ನಾಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಾಸನಕೊಡಿಗೆ ಗ್ರಾಮದಲ್ಲಿ ನವ ವಿವಾ ಹಿತೆ ಶರ್ಮಿತಾ ಬಿ.ಯು. (೨೪) ಅವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಬುಧವಾರ ಪತ್ತೆಯಾಗಿದೆ.

ಬಿಜ್ಜಳ ಗ್ರಾಮದ ಶರ್ಮಿತಾ ೨೦೨೩ರ ಮಾರ್ಚ್ ತಿಂಗಳಿನಲ್ಲಿ ದಾಸನಕೊಡಿಗೆ ಗ್ರಾಮದ ವಿದ್ಯಾರ್ಥ್ ಎಂಬ ಯುವಕ ನನ್ನು ಪ್ರೀತಿಸಿ ವಿವಾಹವಾಗಿದ್ದರು.

ಸೋಮೇಶ್ವರ ವನ್ಯಜೀವಿ ಅಭಯಾ ರಣ್ಯದಲ್ಲಿ ರಾತ್ರಿ ಪಾಳಿಯ ಕೆಲಕ್ಕೆ ಪತಿ ತೆರಳಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಪತಿಯ ಮನೆಯಲ್ಲಿ ಅತ್ತೆ, ಮಾವ ಇದ್ದರು.

ರಾತ್ರಿ ಮಲಗಲು ಮನೆಯ ಉಪ್ಪರಿಗೆ ಕೊಠಡಿಗೆ ತೆರಳಿದ್ದ ಶರ್ಮಿತಾ ಬೆಳಿಗ್ಗೆ ಬಾಗಿಲು ತೆರೆದಿರಲಿಲ್ಲ. ಅನುಮಾನದಿಂದ ಮನೆಯ ಕೆಲಸದವರು ಕಿಟಕಿಯಿಂದ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ತಕ್ಷಣ ಯುವತಿಯ ಪಾಲಕರಿಗೆ ವಿಷಯ ತಿಳಿಸಿದ್ದಾರೆ.

ಶರ್ಮಿತಾ ಪಾಲಕರು ಬಂದ ನಂತರ ಕೊಠಡಿಯ ಬಾಗಿಲು ಒಡೆಯಲಾಗಿದೆ. ಮೃತದೇಹದ ಬಳಿ ಮರಣಪತ್ರ ಲಭ್ಯವಾ ಗಿದೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಆತ್ಮ ಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಬರೆ ಯಲಾಗಿದೆ ಎನ್ನಲಾಗಿದೆ. ಆಗುಂಬೆ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ. ಜೆಸಿ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಯಿತು. ತಹಶೀಲ್ದಾರ್ ಜಕ್ಕನಗೌಡರ್ ಇದ್ದರು.