ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಸಾಗರ ಕ್ಷೇತ್ರದ ವಿವಿಧ ಅಭಿವೃದ್ದಿ ಕಾಮಗಾರಿಗಾಗಿ ೧೯೮ ಕೋಟಿ ರೂ. ಅನುದಾನ ಮಂಜೂರಾ ಗಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಗುರುವಾರ ಸಾಗರ ಕ್ಷೇತ್ರದ ಅಭಿವೃದ್ದಿಗೆ ಸಂಬಂಧಪಟ್ಟಂತೆ ಪತ್ರಕರ್ತರ ಜೊತೆ ಮಾತನಾಡಿದ ಅವರು, ವಿಪಕ್ಷದವರು ಅಭಿವೃದ್ದಿಗೆ ಹಣ ಬಂದಿಲ್ಲ ಎಂದು ಜನರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ಹೇಳಿದರು.

ಮುಖ್ಯಮಂತ್ರಿಗಳು ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳಿಗೆ ಹೆಚ್ಚುವರಿ ಯಾಗಿ ೨೫ ಕೋಟಿ ರೂ. ಅನುದಾನ ನೀಡಿದ್ದಾರೆ. ನಗರೋತ್ಥಾನ ಯೋಜ ನೆಗೆ ಹೆಚ್ಚಿನ ಹಣ ಮಂಜೂರು ಮಾಡಿ ಸಲಾಗಿದೆ. ತಾಲ್ಲೂಕಿನ ಆಸ್ಪತ್ರೆಗಳಲ್ಲಿನ ಮೂಲಭೂತ ಸೌಲಭ್ಯಕ್ಕಾಗಿ ೧೪೨ ಲಕ್ಷ ರೂ., ಆಸ್ಪತ್ರೆಗಳ ಅಭಿವೃದ್ದಿಗೆ ೪.೧೬ ಕೋಟಿ ರೂ., ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ೨.೫೦ ಕೋಟಿ ರೂ.,

ಸಣ್ಣ ನೀರಾವರಿ ವಿಭಾಗಕ್ಕೆ ೧೧.೫೦ ಕೋಟಿ ರೂ., ಆರ್.ಟಿ.ಓ. ಕಚೇರಿ ಆವರಣ ದಲ್ಲಿ ಡ್ರೈವಿಂಗ್ ಟ್ರ್ಯಾಕ್ ನಿರ್ಮಾಣಕ್ಕೆ ೫.೬೫ ಕೋಟಿ ಸೇರಿದಂತೆ ಬೇರೆಬೇರೆ ವಿಭಾಗದಲ್ಲಿ

ಹಣ ಮಂಜೂರಾಗಿದ್ದು ಕಾಮಗಾರಿ ನಡೆಯುತ್ತಿದೆ. ನಗರೋ ತ್ಥಾನ ಸೇರಿದಂತೆ ನಗರ ಪ್ರದೇಶದ ಅಭಿವೃದ್ದಿಗೆ ಈತನಕ ೫೦ ಕೋಟಿ ರೂ. ಮಂಜೂರು ಮಾಡಿಸಿದ್ದೇನೆ. ಸಬ್ ಜೈಲ್ ಕಾಂಪೋಂಡ್ ನಿರ್ಮಾಣಕ್ಕೆ ೧.೫೦ ಕೋಟಿ ರೂ. ಬಿಡುಗಡೆಯಾಗಿದೆ ಎಂದರು.
ಸುದ್ದಿಗೋಷ್ಟಿಯಲ್ಲಿ ಕಾಂಗ್ರೆಸ್ ಮುಖಂಡರಾದ ಕೆ.ಹೊಳೆಯಪ್ಪ, ಗಣಪತಿ ಮಂಡಗಳಲೆ, ಸುರೇಶಬಾಬು, ಸೋiಶೇಖರ ಲ್ಯಾವಿಗೆರೆ, ಚೇತನ ರಾಜ್ ಕಣ್ಣೂರು, ತಾರಾ ಮೂರ್ತಿ, ಗಿರೀಶ್ ಕೋವಿ ಇದ್ದರು.