ಶಿವಮೊಗ್ಗ : ಯಾರು ಸೋಲನ್ನು ಎದುರಿಸಲು ಸನ್ನದ್ದರಾಗಿದ್ದಾರೆ ಅವರನ್ನು ಎಂದಿಗೂ ಸೋಲಿಸಲು ಸಾಧ್ಯವಿಲ್ಲ ಎಂದು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ನಗರದ ರಾಷ್ಟ್ರೀಯ ಶಿಕ್ಷಣ ಸಮಿತಿ ವತಿಯಿಂದ ಸಂಸ್ಥೆಯ ಆಡಳಿತ ಕಛೇರಿ ಆವರಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಎನ್ಇಎಸ್ ವಿವಿಧ ಮಹಾವಿದ್ಯಾಲಯಗಳ ಕುವೆಂಪು ವಿಶ್ವವಿದ್ಯಾಲಯ ರ‍್ಯಾಂಕ್‌ ವಿಜೇತ ವಿದ್ಯಾರ್ಥಿಗಳ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಾಧನೆ ಎಂಬುದು ಸುಲಭವಾಗಿ ಸಿಗುವ ವಸ್ತುವಲ್ಲ. ಅದೊಂದು ಅವಮಾನಗಳ ಸೋಲಿನ ಕೂಪ. ಯಾರು ಎಲ್ಲವನ್ನು ಗಟ್ಟಿಯಾಗಿ ಮೆಟ್ಟಿ‌ ನಿಲ್ಲುತ್ತಾನೆ ಅಂತಹ ವ್ಯಕ್ತಿ ಸಾಧನೆಯ ಶಿಖರದಲ್ಲಿರುತ್ತಾನೆ.‌ ಇತಿಹಾಸದ ಪುಸ್ತಕಗಳನ್ನು ಓದುವುದಲ್ಲ ನಮ್ಮ ಸಾಧನೆ ಮುಂದೊಂದು ದಿನ ಅದೇ ಇತಿಹಾಸದ ಪುಟಗಳಲ್ಲಿ ರಾರಾಜಿಸಬೇಕು ಎಂದು ಹೇಳಿದರು.

ಗೆಲ್ಲುವ ಪ್ರಯತ್ನ ನಿರಂತರವಾಗಿರಲಿ. ಬದುಕಿನಲ್ಲಿ ಸೇರಬೇಕಾದ ಗುರಿಯ ಬಗ್ಗೆ ಸ್ಪಷ್ಟತೆ ಬೇಕು. ಇಲ್ಲವಾದಲ್ಲಿ ಸ್ಪಷ್ಟತೆ ಇದ್ದ ಮತ್ತೊಬ್ಬ ವ್ಯಕ್ತಿಯ ಅಡಿ ಗುಲಾಮರಾಗಿ ದುಡಿಯಬೇಕಾಗುತ್ತದೆ. ಕಷ್ಟಪಟ್ಟು ಓದಿ, ಇಷ್ಟ ಪಟ್ಟು ಓದಿ, ಒಂದಲ್ಲಾ ಒಂದು ದಿನ ನಿಮ್ಮ ಮೊಬೈಲ್ ಸಂಖ್ಯೆ ‌ನಿಮ್ಮ ಬ್ಯಾಂಕ್ ಉಳಿತಾಯದ ಸಂಖ್ಯೆಯಾಗಲಿ ಎಂದು ಹಾರೈಸಿದರು.

ಗೆಲುವಿಗೆ ನಮ್ಮ ಬಡತನ ಅಡ್ಡಬರಬಾರದು. ಬಡವನಾಗಿ ಹುಟ್ಟುವುದಕ್ಕಿಂತ ಬಡವನಾಗಿ ಸಾಯುವುದು ದೊಡ್ಡ ಅಪರಾಧ. ಸಮಾಜವನ್ನು ಯುವ ಸಮೂಹ ತಾತ್ಸಾರವಾಗಿ ತೆಗೆದುಕೊಂಡಿದೆ. ಸಾಧಕನಿಗೆ ಹಣ ಮತ್ತು ಪ್ರಭಾವಿ ಹಿನ್ನಲೆಗಳು ಬೇಕಿಲ್ಲ, ಪರಿಶ್ರಮ ಪಡುವ ಆತ್ಮಬಲ ಬೇಕಿದೆ. 

ಪೋಷಕರು ಮಕ್ಕಳನ್ನು ಅಂಧತ್ವದ ಪ್ರೀತಿಯಲ್ಲಿ ಮುಳುಗಿಸುತ್ತಿದ್ದಾರೆ. ಸೋಲಿನ ಅನುಭವಗಳನ್ನು ಕಲಿಸಿಕೊಡುವಲ್ಲಿ ವಿಫಲ ಹೊಂದುತ್ತಿದ್ದಾರೆ. ಜೀವನಾನುಭವವಿಲ್ಲದೆ ಮಕ್ಕಳು ಸೋಲಿಗೆ ಆತ್ಮಹತ್ಯೆಯೊಂದೆ ಪರಿಹಾರ ಎಂಬ ಭ್ರಮೆಗೆ ಜಾರುತ್ತಿದ್ದಾರೆ. ಮಕ್ಕಳಿಗೆ ಅನಗತ್ಯ ಒತ್ತಡ ಹೇರದೆಯೆ ಸೋಲು ಗೆಲುವುಗಳನ್ನು ಮುಕ್ತವಾಗಿ ಎದುರಿಸುವಂತೆ ಸನ್ನದ್ದಗೊಳಿಸಿ ಎಂದು ಸಲಹೆ ನೀಡಿದರು .

Click

ಇಂಗ್ಲೀಷ್ ಭಾಷೆಗಿಂತ ಮಾತೃಭಾಷೆಯಲ್ಲಿ ವಿದ್ಯಾರ್ಥಿಯ ಗ್ರಹಿಕೆಯ ಮಟ್ಟ ಮತ್ತು ವಿಷಯದ ಸ್ಪಷ್ಟತೆ ಹೆಚ್ಚಾಗಿರುತ್ತದೆ. ಹಾಗಾಗಿಯೇ ನನ್ನ ಎಲ್ಲಾ ಯೂಟ್ಯೂಬ್ ನಲ್ಲಿ ಪ್ರಸಾರವಾಗುವ ಪಾಠಗಳನ್ನು ಕನ್ನಡದಲ್ಲಿಯೇ ಉಪನ್ಯಾಸ ನೀಡಿರುತ್ತೇನೆ. ಉಚಿತವಾಗಿ ಇದರ ಲಾಭವನ್ನು ವಿದ್ಯಾರ್ಥಿಗಳು ಪಡೆಯಬಹುದಾಗಿದೆ.

ಕಾರ್ಯಕ್ರಮದಲ್ಲಿ ವಿಶ್ವವಾಣಿ ಹಾಗೂ ಜನಧ್ವನಿ ಪತ್ರಿಕೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಿದಾನಂದ ಕಡಲಾಸ್ಕರ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಜಿ.ಎಸ್.ನಾರಾಯಣರಾವ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿಗಳಾದ ಎಸ್.ಎನ್.ನಾಗರಾಜ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಪಾಧ್ಯಕ್ಷರಾದ ಸಿ.ಆರ್.ನಾಗರಾಜ, ಸಹ ಕಾರ್ಯದರ್ಶಿ ಡಾ.ಪಿ.ನಾರಾಯಣ್, ಖಜಾಂಚಿ ಡಿ.ಜಿ.ರಮೇಶ್, ನಿರ್ದೇಶಕರಾದ ಟಿ.ಆರ್.ಅಶ್ವಥನಾರಾಯಣ ಶೆಟ್ಟಿ, ಮಧುರಾವ್, ಹೆಚ್.ಸಿ.ಶಿವಕುಮಾರ್, ಕುಲಸಚಿವರಾದ ಪ್ರೊ.ಎನ್.ಕೆ.ಹರಿಯಪ್ಪ, ಶೈಕ್ಷಣಿಕ ಆಡಳಿತಾಧಿಕಾರಿ ಎ.ಎನ್.ರಾಮಚಂದ್ರ ಸೇರಿದಂತೆ ವಿವಿಧ ಕಾಲೇಜುಗಳ ಪ್ರಾಂಶುಪಾಲರು ಉಪಸ್ಥಿತರಿದ್ದರು. ಎನ್ಇಎಸ್ ಸಾರ್ವಜನಿಕ ಸಂಪರ್ಕಾಧಿಕಾರಿ ಸಿ.ಎಂ.ನೃಪತುಂಗ ನಿರೂಪಿಸಿದರು.

************

ನೀಟ್ ಪರೀಕ್ಷಾರ್ಥಿಗಳಿಗೆ ಪ್ರದೀಪ್ ಈಶ್ವರ್ ಟಿಪ್ಸ್

ಮೇ ತಿಂಗಳಲ್ಲಿ ನಡೆಯುವ ನೀಟ್ ಪರೀಕ್ಷೆಗೆ ಪಿಯುಸಿ ವಿದ್ಯಾರ್ಥಿಗಳು ಎನ್.ಸಿ.ಆರ್.ಟಿ ಅಧ್ಯಯನ ಸಮಾಗ್ರಿಗಳೊಂದಿಗೆ ಕನಿಷ್ಟ ಹದಿನಾಲ್ಕು ಘಂಟೆಗಳ ಸ್ವಯಂ ಅಧ್ಯಯನ ಮಾಡಬೇಕಿದೆ. ಶಿಕ್ಷಕರು ಹೇಳಿಕೊಟ್ಟ ವಿಷಯಗಳನ್ನು ಮೆಲುಕು ಹಾಕಿ. ನೀಟ್ ಪರೀಕ್ಷೆಯಲ್ಲಿ ಭೌತಶಾಸ್ತ್ರ ಜೀವಶಾಸ್ತ್ರ ರಸಾಯನಶಾಸ್ತ್ರಕ್ಕೆ ಹೆಚ್ಚು ಒತ್ತು ನೀಡಲಾಗಿದ್ದು ಸಿಲಬಸ್ ಪ್ರಕಾರವೇ ಓದಿ. ನೀಟ್ ಪರೀಕ್ಷೆಯಲ್ಲಿ ಋಣಾತ್ಮಕ ಅಂಕವಿದ್ದು ಎಚ್ಚರದಿಂದ ಉತ್ತರ ಬರೆಯಿರಿ. ಈ ಬಾರಿ ಐದುನೂರ ಅರವತ್ತು ಅಂಕಕ್ಕೆ ಮೆಡಿಕಲ್ ಸೀಟು ಸಿಗುತ್ತದೆ. ವಿಶೇಷವಾಗಿ ಬಯೋ ಕೆಮಿಸ್ಟ್ರಿ ವಿಷಯದ ಮೇಲೆ ಹೆಚ್ಚು ಅಧ್ಯಯನ ನಡೆಸಿ ಎಂದು ಹೇಳಿದರು.

*************

ಎನ್ಇಎಸ್ ಸಂಸ್ಥೆಗೆ 22 ರ‍್ಯಾಂಕ್‌ ಗಳ ಗರಿ

ರಾಷ್ಟ್ರೀಯ ಶಿಕ್ಷಣ ಸಮಿತಿಯ ವಿವಿಧ ಪದವಿ ಕಾಲೇಜುಗಳಿಗೆ ಕುವೆಂಪು ವಿಶ್ವವಿದ್ಯಾಲಯದ 22 ರ‍್ಯಾಂಕ್‌ ಗಳು ಲಭಿಸಿದ್ದು ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಎ.ಟಿ.ಎನ್.ಸಿ.ಸಿ ಕಾಲೇಜಿನ ಬಿಕಾಂ ವಿಭಾಗದಲ್ಲಿ ಹರ್ಷಿತಾ.ಜಿ (ಪ್ರಥಮ ರ‍್ಯಾಂಕ್), ಪೂರ್ಣಿಮಾ ಎಸ್ (ಎರಡನೇ ರ‍್ಯಾಂಕ್), ಸುಚಿತ್ರ ಎಸ್ (ಐದನೇ ರ‍್ಯಾಂಕ್), ಮೌರಾಸೆಲೆಸ್ (ಆರನೇ ರ‍್ಯಾಂಕ್), ಶಿಜಾಃನ ನಾಜೀರ್ (ಆರನೇ ರ‍್ಯಾಂಕ್), ಬಿ.ಬಿ ಆಯಿಷ (ಎಂಟನೇ ರ‍್ಯಾಂಕ್) ಪಡೆದಿದ್ದಾರೆ. ಬಿಬಿಎ ವಿಭಾಗದಲ್ಲಿ ಏಕ್ತಾ ಜೈನ್ (ಐದನೇ ರ‍್ಯಾಂಕ್),ಫೌಜಿಃಯಾ (ಆರನೇ ರ‍್ಯಾಂಕ್),ಚಿರಾಗ್ ಜೈನ್ (ಏಳನೇ ರ‍್ಯಾಂಕ್),ಶ್ರೇಯಾ ಎಸ್.ಹೆಚ್ (ಏಳನೇ ರ‍್ಯಾಂಕ್) ————————————————————————–ಎನ್ಇಎಸ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ ಕಾಲೇಜಿನ ಬಿಬಿಎ ವಿಭಾಗದಲ್ಲಿ ನಮ್ರತಾ ಟಿ.ರೆಡ್ಡಿ (ಪ್ರಥಮ ರ‍್ಯಾಂಕ್), ಪ್ರತೀಕ್ಷಾ ಪಿ.ಕೆ (ಎರಡನೇ ರ‍್ಯಾಂಕ್), ಪ್ರಿಯಾಂಕ ವೈ (ಮೂರನೇ ರ‍್ಯಾಂಕ್),ರಕ್ಷಿತಾ ಎಸ್.ಆರ್ (ಎಂಟನೇ ರ‍್ಯಾಂಕ್) ಪಡೆದಿದ್ದು, ಬಿಕಾಂ ವಿಭಾಗದಲ್ಲಿ 

ಹರ್ಷಿತಾ ಹೆಚ್.ಪಿ (ನಾಲ್ಕನೇ ರ‍್ಯಾಂಕ್)

ಮೋಹಿತ್ ಡಿ (ಒಂಬತ್ತನೆ ರ‍್ಯಾಂಕ್) ಪಡೆದಿದ್ದಾರೆ.

———————————————————————–ಎಸ್.ಆರ್.ಎನ್.ಎಂ ಕಾಲೇಜಿನ ಬಿಎಸ್ಸಿ ವಿಭಾಗದಲ್ಲಿ ಸೃಷ್ಟಿ ಆರ್. (ಐದನೇ ರ‍್ಯಾಂಕ್),ಜೆನ್ನಿಫರ್ ಲಾರೆನ್ಸ್ (ಹತ್ತನೇ ರ‍್ಯಾಂಕ್) ಹಾಗೂ ಬಿಸಿಎ ವಿಭಾಗದಲ್ಲಿ ಗಗನ ಟಿ. (ಐದನೇ ರ‍್ಯಾಂಕ್), ರಾಧಿಕಾ ಡಿ. (ಒಂಬತ್ತನೇ ರ‍್ಯಾಂಕ್) ಪಡೆದಿದ್ದಾರೆ.

———————————————————————–ಕೋಣಂದೂರಿನ ಶರಾವತಿ ಪ್ರಥಮ ದರ್ಜೆ ಕಾಲೇಜಿನ ಬಿಎ ವಿಭಾಗದ ವಿದ್ಯಾರ್ಥಿನಿ ಭೂಮಿಕಾ ಡಿ (ಐದನೇ ರ‍್ಯಾಂಕ್‌)—————————————————————————- ಕಮಲಾ ನೆಹರು ಮಹಿಳಾ ಕಾಲೇಜಿನ ಬಿಎ ವಿಭಾಗದ ವಿದ್ಯಾರ್ಥಿನಿ ನಯನಶ್ರೀ.ಜಿ (ಎಂಟನೇ ರ‍್ಯಾಂಕ್‌) ಪಡೆದಿದ್ದಾರೆ.

By admin

ನಿಮ್ಮದೊಂದು ಉತ್ತರ

You missed

error: Content is protected !!