ಶಿವಮೊಗ್ಗ : ಬಿಜೆಪಿಯ ಭೀಷ್ಮ ದೇಶವನ್ನು ಸುತ್ತಾಡಿದ ಹಿರಿಯರಾದ ಅಡ್ವಾಣಿ ಅವರಿಗೆ ಪುರಸ್ಕಾರ ದೊರೆತಿರುವುದು ಸಂತಸ ತಂದಿದೆ ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಾದ್ಯಂತ ಸಾಂಸ್ಕೃತಿಕ ತಲ್ಲಣ ಉಂಟು ಮಾಡಿದ ಅಎ್ವಾಣಿ ಅವರಿಗೆ ಭಾರತ ರತ್ನ ಘೋಷಣೆ ಆಗಿದೆ. ಇಡೀ ದೇಶದಲ್ಲಿ ಸುತ್ತಾಡಿ ಪಕ್ಷವನ್ನು ಕಟ್ಟಿ ಬೆಳೆಸಿದವರು ಅಡ್ವಾಣಿ ಅವರು. ಅಡ್ವಾಣಿ ಅವರನ್ನು ಪಕ್ಷ ಯಾವುದೇ ನಿರ್ಲಕ್ಷ್ಯ ಮಾಡಲಿಲ್ಲ, ಅವರು ಎಲ್ಲಿಯೂ ಪಕ್ಷ ನಿರ್ಲಕ್ಷ್ಯ ಮಾಡಿದೆ ಅಂತಾ ಹೇಳಲಿಲ್ಲ.

 ವ್ಯಕ್ತಿಗಿಂತ ಪಕ್ಷ, ಪಕ್ಷಕ್ಕಿಂತ ದೇಶ ದೊಡ್ಡದ್ದು ಎಂಬ ಸಿದ್ದಾಂತ ನಂಬಿದವರು ಎಂದರು.

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಆಗಿದೆ.‌ಸೋಮನಾಥದಿಂದ ಅಯೋಧ್ಯೆಯವರೆಗೆ ರಥಯಾತ್ರೆ ಆರಂಭಿಸಿದವರು ಅಡ್ವಾಣಿ ಅವರು. ಬಿಜೆಪಿ ಈ ಎತ್ತರಕ್ಕೆ ಬೆಳೆದು ನಿಂತಿದೆ ಎಂದರೆ ಅದಕ್ಕೆ ಅಡ್ವಾಣಿ ಅವರು ಕಾರಣ ಎಂದರು.

ಸಂಸದ ಡಿ.ಕೆ.ಸುರೇಶ್ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಇದಕ್ಕೆ ಅವರನ್ನು ಸಂಸತ್ತು ಸ್ಥಾನದಿಂದ ಹೊರಗೆ ಹಾಕಬೇಕು. ದೇಶದ ಏಕತೆ ಸಮಗ್ರತೆಗೆ ಬದ್ದತೆ ಇರಬೇಕು. ದೇಶ ಒಡೆಯುವ ಕೆಲಸ ಮಾಡಿದ್ದಾರೆ. ಸ್ವಾತಂತ್ರ್ಯದ ಸಮಯದಲ್ಲಿ ಕಾಂಗ್ರೆಸ್ ನವರು ದೇಶ ಒಡೆದಿದ್ದಾರೆ. ಚುನಾವಣೆಯಲ್ಲಿ ಮತದಾರರೇ ಅವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದರು.

By admin

ನಿಮ್ಮದೊಂದು ಉತ್ತರ

error: Content is protected !!