ಮೊದಲ ಬಾರಿ ನಾಯಕ ನಟನಾಗಿ ಅಭಿ ನಯಿಸಿರುವ ಹಾಸ್ಯ ನಟ ಚಿಕ್ಕಣ್ಣ ಅಭಿನಯದ ಉಪಾಧ್ಯಕ್ಷ ಚಿತ್ರ ಜ.೨೬ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ದೇಶಕ ಅನಿಲ್‌ಕುಮಾರ್ ಹೇಳಿದರು.
ಅವರು ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿಕ್ಕಣ್ಣ ಸುಮಾರು ೨೫೦ ಚಿತ್ರಗಳಲ್ಲಿ
ನಟಿಸಿದ್ದಾರೆ. ಅತ್ಯಂತ ಜನಪ್ರಿಯ ನಟರಾಗಿದ್ದಾರೆ. ಮುಗ್ಧತೆಯನ್ನು ಹೊಂದಿರುವ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ಅವರ ಬಹು ನಿರೀಕ್ಷಿತ ಚಿತ್ರ ಉಪಾಧ್ಯಕ್ಷ ಈ ತಿಂಗಳ ೨೬ಕ್ಕೆ ಬಿಡುಗಡೆ ಯಾಗಲಿದೆ. ಕನ್ನಡಿಗರು ಚಿತ್ರವನ್ನು ನೋಡಿ, ಪ್ರೋತ್ಸಾಹಿಸಬೇಕು ಎಂದರು.
ಸುಮಾರು ೧೦ ವರ್ಷಗಳ ಹಿಂದೆ ಹಾಸ್ಯ ನಟ ಶರಣ್ ಅವರ ಅಭಿನಯದ ಅಧ್ಯಕ್ಷ ಚಿತ್ರ ಅತ್ಯಂತ ಯಶಸ್ವಿಯಾಕಿತ್ತು, ಅದರ ಮುಂದುವರೆದ ಭಾಗವಾಗಿ ಉಪಾಧ್ಯಕ್ಷ ಚಿತ್ರ ತೆರೆಕಾಣಲಿದೆ. ಸ್ಮಿತಾ ಉಮಾಪತಿ ಇದರ ನಿರ್ಮಾಪಕರಾಗಿದ್ದಾರೆ. ಅರ್ಜುನ್ ಜನ್ಯ ಸಂಗೀತ ಒದಗಿಸಿದ್ದು, ಚಿತ್ರದ ಎಲ್ಲಾ ಹಾಡುಗಳು ಇಂಪಾಗಿದೆ. ಮನೋರಂ ಜನೆಯ ಜೊತೆಗೆ ಒಂದು ಒಳ್ಳೆಯ ಲವ್‌ಸ್ಟೋರಿ ಕೂಡ ಇದರಲ್ಲಿ ಇದೆ.
ಇಡೀ ಮನೆಮಂದಿ ಕುಳಿತು ನೋಡಬಹುದಾದ ಚಿತ್ರವಿದು, ಇಡೀ ಚಿತ್ರವೇ ಹಾಸ್ಯಮಯ ವಾಗಿದೆ ಎಂದರು.
ನಾಯಕ ಚಿಕ್ಕಣ್ಣ ಮಾತನಾಡಿ, ನಾನು ಇದುವರೆಗೂ ನೂರಾರು ಚಿತ್ರಗಳನ್ನು ಮಾಡಿದ್ದೇನೆ. ಆದರೆ ನಾಯಕನಾಗಿ ಇದೇ ಮೊದಲ ಬಾರಿಗೆ ನಿಮ್ಮ ಮುಂದೆ ಬಂದಿ ದ್ದೇನೆ. ಇದೊಂದು ಹಳ್ಳಿಯ ಸೊಗಡಿನ ಕತೆ, ಒಂದು ಒಳ್ಳೆ ಸಿನಿಮಾವನ್ನು ಕನ್ನಡಿಗರೇ ನಿರ್ಮಿಸಿ ಅಭಿನಯಿಸಿ ನಿಮ್ಮ ಮುಂದೆ ತಂದಿದ್ದಾರೆ. ಈಗಾಗಲೇ ಟೀಜರ್ ಮತ್ತು ಟ್ರೈಲರ್ ಹಾಡುಗಳು ಜನರ ಮನ ಗೆದ್ದಿವೆ. ಎಂದರು.
ನಾಯಕಿ ಮಲೈಕ ಮಾತನಾಡಿ, ಇದು ನನ್ನ ಮೊದಲ ಚಿತ್ರವಾಗಿದೆ. ಆದರೆ, ಕಿರುತೆರೆಯಲ್ಲಿ ಅಭಿನಯಿಸಿದ ಅನುಭವವಿದೆ. ಈ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ ಎಂದರು.
ನಟ ಧರ್ಮಣ್ಣ ಮಾತನಾಡಿ, ಕಷ್ಟಗಳ ನಡುವೆ ಅರಳಿದ ಹುಡುಗ ಈ ಚಿಕ್ಕಣ್ಣ, ಅದೇ ಮುಗ್ಧತೆ, ವಿನಯ ಈಗಲೂ ಇದೆ ಎಂದರು.