ಶಿವಮೊಗ್ಗ, ನ.10:
ಕಬ್ಬು ಬೆಳೆಗೆ ವೈಜ್ಞಾನಿಕ ಬೆಲೆ ನಿಗಧಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಬರುವ ನ.13ರಂದು ಸಚಿವರು ಹಾಗೂ ಅಧಿಕಾರಿಗಳನ್ನು ಬೇಟಿ ಮಾಡಿ ಒತ್ತಾಯಿಸಲು ರಾಜ್ಯ ಸಮಿತಿ ತೀರ್ಮಾನಿಸಿದೆ.
ಅಂದು ಆಗಮಿಸುವ ಕಬ್ಬು ಬೆಳೆಗಾರರ ಸಂಘದ ರಾಜ್ಯ, ಜಿಲ್ಲಾ, ತಾಲೂಕು, ಪದಾಧಿಕಾರಿಗಳು ಮೊದಲು ತಮ್ಮ ಬರುವಿಕೆಯನ್ನು ತಿಳಿಸಲು ರಾಜ್ಯ ಸಮಿತಿ ಸೂಚಿಸಿದೆ.
ಪ್ರಸಕ್ತ ಸಾಲಿನ ಕಬ್ಬಿನ ಎಫ್ ಆರ್ ಪಿ ದರ ಅವೈಜ್ಞಾನಿಕವಾಗಿದೆ, ಸಕ್ಕರೆ ಕಾರ್ಖಾನೆಗಳು ವ್ಯವಸ್ಥಿತವಾಗಿ ಕಬ್ಬಿನಿಂದ ಬರುವ ಸಕ್ಕರೆ ಇಳುವರಿಯನ್ನು ಕಡಿಮೆ ತೋರಿಸುತ್ತಿವೆ. ಇದರಿಂದ ಕಬ್ಬಿನ ಬೆಲೆ ಕಡಿಮೆಯಾಗುತ್ತಿದೆ, ಈ ಬಗ್ಗೆ ಸಕ್ಕರೆ ಸಚಿವರು ನಿರ್ಲಕ್ಷಿಸುತ್ತಿದ್ದಾರೆ, ರಾಜ್ಯಾದ್ಯಂತ ಕಳೆದ ನ. 2ರಂದು ಹೋರಾಟ ಮಾಡಿ ಸರ್ಕಾರ ಗಮನ ಸೆಳೆದಿದ್ದರೂ ಯಾವುದೇ ಕ್ರಮ ಜಾರಿಯಾಗಿಲ್ಲ, ಅತಿವೃಷ್ಟಿ ಪ್ರವಾಹದಿಂದ ಹಾನಿಯಾಗಿರುವ ಬೆಳೆ ನಷ್ಟ ಸಮೀಕ್ಷೆ ಮಾಡಿ ಪರಿಹಾರ ಕೊಡಲು ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದೆ, ಸರ್ಕಾರ ಜಾರಿ ಮಾಡಿರುವ ಕಾನೂನು ಬದ್ಧ ದ್ವಿಪಕ್ಷೀಯ ಒಪ್ಪಂದ ಪತ್ರ ಜಾರಿಮಾಡಿದೆ. ಸಕ್ಕರೆ ಕಾರ್ಖಾನೆಗಳು ನಿರ್ಲಕ್ಷಿಸುತೀವೆ, ಸಕ್ಕರೆ ಕಾರ್ಖಾನೆಯವರು ತಮಗೆ ಅನುಕೂಲವಾಗುವ ಕಾನೂನುಬಾಹಿರ ಒಪ್ಪಂದ ಪತ್ರ ತಯಾರಿಸಿಕೊಂಡು ಕಬ್ಬು ಬೆಳೆಗಾರ ರೈತರಿಂದ ಸಹಿ ಪಡೆಯುತ್ತಿವೆ, ಇದರಿಂದಲೂ ರೈತರಿಗೆ ಕಬ್ಬು ಕಟಾವು ಸಕಾಲಕ್ಕೆ ಆಗುತ್ತಿಲ್ಲ, ಸಕಾಲಕ್ಕೆ ಹಣ ಬರುತ್ತಿಲ್ಲ, ಕಾನೂನು ಪ್ರಕಾರ ಪ್ರಶ್ನಿಸಲು ಸಾಧ್ಯವಾಗುತ್ತಿಲ್ಲ ಆದ್ದರಿಂದ 13ರಂದು ಬೆಂಗಳೂರಿನಲ್ಲಿ ಸಕ್ಕರೆ ಸಚಿವರು ಹಾಗೂ ಕಬ್ಬು ಹಾಗೂ ಸಕ್ಕರೆ ಅಭಿವೃದ್ಧಿ ಆಯುಕ್ತರನ್ನು ಬೇಟಿ ಮಾಡಿ ಚರ್ಚಿಸ ಬೇಕಾಗಿದೆ. ಈ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿ ಎಂದು ಕೋರಲಾಗಿದೆ.
ಪ್ರತಿ ಜಿಲ್ಲೆಯಿಂದ ಎಷ್ಟು ಜನ ಬೆಂಗಳೂರುಗೆ ಬರಲು ಸಾಧ್ಯ ನಿಖರವಾಗಿ ತಿಳಿಸಿ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ರಾಜ್ಯ ಸಂಚಾಲಕ ಎನ್. ಹೆಚ್ . ದೇವಕುಮಾರ್ ತಿಳಿಸಿದ್ದಾರೆ