ಶಿವಮೊಗ್ಗ, ನ.01:
ಶಿವಮೊಗ್ಗ ನಗರದ ಮಹಾನಗರ ಪಾಲಿಕೆ ವ್ಯಾಪ್ತಿಯ ಎಲ್ಲಾ ಶೌಚಾಲಯವನ್ನು ಶಿವಮೊಗ್ಗ ಮಹಾನಗರ ಪಾಲಿಕೆ ಪಟ್ಟಣ ಮಾರಾಟ ಸಮಿತಿಯ ಸದಸ್ಯ ಚನ್ನವೀರಪ್ಪ ಗಾಮನಗಟ್ಟಿ, ಹಾಗೂ ಪಾಲಿಕೆ ಅಧಿಕಾರಿಗಳೊಂದಿಗೆ ವೀಕ್ಷಣೆ ಮಾಡಲಾಯಿತು.


ನಗರದ ಎಲ್ಲಾ ಕಡೆ ಕನ್ಸೂರೆನ್ಸ್ ಗಳು ಅಭಿವೃದ್ಧಿ ಮಾಡಲಾಗುತ್ತಿದೆ, ಎಲ್ಲೂ ಸಾರ್ವಜನಿಕರಿಗೆ ಮಲಮೂತ್ರ ವಿಸರ್ಜನೆಗೆ ಜಾಗವಿಲ್ಲ ಆದ್ದರಿಂದ ಜನದಟ್ಟನೆ ಪ್ರದೇಶದ 100 ಮೀಟರ್ ಒಂದರಂತೆ ಸಾರ್ವಜನಿಕ ಶೌಚಾಲಯವನ್ನು ನಿರ್ಮಿಸುವಂತೆ
ಹಿಂದಿನ ಆಯುಕ್ತರಾದ ಚಾರುಲತಾ ಸೋಮಲ್ ಹಾಗೂ ಚಿದಾನಂದ ವಠಾರೆ ಅವರಿಗೆ ಮನವಿ ನೀಡುತ್ತಾ ಬಂದಿದ್ದು, ನಗರದಲ್ಲಿ ಕೂಲಿ ಕಾರ್ಮಿಕರು ಬರುವರು ಹೆಚ್ಚು ಅವರಿಗೆ ಉಚಿತ ಶೌಚಾಲಯ ವಿರಲಿ ಇಲ್ಲದಿದ್ದಲ್ಲಿ ಅವರು ಎಲ್ಲಿಂದರಲ್ಲಿ ಮಲಮೂತ್ರ ವಿಸರ್ಜನೆ ಮಾಡುವರೆಂದು ಮನವಿ ಮಾಡಲಾಯಿತು, ಇಂದಿನ ಅಯುಕ್ತ ಕೆ ಮಾಯಣ್ಣ ಗೌಡ ರವರಿಗೂ, ಮನವಿ ನೀಡಲಾಗಿತ್ತು, ಅದನ್ನು ಸ್ವೀಕರಿಸಿ ನಗರದಲ್ಲಿರುವ ಪಾಲಿಕೆಯ ಎಲ್ಲಾ ಶೌಚಾಲಯವನ್ನು ಸಾರ್ವಜನಿಕರಿಗೆ ಉಚಿತ ಶೌಚಾಲಯವಾಗಿ ಬಳಕೆಗೆ ನೀಡಲಾಗುವುದು ಸ್ವಚ್ಛತೆಗಾಗಿ ಟೆಂಡರ್ ಕರೆದು ಸ್ವಚ್ಛತೆ ಮಾಡಿಸಲಾಗುವುದು ಎಂದು ತಿಳಿಸಿದ್ದರು.


ಅದರಂತೆ ನಗರದಲ್ಲಿರುವ ಪಾಲಿಕೆಯ 20 ಶೌಚಾಲಯಗಳಲ್ಲಿ,
1)ಜೈಲು ಕಾಂಪೌಂಡ್ ಪಕ್ಕದಲ್ಲಿರುವ ಶೌಚಾಲಯ,
2)ಉಷಾ ನರ್ಸಿಂಗ್ ಹೋಮ್ ಮುಂಭಾಗ,
3)ಭೀಮೇಶ್ವರ ದೇವಸ್ಥಾನ ಎದುರು,
4)ಗೋಪಾಲ ಲಾಸ್ಟ್ ಬಸ್ ಸ್ಟಾಪ್ ಶೌಚಾಲಯ,
5)ಕರ್ನಾಟಕ ಸಂಘ ಡಬ್ಬಲ್ ರಸ್ತೆಯಲ್ಲಿರುವ ಶೌಚಾಲಯ,
6) ನೆಹರೂ ರಸ್ತೆ ಮುಂಭಾಗ ಕಮಲ ನೆಹರೂ ಕಾಲೇಜ್ ಹಿಂಭಾಗ,
7)ನಂಜಪ್ಪ ಮೆಡಿವಿಜನ್ ಎದುರು,
8)ದುರ್ಗಿಗುಡಿ ಸೋನಿ ಸರ್ವಿಸ್ ಸೆಂಟರ್ ಪಕ್ಕ,
9)ದುರ್ಗಿಗುಡಿ ಮಲ್ಲಿಕಾರ್ಜುನ್ ನರ್ಸಿಂಗ್ ಹೋಮ್ ಪಕ್ಕ,
10)ದುರ್ಗಿಗುಡಿ ಸೂರ್ಯ ಕಂಫಾರ್ಟ್ ಪಕ್ಕ,
11)ದುರ್ಗಿಗುಡಿ ಸ್ಕೂಲ್ ಎಂದರು ಓಂ ಕಂಪ್ಯೂಟರ್ ಪಕ್ಕ,
12)ಲಷ್ಕರ್ ಮೊಹಲ್ಲಾ ಮೀನು ಮಾರ್ಕೆಟ್,
13)ಮಂಜುನಾಥ ಟಾಕೀಸ್ ಬಳಿ ಬಟ್ಟೆ ಮಾರ್ಕೆಟ್,
14)ಗಾಂಧಿ ಬಜಾರ್ ಸ್ವಾಗತ ಕ್ಯಾಂಟೀನ್ ಬಳಿ,
15)ಗಾಂಧಿ ಬಜಾರ್ ನ ತರಕಾರಿ ಮಾರುಕಟ್ಟೆ, ಹರಳ್ಳೆಣ್ಣೆ ಕೇರಿ, ಒಟ್ಟು 15 ಸಾರ್ವಜನಿಕ ಉಚಿತ ಶೌಚಾಲಯ ಬಳಕೆಯಲ್ಲಿ ಇದೆ.
1) ದುರ್ಗಿಗುಡಿಯಲ್ಲಿರುವ ಸಸ್ಯಾಹಾರಿ ಪುಢ್ ಕೋರ್ಟ್ ಉಚಿತ ಸಾರ್ವಜನಿಕ ಶೌಚಾಲಯ ಬಳಕೆಗಿಲ್ಲ ಬೀಗ ಬಿದ್ದಿದೆ,
2) ಮೆಗ್ಗಾನ್ ಆಸ್ಪತ್ರೆ ಕಾಂಪೌಂಡ್ ನಲ್ಲಿರುವ ಶೌಚಾಲಯ ಬಳಕೆಗಿಲ್ಲ, ಬಿಗಾ ಬಿದ್ದಿದೆ,
3)ನೆಹರೂ ರಸ್ತೆಯ ಮುಂಭಾಗ ಗಾರ್ಡನ್ ಏರಿಯಾದ ಜೆ ಹೆಚ್. ಪಟೇಲ್ ಕಾಂಪ್ಲೆಕ್ಸ್ ನಲ್ಲಿ ಇರುವ ಶೌಚಾಲಯಗಳ ಬಳಕೆಗಿಲ್ಲ ಬಿಗಾ ಬಿದ್ದಿದೆ,
4) ಗೋಪಿ ವೃತ್ತದಲ್ಲಿ ಇರುವ ಇ- ಟಾಯ್ಲೆಟ್ ಮುಚ್ಚಿದೆ,
5) ಕೆ.ಎಸ್.ಆರ್.ಟಿ.ಸಿ ಡಿಪೋ ಹತ್ತಿರ ಫೈರ್ ಕ್ವಾಟ್ರಸ್ ಪಕ್ಕ ಅಂಡರ್ ಕಂಟ್ರಕ್ಷನ್ ನಡೆಯುತ್ತಿದೆ, ಉಳಿದ 5 ಹೊರತುಪಡಿಸಿ, ಎಲ್ಲಾ ಶೌಚಾಲಯಗಳು ಸಾರ್ವಜನಿಕ ಬಳಕೆಯಲ್ಲಿವೆ,


ಕೆಲವು ಕಡೆ ಶೌಚಾಲಯದಲ್ಲಿ ಸಾರ್ವಜನಿಕರು ನಲ್ಲಿ ಟಾಪ್, ಲೈಟ್ ಬಲ್ಬ್ ಗಳನ್ನು ತೆಗೆದಿರುವರು, ಇನ್ನು ಕೆಲವು ಕಡೆ ನೀರಿದ್ದರೆ ಕರೆಂಟ್ ಇಲ್ಲ ಕರೆಂಟ್ ಇದ್ದರೆ ನೀರಿಲ್ಲ, ಹಲವು ಕಡೆ ಶೌಚಾಲಯದಲ್ಲಿ ಸ್ಟಾರ್ ವಿಮಲ್ ಗುಟುಕ, ಸಿಗರೇಟಿನ ತುಂಡುಗಳು, ಕಂಡು ಬಂದವು, ಹಲವು ಕಡೆ ಉಚಿತ ಶೌಚಾಲಯ ಅನ್ನುವ ನಾಮಫಲಕವನ್ನು ತೆಗೆದು ಐದು, ಹತ್ತು ರೂಗಳನ್ನು ವಸೂಲಿಗೆ ಇಳಿದಿರುವ ಬಗ್ಗೆ ಸಾರ್ವಜನಿಕರು ದೂರುಗಳನ್ನು ಹೇಳಿದರು.
ಡಬ್ಬಲ್ ರಸ್ತೆಯಲ್ಲಿರುವ ಉಚಿತ ಶೌಚಾಲಯದಲ್ಲಿ ಮೂತ್ರ ವಿಸರ್ಜನೆಗೆ ಎರಡು ರೂ. ಮಲವಿಸರ್ಜನೆಗೆ ಐದು ರೂ. ಕೇಳುತ್ತಿರುವುದರಿಂದ ಅಲ್ಲಿ ಯಾರೂ ಸುಳಿಯದೆ ಅಲೇ ಅಕ್ಕಪಕ್ಕದಲ್ಲಿ ಮೂತ್ರ ವಿಸರ್ಜನೆ ಮಾಡಿ ಹೋಗುತ್ತಿರುವ ಬಗ್ಗೆ ಸಾರ್ವಜನಿಕರು ದೂರುಗಳನ್ನು ಹೇಳಿದರು. ಪಾಲಿಕೆ ಉಚಿತ ಶೌಚಾಲಯ ಮಾಡಿದಲ್ಲಿ ದೊಡ್ಡದಾಗಿ ಸಾರ್ವಜನಿಕರಿಗೆ ಎದ್ದು ಕಾಣುವಂತೆ ಉಚಿತ ಶೌಚಾಲಯ ಎಂದು ನಾಮಫಲಕವನ್ನು ಅಳವಡಿಸಿ, ಇಲ್ಲದಿದ್ದಲ್ಲಿ ಹಣ ಪಾವತಿಸಿ ಶೌಚಾಲಯ ಬಳಸುವುದಾದರೆ ಅದರ ದರವನ್ನು ಸ್ಪಷ್ಟವಾಗಿ ನಮೂದಿಸಿ, ಮೂತ್ರ ವಿಸರ್ಜನೆಗೆ ಉಚಿತ ಮಲವಿಸರ್ಜನೆಗೆ 5ರೂ. ಎಂದು, ಸ್ಪಷ್ಟವಾಗಿ ಇರಲಿ, ಇಲ್ಲದಿದ್ದಲ್ಲಿ ಸಾರ್ವಜನಿಕರಿಂದ 10 ರೂಗಳನ್ನು ಪಡೆಯುವರು ಎಂದು ಸಾರ್ವಜನಿಕರು ಅಧಿಕಾರಿಗಳಿಗೆ ತಿಳಿಸಿದರು.


ಈ ಸಂದರ್ಭದಲ್ಲಿ ವಿವಿಧ ಸಂಘಟನೆಯ ಪ್ರಮುಖರು ಪರಿಸರ ರಮೇಶ್, ಶ್ರೀಕಾಂತ್ ಸ್ಥಳೀಯ ಪ್ರಮುಖರು, ಹಾಗೂ ಶಿವಮೊಗ್ಗ ಮಹಾನಗರ ಪಾಲಿಕೆಯ ಎಇಇ ಅಮೋಘ್, ಆರೋಗ್ಯ ಅಧಿಕಾರಿಗಳು ನವೀನ್, ಸಾಗರ್, ವಿಕಾಸ್, ಶೈಲಜಾ, ಪ್ರಭುರಾಜ್, ಶಿವಾನಂದ ಮೂರ್ತಿ, ಮತ್ತು ಶೌಚಾಲಯ ಸ್ವಚ್ಛತೆಯ ಗುತ್ತಿಗೆದಾರರು ಮೇಸ್ತ್ರಿ ಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

By admin

ನಿಮ್ಮದೊಂದು ಉತ್ತರ

You missed

error: Content is protected !!