ಶಿವಮೊಗ್ಗ, ಫೆ.01:
ಇಲ್ಲಿನ ಕುವೆಂಪು ವಿಶ್ವವಿದ್ಯಾನಿಲಯದ ಕುಲಸಚಿವರಾಗಿ (ಆಡಳಿತ) ಸರ್ಕಾರ ಮೈಸೂರಿನ ಎಡಿಸಿ (ಅಪರ ಜಿಲ್ಲಾಧಿಕಾರಿ) ಆಗಿದ್ದ ಶಿವರಾಜು ಪಿ ನೇಮಕಗೊಂಡಿದ್ದಾರೆ.
ಇದುವರೆಗೂ ಪ್ರಭಾರಿಯಾಗಿದ್ದ ಶಿವಮೊಗ್ಗದ ಸಿಇಒ ಸುಧಾಕರ್ ಲೋಖಂಡೆ ಅವರ ಸ್ಥಳಕ್ಕೆ ಶಿವರಾಜ್ ಅವರನ್ನು ನೇಮಿಸಲಾಗಿದೆ. ಮಾಜಿ ಸಂಸದ ಹಾಗೂ ಕೆಪಿಸಿಸಿ ರಾಜ್ಯ ವಕ್ತಾರ ಆಯನೂರು ಮಂಜುನಾಥ್ ಅವರು ಕುವೆಂಪು ವಿವಿ ಸಮಸ್ಸೆಗಳ ಬಗ್ಗೆ ಉನ್ನತ ಶಿಕ್ಷಣ ಸಚಿವರಿಗೆ ಮಾಹಿತಿ ನೀಡಿ, ಪರಿಹಾರಕ್ಕೆ ವಿನಂತಿಸಿದ್ದರು. ನೇಮಕಗೊಂಡಿದ್ದರು. ಶಿವರಾಜು ಅವರ ನೇಮಕದಿಂದ ಸಿಇಒ ಲೋಖಂಡೆ ಅವರ ಪ್ರಭಾರ ನೇಮಕಾತಿ ಕೊನೆಗೊಂಡಿದೆ. ಶಿವರಾಜು ಅವರು ಕೆಎಎಸ್ ನ ಶ್ರೇಣಿಯ ಅಧಿಕಾರಿಯಾಗಿದ್ದಾರೆ.
ಮೈಸೂರಿನ ಎಡಿಸಿ ಆಗಿದ್ದ ಶಿವರಾಜು ಅವರನ್ನ ವರ್ಗಾವಣೆ ಮಾಡಿ ಅವರ ಕಾರ್ಯಸ್ಥಾನದ ಜಾಗವನ್ನ ಕಾಯ್ದಿರಿಸಿ ಆದೇಶಿಸಿತ್ತು. ಆದರೆ ಇಂದು ವಿಶ್ವವಿದ್ಯಾಲಯದ ಕುಲಸಚಿವರನ್ನಾಗಿ ಸರ್ಕಾರ ನೇಮಕಾತಿ ಮಾಡಿದೆ.
ಕುವೆಂಪು ವಿಶ್ವವಿದ್ಯಾಲಯದ ಕುಲಸಚಿವರಾಗಿ ನೇಮಕಗೊಂಡಿದ್ದ ಶಿವರಾಜು ಪಿ ಅವರ ಮುಂದೆ ದೊಡ್ಡ ದೊಡ್ಡ ಸವಾಲುಗಳೇ ಇವೆ. ವಿವಿಯಲ್ಲಿರುವರುವ ಬ್ಯಾಕ್ ಲಾಗ್ ನೇಮಕಾತಿಗಳು, ಅತಿಥಿ ಉಪನ್ಯಾಸಕರಿಗೆ ಮತ್ತು ಔಟ್ ಸೋರ್ಸ್ ಸಿಬ್ಬಂದಿಗಳಿಗೆ ನಿಗದಿತ ದಿನಾಂಕದಲ್ಲಿ ಸಂಬಳ ಮಾಡುವಂತದ್ದು
ಸ್ಮಾರ್ಟ್ ಕ್ಲಾಸ್ ಗಳ ಅವ್ಯವಹಾರವೂ ಸಹ ನೂತನವಾಗಿ ಆಗಮಿಸವ ಕುಲಸಚಿವರಿಗೆ ಸವಾಲಾಗಿದೆ. ದೂರ ಶಿಕ್ಷಣದ ಬಗ್ಗೆನೂ ಕುಲಸಚಿವರು ಅನುಕೂಲ ಮಾಡಿಕೊಡಬೇಕಿದೆ. ಮೈಸೂರು ವಿಶ್ವವಿದ್ಯಾನಿಲಯದ ದೂರ ಶಿಕ್ಷಣಕ್ಕೆ ಮಾತ್ರ ಅವಕಾಶ ಕಲ್ಪಿಸಿರುವ ಸರ್ಕಾರ ಈ ಆದೇಶದಿಂದ ಸಡಿಲಗೊಳಿಸಿದ್ದಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಅವೆಲ್ಲಾದಕ್ಕೂ ಹೆಚ್ಚಾಗಿ ವಿವಿಯ ಶೈಕ್ಷಣಿಕ ಗುಣ ಮಟ್ಟವನ್ನ ಏರಿಸುವುದು ದೊಡ್ಡ ಸವಾಲಾಗಿದೆ.