ಕರ್ನಾಟಕ ತಂಡದ ಸಾಂದರ್ಭಿಕ ಚಿತ್ರ
ಶಿವಮೊಗ್ಗ, ಫೆ.01:
ಶಿವಮೊಗ್ಗ ನಗರದ ನೆಹರು ಕ್ರೀಡಾಂಗಣದಲ್ಲಿ ನಡೆಯುತ್ತಿರುವ 19 ವರ್ಷದೊಳಗಿನ 67 ನೇ ರಾಷ್ಟ್ರ ಮಟ್ಟದ ಬಾಲಕಿಯರ ವಾಲಿಬಾಲ್ ಪಂದ್ಯಾವಳಿ ಇಂದು ಸಂಜೆ ನಾಲ್ಕು ಗಂಟೆಗೆ ಮೂರು ಮತ್ತು ನಾಲ್ಕನೇ ಸ್ಥಾನಕ್ಕಾಗಿ ಕೇರಳ ಮತ್ತು ಮಹಾರಾಷ್ಟ್ರ ತಂಡಗಳ ಮಧ್ಯ ನಡೆಯಲಿದೆ.
ಸಂಜೆ 6 ಗಂಟೆಗೆ ಅಂತಿಮ ರೋಚಕ ಪಂದ್ಯ ಗುಜರಾತ್ ಮತ್ತು ವೆಸ್ಟ್ ಬೆಂಗಾಲ್ ತಂಡಗಳ ಮಧ್ಯ ನಡೆಯಲಿದೆ.
ಮೋದಿ ವರ್ಸಸ್ ಮಮತಾ ಬ್ಯಾನರ್ಜಿ ಎಂದೇ ಕರೆಯಲಾಗುತ್ತಿರುವ ಫೈನಲ್ ವೀಕ್ಷಣೆಗೆ ಸಾಕಷ್ಟು ಕ್ರೀಡಾಭಿಮಾನಿಗಳು ಸೇರುವ ಸಾಧ್ಯತೆಗಳಿವೆ.
ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಗುಜರಾತು ಮೂಲದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಹೆಸರು ಇಲ್ಲಿ ಓಡುತ್ತಿದೆ. ಕ್ರೀಡೆಯಲ್ಲಿ ಒಂದಿಷ್ಟು ಜೋಕುಗಳ ನಡುವೆ ಅಂತಿಮ ಹಂತದ ಪಂದ್ಯ ಮೋದಿ ವರ್ಸಸ್ ಮಮತಾ ಬ್ಯಾನರ್ಜಿ ಎಂದೇ ಕರೆಯಲ್ಪಡುತ್ತಿದೆ.