ಶಿವಮೊಗ್ಗ,ಜ.೨೪: ಕ್ರೀಡಾ ಸ್ಪೂರ್ತಿ ಪ್ರತಿಯೊಬ್ಬರಲ್ಲೂ ಇರಬೇಕು. ಸೌಹಾರ್ದತೆಗಾಗಿ ಮತ್ತು ಶಾಂತಿಗಾಗಿ ಪ್ರತಿಯೊಬ್ಬರಲ್ಲೂ ಪರಸ್ಪರ ಪ್ರೀತಿಗಾಗಿ ಈ ಕ್ರೀಡಾ ಕೂಟವನ್ನು ಏರ್ಪಡಿಸಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಭಾಗವಹಿಸಿದ್ದು, ಸಂತೋಷ ತಂದಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್‌ಕುಮಾರ್ ಜಿ.ಕೆ. ಹೇಳಿದ್ದಾರೆ.


ಅವರು ಇಂದು ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಲೀಗ್ ಮಾದರಿ ಕ್ರಿಕೇಟ್ ಪಂದ್ಯಾವಳಿ ರಿಪಬ್ಲಿಕ್ ಡೇ ಕಪ್-೨೦೨೪ ಉದ್ಘಾಟಿಸಿ ಮಾತನಾಡಿದರು.


ರಾಗಿಗುಡ್ಡದ ನಿವಾಸಿಗಳಿಗಾಗಿ ರಾಗಿಗುಡ್ಡದ ಕ್ರಿಕೆಟ್ ಮೈದಾನದಲ್ಲಿ ಈ ಕ್ರೀಡಾ ಕೂಟ ಆಯೋಜಿಸಿದ್ದು, ಪೊಲೀಸ್ ಇಲಾಖೆ ಸಾರಥ್ಯ ವಹಿಸಿದೆ. ಪ್ರತಿಯೊಂದು ತಂಡದಲ್ಲಿ ಇಲಾಖಾ ವತಿಯಿಂದಲೇ ತಂಡದ ಸದಸ್ಯರನ್ನು ಆಯ್ಕೆ ಮಾಡಲಾಗಿದ್ದು, ೪ ಜನ ಹಿಂದೂ ಯುವಕರು, ೪ ಮುಸ್ಲಿಂ, ಓರ್ವ ಕ್ರಿಶ್ಚಿಯನ್, ೨ ಪೊಲೀಸ್, ಓರ್ವ ಪತ್ರಕರ್ತ ಒಳಗೊಂಡ ೧೧ ಜನರ ತಂಡ ರಚಿಸಿದ್ದು, ಈಗಾಗಲೇ ೯ ತಂಡಗಳು ಭಾಗವಹಿಸಿದ್ದು, ಪ್ರತಿ ತಂಡಕ್ಕೆ ೫ ಓವರ್ ನಿಗದಿಪಡಿಸಲಾಗಿದೆ. ಗೆದ್ದ ತಂಡಕ್ಕೆ ೧೦ ಸಾವಿರ ರೂ.ಗಳ ನಗದು ಮತ್ತು ಟ್ರೋಪಿಯನ್ನು ನೀಡುವುದಾಗಿ ಅವರು ತಿಳಿಸಿದರು.


ಈಗಾಗಲೇ ೧೫೦ ಕ್ರೀಡಾಸಕ್ತರು ನೊಂದಾಣಿ ಮಾಡಿಕೊಂಡಿದ್ದಾರ. ಕ್ರೀಡಾಪಟುಗಳು ಮತ್ತು ಕ್ರೀಡಾಭಿಮಾನಿಗಳಿಗೆ ಮಧ್ಯಾಹ್ನ ಊಟದ ವ್ಯವಸ್ಥೆಯನ್ನು ಸಹ ಮಾಡಲಾಗಿದೆ. ಇಂದು ಮತ್ತು ನಾಳೆ ೨ ದಿನಗಳ ಕಾಲ ಈ ಕ್ರೀಡಾ ಕೂಟ ನಡೆಯಲಿದ್ದು, ನಾಳೆ ಸಂಜೆ ೩ರಿಂದ ೬ ಗಂಟೆಯವರಗೆ ಸೆಮಿಫೈನಲ್ ಮತ್ತು ಫೈನಲ್ ಪಂದ್ಯಾವಳಿಗಳು ನಡೆಯಲಿದ್ದು, ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್. ಸಮಾರೋಪ

ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಈ ಸಂದರ್ಭದಲ್ಲಿ ಹಮ್ಮಿಕೊಳ್ಳಲಾಗಿದೆ. ಕೆಲವು ತಿಂಗಳ ಹಿಂದೆ ಈ ಪ್ರದೇಶದಲ್ಲಿ ಕಹಿಘಟನೆ ನಡೆದಿತ್ತು. ಸಾಮಾರಸ್ಯದ ಬದುಕಿಗಾಗಿ ಎಲ್ಲಾ ಧರ್ಮಿಯರು ಒಟ್ಟಾಗಿ ಇರುವ ಶಾಂತಿನಗರ ಮತ್ತು ರಾಗಿಗುಡ್ಡದ ಜನಸಾಮಾನ್ಯರಲ್ಲಿ ಸಹೋದರತೆಯ ಮನೋಭಾವನೆ ಬೆಳೆಯುವಂತಾಗಲಿ ಮತ್ತು ಎಲ್ಲಾರು ಸೌಹಾರ್ದಯುತವಾಗಿ ಬಾಳಬೇಕು ಎನ್ನುವ ಸದುದ್ದೇಶದಿಂದ ನೂತನ ಪ್ರಯೋಗವಾಗಿ ಪೊಲೀಸ್ ಇಲಾಖೆ ವಿಭಿನ್ನ ರೀತಿಯ ಈ ಕ್ರೀಡಾಕೂಟವನ್ನು ಆಯೋಜಿಸಿದ್ದು

, ಸಾರ್ವಜನಕರಿ ಪ್ರಶಂಸೆಗೆ ಪಾತ್ರವಾಗಿದೆ. ಉದ್ಘಾಟನಾ ಸಮಾರಂಭದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಅನಿಲ್‌ಕುಮಾರ್ ಭೂಮ್‌ರೆಡ್ಡಿ, ಕಾರ್ಯಪ್ಪ ಎ.ಜಿ., ಉಪಾಧೀಕ್ಷಕರಾದ ಸುರೇಶ್, ಪೊಲೀಸ್ ಅಧಿಕಾರಿಗಳಾದ ರವಿಪಾಟೀಲ್, ಕುಮಾರ್, ಸಿ.ಆರ್.ಕೊಪ್ಪನ್, ಟಿ.ಹರ್ಷ ಮತ್ತಿತರರು ಇದ್ದರು.

ರಾಜ್ಯ ವಿಧಾನ ಪರಿಷತ್ ವತಿಯಿಂದ ಕುವೆಂಪು ವಿಶ್ವವಿದ್ಯಾಲಯದ ಅಕಾಡೆಮಿಕ್ ಕೌನ್ಸಿಲ್ ಸದಸ್ಯರಾಗಿ ವಿಧಾನ ಪರಿಷತ್ ಶಾಸಕರಾದ ಡಿ ಎಸ್ ಅರುಣ್ ಮತ್ತು ಡಾ. ಸೂರಜ್ ರೇವಣ್ಣ ಅವರನ್ನು ಇಂದು ನಾಮನಿರ್ದೇಶನ ಮಾಡಿ ಆದೇಶ ಹೊರಡಿಸಿದೆ.

By admin

ನಿಮ್ಮದೊಂದು ಉತ್ತರ

You missed

error: Content is protected !!