ಶಿವಮೊಗ್ಗ, ಫೆ.03: ನಾನು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಕಾಂಕ್ಷಿಯಲ್ಲ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದ್ದಾರೆ.

ಅವರು ಇಂದು ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಬಳಿಕ ಪ್ರಥಮ ಬಾರಿಗೆ ನಗರಕ್ಕೆ ಆಗಮಿಸಿದಾಗ ಕಾಂಗ್ರೆಸ್ಸ್ನ ಕಾರ್ಯಕರ್ತರು ಮತ್ತು ಅಭಿಮಾನಿಗಳು ಭವ್ಯವಾದ ಮೆರವಣ ಗೆ ಮೂಲಕ ಪಕ್ಷದ ಕಚೇರಿಗೆ ಕರೆತಂದರು.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಪಕ್ಷ ನಿಗಮ ಮಂಡಳಿಯ ಸ್ಥಾನಮಾನ ನೀಡಿ, ಗೌರವಿಸಿದೆ. ಪ್ರೀತಿಯಿಂದ ಜನ ಆಶೀರ್ವದ ಮಾಡಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಆಯ್ಕೆ ಮಾಡಿದ ಯಾರೇ ಅಭ್ಯರ್ಥಿಯಾದರು ಅವರ ಗೆಲುವಿಗಾಗಿ ನಾವೆಲ್ಲರೂ ಸೇರಿ ಪ್ರಯತ್ನ ಮಾಡುತ್ತೇವೆ. ಪಕ್ಷ ನೀಡಿದ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತೇನೆ. ನನಗೆ ನೀಡಿದ ನಿಗಮದ ಅಭಿವೃದ್ಧಿಗೆ ಶಕ್ತಿ ಮೀರಿ ಪ್ರಯತ್ನಿಸುತ್ತೇನೆ ಎಂದರು.

ಡಿ.ಕೆ.ಸುರೇಶ್ ಅವರ ಹೇಳಿಕೆ ಅವರ ವೈಯುಕ್ತಿಕ ಆ ಹೇಳಿಕೆಗೆ ನನ್ನ ಸಹಮತವಿಲ್ಲ. ಅದೇ ಹೇಳಿಕೆಯನ್ನು ವೈಭವೀಕರಿಸುವುದು ಬೇಡ. ಬಿಜೆಪಿಯವರು ಅನಾವಶ್ಯಕವಾಗಿ ಇದನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಬಿಜೆಪಿಯ ಸಂಸದ ಅನಂತ್‌ಕುಮಾರ್ ಹೆಗಡೆ ಸಂವಿಧಾನವನ್ನು ಬದಲಿಸುವ ಮಾತನ್ನಾಡಿದ್ದರು. ಶಾಸಕ ಯತ್ನಾಳ್ ಪಕ್ಷದ ನಾಯಕರ ಮೇಲೆ 40 ಸಾವಿರ ಕೋಟಿಯ ಭ್ರಷ್ಟಾಚಾರ ಆರೋಪ ಮಾಡಿದ್ದರು. ಬಿಜೆಪಿ ಅವರಿಬ್ಬರನ್ನು ಪಕ್ಷದಿಂದ ಹೊರಕ್ಕೆ ಹಾಕಿಲ್ಲ ಏಕೆ ?. ಅವರಿಗೇನಾದರೂ ನೈತಿಕತೆ ಇದ್ದರೆ ಮೊದಲು ಪಕ್ಷದಿಂದ ಅವರಿಬ್ಬರನ್ನು ಉಚ್ಛಾಟಿಸಲಿ ಎಂದರು.

ಖರ್ಗೆಯವರು ಬಾಯಿತಪ್ಪಿ ನಿನ್ನೆ ರಾಜ್ಯ ಸಭೆಯಲ್ಲಿ ಬಿಜೆಪಿಗೆ 400 ಸ್ಥಾನ ಎಂದು ಹೇಳಿದ್ದಾರೆ. ಅದನ್ನು ದೊಡ್ಡದು ಮಾಡುವುದು ಬೇಡ. ಪ್ರಜಾಪ್ರಭುತ್ವದಲ್ಲಿ ಯಾರೂ ಬೇಕಾದರು ಮುಖ್ಯಮಂತ್ರಿ ಆಗಬಹುದು. ನಾನು ಕೂಡ ಆಗಲು ಅವಕಾಶವಿದೆ. ಬಂಡೆಹೊಡೆಯುವವರು ಸಂಸದರಾಗಿದ್ದಾರೆ ಎಂಬುವುದು ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸದ ಅವರು, ಕುಮಾರಸ್ವಾಮಿಗೆ ಅಪ್ಪನ ಹೆಸರಿನಲ್ಲಿ ಬೆಳಕಿಗೆ ಬಂದವರು, ಬಂಡೆಹೊಡೆಯುವವರು, ಕೂಲಿ ಕಾರ್ಮಿಕರು, ಮಂತ್ರಿಗಳು, ಸಂಸದರಾದರೆ ತಪ್ಪೇನು? ಪ್ರೀತಿಯಿಂದ ಜನ ಆಶೀರ್ವದ ಮಾಡಿದ್ದಾರೆ. ಪಕ್ಷದ ನಾಯಕರು ಒಳ್ಳೆಯ ಸ್ಥಾನ ಕೊಟ್ಟಿದ್ದಾರೆ. 20 ತಿಂಗಳು ಮಾತ್ರ ಒಬ್ಬರಿಗೆ ಮಂತ್ರಿಗಿರಿ ಕೊಡಬೇಕು ಎಂಬ ಯಾವುದೇ ಹೇಳಿಕೆಯನ್ನು ನಾನು ಸಮರ್ಥಿಸುವುದಿಲ್ಲ. ಪಕ್ಷದ ಶಿಸ್ತಿನ ಶಿಫಾಯಿ. ನನಗೆ ಯಾವುದೇ ಅಸಮಧಾನವಿಲ್ಲ ಎಂದರು.

ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಹೆಚ್.ಸಿ.ಯೋಗೀಶ್, ದೇವೇಂದ್ರಪ್ಪ, ಪಿ.ಎಸ್. ಗಿರೀಶ್‌ರಾವ್, ವಿಶ್ವನಾಥ್ ಕಾಶಿ ಮತ್ತಿತರರು ಇದ್ದರು.

By admin

ನಿಮ್ಮದೊಂದು ಉತ್ತರ

error: Content is protected !!