ಸಾಗರ: ಪರಿಣಿತಿ ಕಲಾಕೇಂದ್ರದ 9ನೇ ವರ್ಷದ ಸಂಭ್ರಮದ ಪ್ರಯುಕ್ತ ಸಾಗರದ ಗಾಂಧಿ ಮೈದಾನದಲ್ಲಿ ಪರಿಣಿತಿ ಕಲಾಕೇಂದ್ರದ ವತಿಯಿಂದ ಡಿಸೆಂಬರ್ 16 ಮತ್ತು 17ರಂದು ಸಂಜೆ 5ಕ್ಕೆ “9ನೇ ವರ್ಷದ ಪರಿಣಿತಿ ರಾಷ್ಟ್ರೀಯ ನೃತ್ಯ, ಯೋಗ ಹಾಗೂ ಸಂಗೀತೋತ್ಸವ” ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಯೋಗದಿಂದ ಆಯೋಜಿಸಿರುವ 9ನೇ ವರ್ಷದ ಪರಿಣಿತಿ ರಾಷ್ಟ್ರೀಯ ನೃತ್ಯ, ಯೋಗ ಹಾಗೂ ಸಂಗೀತೋತ್ಸವದಲ್ಲಿ ದೇಶದ ವಿವಿಧ ರಾಜ್ಯಗಳಿಂದ ಹೆಸರಾಂತ ಕಲಾವಿದರು ಆಗಮಿಸಿ ಪ್ರದರ್ಶನ ನೀಡಲಿದ್ದಾರೆ.

ರಾಷ್ಟ್ರೀಯ ನೃತ್ಯ ಸಂಗೀತೋತ್ಸವ ಕಾರ್ಯಕ್ರಮದಲ್ಲಿ ವಿವಿಧ ರಾಜ್ಯಗಳ ಕಲಾವಿದರು ಪ್ರದರ್ಶನ ನೀಡುವುದರಿಂದ ವಿವಿಧ ರಾಜ್ಯಗಳ ಕಲಾ ಪ್ರಕಾರಗಳ ಪರಿಚಯ ಆಗುತ್ತದೆ. ಸ್ಥಳೀಯ ಪ್ರತಿಭೆಗಳಿಗೂ ರಾಷ್ಟ್ರೀಯ ಮಟ್ಟದ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಲು ವೇದಿಕೆ ಕಲ್ಪಿಸಲು ಅವಕಾಶ ನೀಡಲು ಸಾಧ್ಯವಾಗುತ್ತದೆ.

ಡಿಸೆಂಬರ್ 16 ಮತ್ತು 17ರ  ಎರಡು ದಿನಗಳ ಕಾರ್ಯಕ್ರಮದಲ್ಲಿ  ಭಾರತದ ಪ್ರಸಿದ್ಧ ನೃತ್ಯ ತಂಡಗಳಾದ ಬೆಂಗಳೂರಿನ ಮುದ್ರಿಕಾ ಫೌಂಡೇಶನ್ ಗುರು ಕರ್ನಾಟಕ ಕಲಾಶ್ರೀ ಮಿನಲ್ ಪಭು ತಂಡದಿಂದ ಭರತನಾಟ್ಯ, ನೃತ್ಯಾಂಜಲಿ ಸಂಸ್ಥೆಯ ಗುರು ಕರ್ನಾಟಕ ಕಲಾಶ್ರೀ ಪೂರ್ಣಿಮಾ ತಂಡದಿಂದ ಭರತನಾಟ್ಯ, ವಿದೂಷಿ ಅದಿತಿ ಪ್ರಹ್ಲಾದ್ ಬೆಂಗಳೂರು ತಂಡದಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಲಿದೆ.

ಕಾಸರಗೋಡಿನ ಗೋಪಾಲ ಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘದಿಂದ ಬೊಂಬೆಯಾಟ ,ಪಶ್ಚಿಮ ಬಂಗಾಳದ ರಾಜೀಬ್ ಭಟ್ಟಾಚಾರ್ಯ ಅವರಿಂದ ಓಡಿಸ್ಸಿ ನೃತ್ಯ, ವಿದೂಷಿ ಸುಶ್ಮಿತಾ ಬ್ಯಾನರ್ಜಿ ತಂಡದಿಂದ ಕಥಕ್ ನೃತ್ಯ, ಕೇರಳದ ಪ್ರಸಿದ್ಧ ಗುರು ಕಲಾನಿಲಯಮ್ ವಾಸುದೇವನ್ ತಂಡದಿಂದ ಕಥಕ್ಕಳಿ, ಕಲಾಮಂಡಲಮ್ ಡಾ. ಸೌಮ್ಯ ಹಾಗೂ ಲತಿಕಾ ಅವರಿಂದ ಮೋಹಿನಿಅಟ್ಟಂ ಹಾಗೂ ಶ್ರೀ ಭಾರತೀ ಕಲಾವಿದರು ಹೊಸೂರು ತಂಡದಿಂದ ಯಕ್ಷಗಾನ ಪ್ರದರ್ಶನ ಇರಲಿದೆ.

ಎರಡು ದಿನಗಳ ಕಾರ್ಯಕ್ರಮದಲ್ಲಿ ನೂರಾರು ಕಲಾವಿದರು ನೃತ್ಯ ಪ್ರದರ್ಶನ ನಡೆಸಿಕೊಡಲಿದ್ದಾರೆ ಎಂದು ಪರಿಣಿತಿ ಕಲಾಕೇಂದ್ರದ ಕಾರ್ಯದರ್ಶಿ ವಿದ್ವಾನ್ ಎಂ.ಗೋಪಾಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

By admin

ನಿಮ್ಮದೊಂದು ಉತ್ತರ

error: Content is protected !!