ಅಯೋಧ್ಯೆ ಶ್ರೀರಾಮ ದೇವರ ಪ್ರತಿಷ್ಠಾಪನೆಯ ಸಂಭ್ರಮದ ಅಂಗವಾಗಿ ಶಿವಮೊಗ್ಗ ಜಯನಗರದ ಶ್ರೀಸೀತಾ ರಾಮ ಮಂದಿರ ಟ್ರಸ್ಟ್ ವತಿಯಿಂದ ಜ.೨೨ರಂದು ವಿಶೇಷ ಪೂಜೆ ಹಾಗೂ ರಾಜಬೀದಿ ಉತ್ಸವವನ್ನು ಸಂಭ್ರಮ ದಿಂದ ಆಚರಿಸಲಾಗುವುದು ಎಂದು ರಾಮಭಕ್ತ ಬಿ.ಎ.ರಂಗನಾಥ್ ಹಾಗೂ ಪ್ರಧಾನ ಅರ್ಚಕ ಸತೀಶ್ ಅಯ್ಯಂಗಾರ್ ಹೇಳಿದರು.


ಅವರು ಇಂದು ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿ, ಸುಮಾರು ೫೦೦ ವರ್ಷಗಳ ಭಾರತೀಯರ ಸತತ ಹೋರಾಟ ಹಾಗೂ ಬಲಿದಾನದ ಫಲವಾಗಿ ಇಂದು ಶ್ರೀರಾಮನ ಭವ್ಯ ನಿರ್ಮಾಣ ಜ.೨೨ ರಂದು ಶ್ರೀರಾಮರ ಪ್ರತಿಷ್ಠಾಪನೆ ಯೊಂದಿಗೆ ಲೋಕಾರ್ಪಣೆಗೊಳ್ಳಲಿದೆ. ಇದೊಂದು ಅಭೂತಪೂರ್ವ ಸಂಭ್ರ ಮದ ಅಮೃತ ಘಳಿಗೆಯಾಗಿದೆ. ಇದು ನಮ್ಮ ಪೂರ್ವ ಸುಕೃತವು ಆಗಿದೆ.

ಇಂತಹ ಕಾರ್ಯಕ್ರಮಕ್ಕೆ ಆಯೋಧ್ಯೆಗೆ ಹೋಗಿ ಬರುವುದು ಕಷ್ಟವಾಗುತ್ತದೆ. ಆದ್ದರಿಂದ ನಾವು ಎಲ್ಲಿದ್ದಿವಿಯೋ ಅಲ್ಲಿಯೇ ಶ್ರೀರಾಮನನ್ನು ಆರಾಧಿಸಬೇಕಾಗಿದೆ ಎಂದರು.
ಇದರ ಅಂಗವಾಗಿ ಶ್ರೀರಾಮಮಂದಿರದ ಟ್ರಸ್ಟ್ ಜ.೨೨ರ ಬೆಳಿಗ್ಗೆ ಅಭಿಷೇಕ, ಕಿರೀಟಧಾರಣೆ, ಉತ್ಸವವನ್ನು ಹಮ್ಮಿಕೊಂಡಿದೆ.


ಬಹಳ ಮುಖ್ಯವಾಗಿ ಶ್ರೀರಾಮಮಂದಿರದಿಂದ ಸಂಜೆ ೬.೩೦ಕ್ಕೆ ರಾಜಬೀದಿ ಉತ್ಸವವನ್ನು ಹಮ್ಮಿಕೊಳ್ಳ ಲಾಗಿದೆ. ಈ ಉತ್ಸವದಲ್ಲಿ ಕೋಟೆ ಶ್ರೀ ಸೀತಾರಾಮಂ ಜನೇಯ ದೇವಸ್ಥಾನ, ಜಯನಗರದ ರಾಮಮಂದಿರ, ಜೆ.ಸಿ. ನಗರ ರಾಮಮಂದಿರ, ಬೊಮ್ಮನಕಟ್ಟೆ, ಬಾಪೂಜಿ ನಗರ, ದುರ್ಗಿಗುಡಿ ರಾಮಮಂದಿರಗಳ ದೇವರುಗಳು ಉತ್ಸವದಲ್ಲಿ ಪಾಲ್ಗೊಳ್ಳಲಿವೆ ಎಂದರು.


ರಾಜಬೀದಿ ಉತ್ಸವದಲ್ಲಿ ನಾದಸ್ವರ, ಡೊಳ್ಳು ಕುಣಿತ, ವೀರಗಾಸೆ, ಉಡುಪಿ ಚೆಂಡೆ, ಕೊಲ್ಲಾಟ, ವೇದಘೋಷ, ವೇಷಭೂಷಣ, ಭಜನೆ ಮುಂತಾದ ವುಗಳು ನಡೆಯುತ್ತವೆ. ರಾಜಬೀದಿ ಸಾಗುವ ದಾರಿಗಳಲ್ಲಿ ಪ್ರಮುಖವಾಗಿ ಮೆಟ್ರೋ ಆಸ್ಪತ್ರೆ ಬಳಿ, ಉಷಾ ನರ್ಸೀಂಗ್ ಹೋಂ ಬಳಿ ಹಾಗೂ ವಿನಾಯಕ

ಬಡಾವಣೆಗಳಲ್ಲಿ ವಿಶೇಷ ದೀಪದ ವ್ಯವಸ್ಥೆ ಮಾಡಲಾಗಿದೆ. ವಿನಾಯಕ ನಗರದದಲ್ಲಿ ಸುಮಾರು ೫ ಸಾವಿರ ದೀಪಗಳನ್ನು ಹಚ್ಚಲಾಗುತ್ತದೆ. ನಂತರ ನವ್ಯಶ್ರೀ ಸಭಾಂಗಣದಲ್ಲಿ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ. ಈ ಮಹತ್ವದ ರಾಜಬೀದಿ ಉತ್ಸವದಲ್ಲಿ ಹಾಗೂ ವಿಶೇಷ ಪೂಜೆಗಳಲ್ಲಿ ಶ್ರೀರಾಮ ಭಕ್ತರು, ಉಪಾಸಕರು, ಆರಾಧಕರು, ಕುಟುಂಬ ಸಮೇತರಾಗಿ ಭಾಗವಹಿಸಿ ಶ್ರೀರಾಮಚಂದ್ರನ ಸಂಪೂರ್ಣ ಕೃಪೆಗೆ ಪಾತ್ರರಾಗಬೇಕು ಎಂದು ವಿನಂತಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಶೃಂಗೇರಿ ನಾಗರಾಜ್, ದಿನೇಶ್ ಶೇಟ್, ನವ್ಯಶ್ರೀನಾಗೇಶ್, ರಾಜೇಂದ್ರ, ಚಂದ್ರಶೇಖರ್, ಸಂತೋಷ್ ಬಳ್ಳಕೆರೆ ಮುಂತಾದವರು ಇದ್ದರು.

By admin

ನಿಮ್ಮದೊಂದು ಉತ್ತರ

You missed

error: Content is protected !!