ಶಿವಮೊಗ್ಗ,ಜ.24:
ಇಲ್ಲಿನ ನೆಹರೂ ರಸ್ತೆಯ ನಂದಿನಿ ಬಿಲ್ಡಿಂಗ್ನಲ್ಲಿ ನೂತನವಾಗಿ ವಿಸ್ತರಗೊಂಡಿರುವ ಕಿಶನ್ ಹ್ಯಾಂಡಿಕ್ರಾಫ್ಟ್ ಮಳಿಗೆ ಇನ್ಮುಂದೆ ಕಿಶನ್ ವರ್ಲ್ಡ್ ಆಫ್ ಹ್ಯಾಂಡಿಕ್ರಾಪ್ಟ್ಸ್ ಆಗಿ ಬದಲಾವಣೆಯಾಗಿದ್ದು, ಅದರ ಉದ್ಘಾಟನಾ ಸಮಾರಂಭ ಜ.26ರಂದು ಸಂಜೆ 5ಕ್ಕೆ ನಡೆಯಲಿದೆ ಎಂದು ಸಂಸ್ಥೆಯ ಪಾಲುದಾರರಾದ ಬಿ.ಆರ್.ಸಂತೋಷ್ ತಿಳಿಸಿದರು.
ಅವರಿಂದು ಬೆಳಿಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ,
ಮಳಿಗೆಯ ಉದ್ಘಾಟನೆಯನ್ನು ಸಚಿವ ಮಧುಬಂಗಾರಪ್ಪ ನೆರವೇರಿಸಲಿದ್ದಾರೆ. ಸಾನಿಧ್ಯವನ್ನು ಬಸವ ಕೇಂದ್ರದ ಡಾ. ಬಸವ ಮರುಳಸಿದ್ಧಸ್ವಾಮೀಜಿ ವಹಿಸಲಿದ್ದಾರೆ ಎಂದರು.
ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ, ಶಾಸಕರಾದ ಎಸ್.ರುದ್ರೇಗೌಡ, ಡಿ.ಎಸ್.ಅರುಣ್, ಜಿಲ್ಲಾ ವಾಣಿಜ್ಯ ಸಂಘದ ಅಧ್ಯಕ್ಷ ಎನ್. ಗೋಪಿನಾಥ್, ನೆಹರೂ ರಸ್ತೆ ವರ್ತಕರ ಸಂಘದ ಅಧ್ಯಕ್ಷ ಬಿ.ಎ.ರಂಗನಾಥ್ ಉಪಸ್ಥಿತರಿರುವರು. ಶಾಸಕ ಎಸ್.ಎನ್. ಚೆನ್ನಬಸಪ್ಪ ಅಧ್ಯಕ್ಷತೆ ವಹಿಸಲಿರುವರು ಎಂದರು.
ಕಿಶನ್ ಹ್ಯಾಂಡಿಕ್ರಾಫ್ಟ್ ಕಳೆದ 40 ವರ್ಷಗಳಿಂದ ಗ್ರಾಹಕರಿಗೆ ಹೆಚ್ಚಿನ ಸೇವೆ ನೀಡಿದೆ. ಕಿಶನ್ ಸಮೂಹ ಸಂಸ್ಥೆಗಳ ಸ್ಥಾಪಕ ಬೀಳಗಿ ರಾಮಣ್ಣನವರು ಶ್ರೇಷ್ಟ ಕರಕುಶಲಕರ್ಮಿಯಾಗಿದ್ದು, ಹಿಂದೆ ವಿಧಾನಸೌಧ ನಿರ್ಮಾಣದ ಸಮಯದಲ್ಲಿ ಸಭಾಪತಿಗಳ ಪೀಠ ತಯಾರಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಕೆತ್ತನೆಯ ಕೆಲಸಕ್ಕೆ ಹೆಸರು ತಂದುಕೊಟ್ಟಿರುವ ಶ್ರೀಗಂಧ ಸೇರಿದಂತೆ ಬೀಟೆ, ಹಿತ್ತಾಳೆ, ಕಂಚು, ಶಿವನಿ ಮರದ ವಿಗ್ರಹಗಳು, ಆಟಿಕೆಗಳು ಮುಂತಾದವುಗಳು ನಮ್ಮ ಶಾಪ್ನಲ್ಲಿ ದೊರೆಯಲಿವೆ. ಗ್ರಾಹಕರಿಗೆ ಮತ್ತಷ್ಟು ಹೆಚ್ಚಿನ ಸೇವೆಯನ್ನು ನಾವು ನೀಡಲು ಬದ್ಧರಾಗಿದ್ದೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ರವಿಕಿಶನ್, ಬಿ.ಆರ್.ಸುಭಾಷ್ ಇದ್ದರು.