಿಗೆಅಡಿ ನಂತರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗೆ ಮನವಿಯನ್ನು ನೀಡಲು ನಿರ್ಧರಿಸಿದೆ.
ಕಾಲ್ನಡಿಗೆ ಜಾಥಾದ ಮೂಲಕ ಹೋರಾಟವನ್ನು ಬೆಂಬಲಿಸಿ ಸಮಸ್ತರೂ ಬಾಗವಹಿಸುವಂತೆ ಗೆಳೆಯರ ಬಳಗದ ರಾಜ್ಯಾಧ್ಯಕ್ಷರಾದ ಅನಿಲ್ ಕುಂಚಿ ಮತ್ತು ಶಿವಮೊಗ್ಗ ಜಿಲ್ಲಾಧ್ಯಕ್ಷರಾದ ಪರಮೇಶ್ವರಪ್ಪ ಪತ್ರಿಕಾ ಹೇಳಿಕೆಯಲ್ಲಿ ವಿನಂತಿಸಿದ್ದಾರೆ.