ರೌಡಿಶೀಟರ್ ಭಂಡಾರಿಯ ಹತ್ಯೆ: ಎಸ್ಪಿ ಹೇಳಿದ್ದೇನು..?

ಶಿವಮೊಗ್ಗ: ಬಸವನಗುಡಿಯ 5 ನೇ ತಿರುವಿನಲ್ಲಿ ನಿನ್ನೆ ನಡೆದಿದ್ದ ರೌಡಿ ಶೀಟರ್ ಮಂಜುನಾಥ್ ಭಂಡಾರಿಯ ಹತ್ಯೆ ಹಳೇ ದ್ವೇಶದಿಂದ ನಡೆದಿರಬಹುದಾಗಿ ಪ್ರಾಥಮಿಕ ವರದಿಯಿಂದ ತಿಳಿದುಬಂದಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ.ಶಾಂತರಾಜು ತಿಳಿಸಿದ್ದಾರೆ.

ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು, ಹತ್ಯೆಯ ಕುರಿತು ಮಂಜುನಾಥ್ ಬಂಡಾರಿಯವರ ಸ್ನೇಹಿತ ಸುರೇಶ್ ದೂರು ನೀಡಿದ್ದಾರೆ. ಮಧ್ಯಾಹ್ನ ಭಂಡಾರಿ ಹತ್ಯೆ ನಡೆದಿದೆ. ಆದರೆ ಬೆಳಿಗ್ಗೆ11.30 ರ ಸಮಯದಲ್ಲಿ ಭಂಡಾರಿ ಸುರೇಶ್ ರವರನ್ನ ಭೇಟಿಮಾಡಿದ ವೇಳೆಯಲ್ಲಿ ಹಿಂದಿನ ದಿನ ಸ್ನೇಹಿತರೊಂದಿಗೆ ಗಲಾಟೆಯನ್ನ ವಿವರಿಸಿದ್ದಾನೆ.
ಮೂವರು ಜನ ದ್ವಿಚಕ್ರವಾಹನದಲ್ಲಿ ಬಂದು ಹರಿತವಾದ ಆಯುಧಗಳಿಂದ ಭಂಡಾರಿಯವರ ತಲೆಗೆ ಹೊಡೆದು ಹತ್ಯೆ ಮಾಡಿದ್ದಾರೆ. ಈ ಕುರಿತು ಮಾಹಿತಿಗಳನ್ನ ಕಲೆಹಾಕಿ ಆರೋಪಿಗಳನ್ನು ಸದ್ಯದಲ್ಲಿಯೇ ಬಂಧಿಸಲಾಗುವುದು. ಹಿಂದಿನ ದಿನ ನಡೆದ ಜಗಳವೇ ಇದಕ್ಕೆ ನಿಖರವಾದ ಕಾರಣವೆಂದು ಹೇಳಲಾಗದು. ಇದೊಂದು ಶಂಕೆ ಅಷ್ಟೆ ಇವೆಲ್ಲವೂ ಪ್ರಾಥಮಿಕ ಮಾಹಿತಿ ಆಗಿದೆ ಎಂದಿದ್ದಾರೆ.

ಮಂಗಗಳಿಗೆ ವಿಷ ಹಾಕಿ ಕೊಂದ ಐವರ ಬಂದನ

ಶಿವಮೊಗ್ಗ: ಸಾಗರ ತಾಲೂಕು ಕಾಸ್ಪಡಿ ಬಳಿ ೩೩ ಕ್ಕೂ ಹೆಚ್ಚು ಮಂಗಗಳಿಗೆ ವಿಷ ಹಾಕಿ ಕೊಂದ ಆರೋಪಿಗಳನ್ನು ಅರಣ್ಯ ಇಲಾಖೆಯಿಂದ ೫ ಜನರನ್ನು ಬಂಧಿಸಿದ್ದಾರೆ.
ಲ್ಯಾವಿಗೆರೆಯ ಅಭಿಷೇಕ್, ಲಂಬೂದರ್, ತ್ಯಾಗರ್ತಿಯ ದಸ್ತಗಿರ್, ವಿಶ್ವನಾಥ್ ಹಾಗೂ ದಾವಣಗೆರೆಯ ಸಂಜೀವ್ ಬಂಧಿತ ಆರೋಪಿಗಳು. ಇವರು ಒಂದು ಟಾಟಾ ಏಸ್ ನಲ್ಲಿ ಸತ್ತ ಮಂಗಗಳನ್ನು ಎಸೆಯಲು ಬಂದಾಗ ಅರಣ್ಯ ಇಲಾಖೆ ಸಿಬ್ಬಂದಿ ವಿಚಾರಿಸಿದ್ದಾರೆ. ನಂತರ ಮಂಗಗಳನ್ನು ಸಾಯಿಸಿದ ವಿಚಾರ ತಿಳಿದು ಬಂದಿದೆ. ೩೩ ಮಂಗಗಳು ಸಾವನ್ನಪ್ಪಿದ್ದು, ೩ ಮಂಗಗಳು ಅಸ್ವಸ್ಥಗೊಂಡಿದ್ದವು. ತಕ್ಷಣ ಚೋರಡಿ ಅರಣ್ಯ ವಲಯದವರು ಕೇಸು ದಾಖಲಿಸಿ ತನಿಖೆ ಪ್ರಾರಂಭಿಸಿದ್ದಾರೆ. ಇಂದು ವನ್ಯಜೀವಿ ವೈದ್ಯ ಡಾ.ವಿನಯ್ ರವರ ನೇತೃತ್ವದಲ್ಲಿ ಸತ್ತ ಮಂಗಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.
ಅಸ್ವಸ್ಥಗೊಂಡ ಮಂಗಗಳಿಗ ಚಿಕಿತ್ಸೆ ನೀಡಲಾಗುತ್ತಿದೆ. ಅರಣ್ಯ ಇಲಾಖೆಯವರು ಒಂದು ಕಾರನ್ನು ಹಾಗೂ ಟಾಟಾ ಏಸ್ ವಾಹನವನ್ನು ವಶಕ್ಕೆ ಪಡೆದು ಕೊಂಡಿದ್ದಾರೆ. ಐವರು ಮಂಗಗಳನ್ನು ಯಾವ ಕಾರಣಕ್ಕೆ ಕೊಂದರು ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಸಾಗರ ವನ್ಯಜೀವಿ ವಿಭಾಗದ ಡಿಎಫ್‌ಓ ಮೋಹನ ಕುಮಾರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ವಿದ್ಯಾರ್ಥಿಗಳಿಗೆ ನೇರವಾಗಿ ಅಕ್ಕಿ ಬೇಳೆ ವಿತರಣೆ

ಶಿವಮೊಗ್ಗ: ಅಕ್ಷರ ದಾಸೋಹ ಯೋಜನೆಯಡಿ ವಿದ್ಯಾರ್ಥಿಗಳಿಗೆ ಈ ಸಾಲಿನಲ್ಲಿ 108ದಿನಗಳ ಅವಧಿಯ ಅಕ್ಕಿ ಮತ್ತು ಬೇಳೆಯನ್ನು ನೇರ ವಾಗಿ ವಿತರಿಸಲಾಗುವುದು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜ್ಯೋತಿ ಎಸ್ ಕುಮಾರ್ ಅವರು ತಿಳಿಸಿದರು.
ಅವರು ಇಂದು ಜಿಲ್ಲಾ ಪಂಚಾಯತ್ ಮಾಸಿಕ ಕೆಡಿಪಿ ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದರು.
ಪ್ರಸ್ತುತ 53ದಿನಗಳ ಅವಧಿಯ ರೇಶನ್ ಸರಬರಾಜಾಗಿದ್ದು, ತಲಾ ವಿದ್ಯಾರ್ಥಿಗೆ ಪ್ರತಿದಿನಕ್ಕೆ 100 ಗ್ರಾಂ ಅಕ್ಕಿ ಮತ್ತು 37ಗ್ರಾಂ ಬೇಳೆಯಂತೆ ಒಂದೇ ಕಂತಿನಲ್ಲಿ ಇಂದಿನಿಂದ ವಿದ್ಯಾರ್ಥಿಗಳಿಗೆ ವಿತರಿಸುವ ಪ್ರಕ್ರಿಯೆ ಆರಂಭವಾಗಲಿದೆ ಎಂದರು.
ಡಿಸೆಂಬರ್‌ನಿಂದ ಶಾಲೆ ಆರಂಭ ಸಾಧ್ಯತೆ: ಪ್ರೌಢಶಾಲೆ ಆರಂಭಿಸುವ ಕುರಿತಾಗಿ ವಿವಿಧ ಹಂತಗಳಲ್ಲಿ ಈಗಾಗಲೇ ಚರ್ಚೆ ನಡೆದಿದ್ದು, ಡಿಸೆಂಬರ್ ತಿಂಗಳಿನಿಂದ ತರಗತಿಗಳು ಆರಂಭವಾಗುವ ಸಾಧ್ಯತೆ ಇದೆ. ಸರ್ಕಾರ ಈ ಕುರಿತು ಮಾರ್ಗಸೂಚಿಯನ್ನು ಸಹ ಹೊರಡಿಸಿದೆ. ಸರ್ಕಾರಿ ಶಾಲೆಗಳಲ್ಲಿ ಈಗಾಗಲೇ ಶೇ.೯೮ರಷ್ಟು ವಿದ್ಯಾರ್ಥಿಗಳ ದಾಖಲಾತಿ ಪ್ರಕ್ರಿಯೆ ಮುಗಿದಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ದಾಖಲಾ ತಿಯಲ್ಲಿ ಶೇ.100ರಷ್ಟು ಹೆಚ್ಚಳ ಉಂಟಾಗಿದೆ. ಪಠ್ಯಪುಸ್ತಕ ಪೂರ್ಣ ಪ್ರಮಾಣದಲ್ಲಿ ಸರಬರಾಜಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ರಮೇಶ್ ಅವರು ಮಾಹಿತಿ ನೀಡಿದರು.
ಟ್ಯಾಬ್ ವಿತರಣೆ: ಖಾಸಗಿ ಸಹಯೋ ಗದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಕಲಿಕೆಗೆ ಅನುಕೂಲವಾಗುವಂತೆ ಟ್ಯಾಬ್ ವಿತರಿಸುವ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ. ಇಬ್ಬರು ವಿದ್ಯಾರ್ಥಿಗಳಿಗೆ ತಲಾ ಒಂದು ಟ್ಯಾಬ್ ವಿತರಿಸಲಾಗುತ್ತಿದ್ದು, ಜಿಲ್ಲೆಯಲ್ಲಿ ೪೮೦೦ ಟ್ಯಾಬ್‌ಗಳನ್ನು ವಿತರಿಸಲಾಗುವುದು. ಸಿಲೆಬಸ್ ಬಳಿಕ ಟ್ಯಾಬ್ ಅನ್ನು ಮತ್ತೆ ಶಾಲೆಗೆ ವಿದ್ಯಾರ್ಥಿಗಳು ಹಿಂತಿರುಗಿಸಬೇಕಾಗುವುದು. ಜಿಲ್ಲೆಯಲ್ಲಿ ಶೇ.೧೨ರಿಂದ ೧೩ರಷ್ಟು ವಿದ್ಯಾರ್ಥಿ ಗಳ ಮನೆಯಲ್ಲಿ ಟಿವಿ ಇಲ್ಲದಿರುವುದು ಸಮೀಕ್ಷೆ ಮೂಲಕ ತಿಳಿದು ಬಂದಿದೆ ಎಂದರು.
ಜಿಲ್ಲೆಯಲ್ಲಿ ಸೋಂಕಿನ ಪ್ರಮಾಣ ಕಡಿಮೆಯಾಗಿದ್ದು, ಆಗಸ್ಟ್ ತಿಂಗಳಲ್ಲಿ ಶೇ.೨೧, ಸೆಪ್ಟಂಬರ್‌ನಲ್ಲಿ ಶೇ.೧೯ ಇದ್ದ ಸೋಂಕಿನ ಪ್ರಮಾಣ ಇಂದು ಶೇ.೨ಕ್ಕೆ ಇಳಿದಿದೆ. ಪರೀಕ್ಷೆಗೆ ಒಳಪಡಿಸುವ ೧೦೦ ಜನರಲ್ಲಿ ೧.೬೧ ಮಂದಿಗೆ ಸೋಂಕು ಕಂಡು ಬರುತ್ತಿದೆ ಎಂದು ಅವರು ಮಾಹಿತಿ ನೀಡಿದರು.
ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ವೇದಾ ವಿಜಯಕುಮಾರ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೈಶಾಲಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ ವೀರಭದ್ರಪ್ಪ ಪೂಜಾರ್, ಸುರೇಶ್ ಸ್ವಾಮಿರಾವ್, ರೇಣುಕಾ ಹನುಮಂತಪ್ಪ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಕಬ್ಬುಬೆಳಗಾರರಿಂದ ಸಕ್ಕರೆ ಸಚಿವರ ಬೇಟಿ: ಹೆಸರು ನೊಂದಾಯಿಸಿ: ದೇವಕುಮಾರ್ ಕರೆ

ಶಿವಮೊಗ್ಗ: ಕಬ್ಬು ಬೆಳೆಗೆ ವೈಜ್ಞಾನಿಕ ಬೆಲೆ ನಿಗಧಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಬರುವ ನ.13ರಂದು ಸಚಿವರು ಹಾಗೂ ಅಧಿಕಾರಿಗಳನ್ನು ಬೇಟಿ ಮಾಡಿ ಒತ್ತಾಯಿಸಲು ರಾಜ್ಯ ಸಮಿತಿ ತೀರ್ಮಾನಿಸಿದೆ.
ಅಂದು ಆಗಮಿಸುವ ಕಬ್ಬು ಬೆಳೆಗಾರರ ಸಂಘದ ರಾಜ್ಯ, ಜಿಲ್ಲಾ, ತಾಲೂಕು, ಪದಾಧಿಕಾರಿ ಗಳು ಮೊದಲು ತಮ್ಮ ಬರುವಿಕೆಯನ್ನು ತಿಳಿಸಲು ರಾಜ್ಯ ಸಮಿತಿ ಸೂಚಿಸಿದೆ.
ಪ್ರಸಕ್ತ ಸಾಲಿನ ಕಬ್ಬಿನ ಎಫ್ ಆರ್ ಪಿ ದರ ಅವೈಜ್ಞಾನಿಕವಾಗಿದೆ, ಸಕ್ಕರೆ ಕಾರ್ಖಾನೆಗಳು ವ್ಯವ ಸ್ಥಿತವಾಗಿ ಕಬ್ಬಿನಿಂದ ಬರುವ ಸಕ್ಕರೆ ಇಳುವರಿಯನ್ನು ಕಡಿಮೆ ತೋರಿಸುತ್ತಿವೆ. ಇದರಿಂದ ಕಬ್ಬಿನ ಬೆಲೆ ಕಡಿಮೆಯಾಗುತ್ತಿದೆ, ಈ ಬಗ್ಗೆ ಸಕ್ಕರೆ ಸಚಿವರು ನಿರ್ಲಕ್ಷಿಸುತ್ತಿದ್ದಾರೆ, ರಾಜ್ಯಾದ್ಯಂತ ಕಳೆದ ನ. ೨ರಂದು ಹೋರಾಟ ಮಾಡಿ ಸರ್ಕಾರ ಗಮನ ಸೆಳೆದಿದ್ದರೂ ಯಾವುದೇ ಕ್ರಮ ಜಾರಿಯಾಗಿಲ್ಲ, ಅತಿವೃಷ್ಟಿ ಪ್ರವಾಹದಿಂದ ಹಾನಿಯಾಗಿರುವ ಬೆಳೆ ನಷ್ಟ ಸಮೀಕ್ಷೆ ಮಾಡಿ ಪರಿಹಾರ ಕೊಡಲು ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದೆ, ಸರ್ಕಾರ ಜಾರಿ ಮಾಡಿರುವ ಕಾನೂನು ಬದ್ಧ ದ್ವಿಪಕ್ಷೀಯ ಒಪ್ಪಂದ ಪತ್ರ ಜಾರಿಮಾಡಿದೆ. ಸಕ್ಕರೆ ಕಾರ್ಖಾನೆಗಳು ನಿರ್ಲಕ್ಷಿಸುತೀವೆ, ಸಕ್ಕರೆ ಕಾರ್ಖಾನೆಯವರು ತಮಗೆ ಅನುಕೂಲವಾಗುವ ಕಾನೂನುಬಾಹಿರ ಒಪ್ಪಂದ ಪತ್ರ ತಯಾರಿಸಿಕೊಂಡು ಕಬ್ಬು ಬೆಳೆಗಾರ ರೈತರಿಂದ ಸಹಿ ಪಡೆಯುತ್ತಿವೆ, ಇದರಿಂದಲೂ ರೈತರಿಗೆ ಕಬ್ಬು ಕಟಾವು ಸಕಾಲಕ್ಕೆ ಆಗುತ್ತಿಲ್ಲ, ಸಕಾಲಕ್ಕೆ ಹಣ ಬರುತ್ತಿಲ್ಲ, ಕಾನೂನು ಪ್ರಕಾರ ಪ್ರಶ್ನಿಸಲು ಸಾಧ್ಯವಾಗುತ್ತಿಲ್ಲ ಆದ್ದರಿಂದ ೧೩ರಂದು ಬೆಂಗಳೂರಿನಲ್ಲಿ ಸಕ್ಕರೆ ಸಚಿವರು ಹಾಗೂ ಕಬ್ಬು ಹಾಗೂ ಸಕ್ಕರೆ ಅಭಿವೃದ್ಧಿ ಆಯುಕ್ತರನ್ನು ಬೇಟಿ ಮಾಡಿ ಚರ್ಚಿಸ ಬೇಕಾಗಿದೆ. ಈ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿ ಎಂದು ಕೋರಲಾಗಿದೆ.
ಪ್ರತಿ ಜಿಲ್ಲೆಯಿಂದ ಎಷ್ಟು ಜನ ಬೆಂಗಳೂರುಗೆ ಬರಲು ಸಾಧ್ಯ ನಿಖರವಾಗಿ ತಿಳಿಸಿ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ರಾಜ್ಯ ಸಂಚಾಲಕ ಎನ್. ಹೆಚ್ . ದೇವಕುಮಾರ್ ತಿಳಿಸಿದ್ದಾರೆ

ಸಿದ್ದರಾಮಯ್ಯ ಕ್ಷಮೆ ಕೇಳಬೇಕು: KSE

ಶಿವಮೊಗ್ಗ: ರಾಜ್ಯದ ಎರಡು ಕ್ಷೇತ್ರದ ಉಪ ಚುನಾವಣೆ ಹಾಗೂ ಬಿಹಾರ್ ಮತ್ತು ಮಧ್ಯ ಪ್ರದೇಶ್ ರಾಜ್ಯಗಳ ಚುನಾವಣಾ ಫಲಿತಾಂಶವನ್ನು ನಾನು ಸ್ವಾಗತಿಸುತ್ತೇನೆ. ಬಿಹಾರ್ ಮತ್ತು ಮಧ್ಯ ಪ್ರದೇಶ ಸಮೀಕ್ಷೆಯಲ್ಲಿ ಬೇರೆ ಬೇರೆ ಅಭಿಪ್ರಾಯ ಬಂದಿತ್ತು. ಆದರೆ, ದೇಶದ ಜನ ನರೇಂದ್ರಮೋದಿ ನೇತೃತ್ವದ ಎನ್‌ಡಿಎ ಗೆ ಬೆಂಬಲಸಿದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ದೂಳಿಪಟವಾಗಲಿದೆ, ಬಿಜೆಪಿ ಇನ್ನೂ ಬೆಳೆ ಯಲಿದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಅವರು ಇಂದು ಸುದ್ದಿಗಾರರೊಂದಿಗೆ ಮಾತನಾಡಿ, ಮಾಜಿ ಮುಖ್ಯಮಂತ್ರಿ ಸಿದ್ದ ರಾಮಯ್ಯ , ಕಾಂಗ್ರೆಸ್ ನಾಯಕ ಡಿ.ಕೆ.ಶಿವ ಕುಮಾರ್ ಅವರು ಶಿರಾ ಮತ್ತು ಆರ್ .ಆರ್.ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಾರೆ ಇದು ಮುಂದಿನ ವಿಧಾನಸಭಾ ಚುನಾವಣೆಗೆ ದಿಕ್ಸೂಚಿಯಾ ಗುತ್ತದೆ. ಬಿಹಾರ ಮತ್ತು ಮಧ್ಯಪ್ರದೇಶದಲ್ಲಿ ಎನ್.ಡಿ.ಎ. ಸೋಲು ಅನುಭವಿಸುತ್ತದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧಿಕಾರ ಕಳೆದುಕೊಳ್ಳುತ್ತಾರೆ. ಕೇಂದ್ರದ ಬಿಜೆಪಿ ನಾಯಕರೇ ತಮಗೆ ಸೂಚನೆ ಕೊಟ್ಟಿದ್ದಾರೆ ಎಂದೆಲ್ಲ ಬಡಬಡಿಸಿದ್ದರು. ಸುಳ್ಳು ಸುದ್ದಿಗಳನ್ನು ಹಬ್ಬಿಸಿದ್ದರು. ಆದರೆ, ಮತದಾರರು ಬಿಜೆಪಿಗೆ ಬೆನ್ನು ತಟ್ಟಿ ಅಭಿವೃದ್ಧಿ ಕಾರ್ಯಗಳಿಗೆ ಬೆಂಬಲಿಸಿದ್ದಾರೆ ಎಂದರು.
ಸಿದ್ದರಾಮಯ್ಯ ರಾಜ್ಯದ ಜನತೆಗೆಯ ಕ್ಷಮೆ ಕೇಳಬೇಕಾಗಿದೆ. ಏಕೆಂದರೆ ಸುಳ್ಳು ಸುದ್ದಿಯನ್ನು ಹಬ್ಬಿಸಿದ್ದರು ಬಿಹಾರದಲ್ಲಿ ಬಿಜೆಪಿ ಗೆಲ್ಲುವುದಿಲ್ಲ. ರಾಜ್ಯದಲ್ಲೂ ಸೋಲು ಖಚಿತ, ಮುಖ್ಯಮಂತ್ರಿ ಬದಲಾವಣೆಯಾಗುತ್ತಾರೆ ಎಂದೆಲ್ಲ ಗೊಂದಲದ ಹೇಳಿಕೆಗಳನ್ನು ನೀಡಿ ಕಾರ್ಯಕರ್ತರಲ್ಲಿ ಗೊಂದಲ ಹುಟ್ಟಿಸಿದ್ದರು. ಹಾಗಾಗಿ ಅವರು ಕ್ಷಮೆ ಕೇಳಬೇಕು ಎಂದರು.

By admin

ನಿಮ್ಮದೊಂದು ಉತ್ತರ

error: Content is protected !!