ಶಿವಮೊಗ್ಗ, ಸೆ.29:
ಶಿವಮೊಗ್ಗದ ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್ (ಡಿಸಿಸಿ) ಬ್ಯಾಂಕ್ ನ ನೂತನ ಅಧ್ಯಕ್ಷರಾಗಿ ಆರ್ ಎಂ ಮಂಜುನಾಥ್ ಗೌಡ ಅವರು ಆಯ್ಕೆಯಾಗಿದ್ದಾರೆ. ಇಂದು ನಡೆದ ಸಭೆಯಲ್ಲಿ ಮಂಜುನಾಥ ಗೌಡರು ಇಂದು ಆರನೇ ಬಾರಿಗೆ ಅಧ್ಯಕ್ಷಗಿರಿ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ.


ಸಹಕಾರ ಸಂಘದ ರುದ್ರಪ್ಪರವರು ಚುನಾವಣೆ ಅಧಿಕಾರಿಗಳಾಗಿ ಆಗಮಿಸಿದ್ದರು. ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಒಂದೇ ಒಂದು ಅರ್ಜಿ ಸಲ್ಲಿಸಿದ್ದ ಕಾರಣ ಆರ್. ಎಂ. ಮಂಜುನಾಥಗೌಡರು ಅವಿರೋಧ ಆಯ್ಕೆಯಾಗಿದ್ದಾರೆ.
14 ಜನ ನಿರ್ದೇಶಕ ಸ್ಥಾನ ಹೊಂದಿದ್ದ ಡಿಸಿಸಿ ಬ್ಯಾಂಕ್ ನಲ್ಲಿ ಜುಲೈ 28 ರಂದು ಪ್ರಭಾರಿ ಅಧ್ಯಕ್ಷರಾಗಿ ಷಡಾಕ್ಷರಿಯವರು ಆಯ್ಕೆಯಾಗಿದ್ದರು. ಕಳೆದ ಎರಡು ತಿಂಗಳಿಂದ ಅವರು ಪ್ರಭಾರಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.. ಆದರೆ ಇವತ್ತು ಆರ್ ಎಂ ಎಂ ಆರನೇ ಬಾರಿಗೆ ಅಧ್ಯಕ್ಷರಾಗಿದ್ದಾರೆ.


2021 ರಲ್ಲಿ ಆರ್ ಎಂ ಎಂ ನಕಲಿ ಬಂಗಾರದ ಅಡವಿಟ್ಟು ಸಾಲ ಪಡೆದು ದಾಖಲಾಗಿದ್ದ ಪ್ರಕರಣವನ್ನು ವಜಾಗೊಳಿಸಲಾಗಿತ್ತು. ಕಾಂಗ್ರೆಸ್ ಪಕ್ಷ ಅಧಿಕಾರಕ್ಜೆ ಬಂದ ಬೆನ್ನಲ್ಲೇ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. ಮುಂದಿನ ಏಳೆಂಟು ತಿಂಗಳಿಗೆ ಡಿಸಿಸಿ ಬ್ಯಾಂಕ್ ನ ಅಧ್ಯಕ್ಷತೆ ವಹಿಸಿಕೊಂಡರು.
ಆಯ್ಕೆಯಾದ ನಂತರ ಮಾತನಾಡುತ್ತಾ, ಗೆಲುವಿಗೆ ಕಾರಣರಾದವರನ್ನು ಅಭಿನಂಧಿಸಿದರು.
ಈಗ ರಾಜ್ಯದಲ್ಲಿ ಬರಗಾಲವಿದೆ. ಬ್ಯಾಂಕ್ ನ ಅಧ್ಯಕ್ಷರಾಗಿ 25 ವರ್ಷದಿಂದ ಇದ್ದೇನೆ.‌ ರೈತರು ಧೃತಿಗೆಡುವುದು ಬೇಡ ನಿಮ್ಮೊಂದಿಗೆ ಇದ್ದೇನೆ. ಆಯ್ಕೆ ಮಾಡಿದ ಎಲ್ಲರಿಗೂ ಧನ್ಯವಾದ ಸಲ್ಲಿಸಿದರು.

By admin

ನಿಮ್ಮದೊಂದು ಉತ್ತರ

You missed

error: Content is protected !!