ಶಿವಮೊಗ್ಗ : ಪದವಿ ಪಡೆದು ಸಮಾಜದ ಮುಖ್ಯ ವಾಹಿನಿಗೆ ಹೋಗುತ್ತಿರುವ ಪ್ರತಿಯೊಬ್ಬರೂ ದೇಶದ ವಿವಿಧ ಸಮಸ್ಯೆಗಳಿಗೆ ತಮ್ಮದೇ ಆದ ರೀತಿಯಲ್ಲಿ ಪರಿಹಾರ ಹುಡುಕುವಂತೆ ತಿರುವನಂತಪುರAನ ಭಾರತೀಯ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯ ಕುಲಾಧಿಪತಿ ಹಾಗೂ ಬೆಂಗಳೂರಿನ ಇಸ್ರೋದ ವಿಶಿಷ್ಟ ಪ್ರಾಧ್ಯಾಪಕ ಪದ್ಮಭೂಷಣ, ಪದ್ಮಶ್ರೀ ಡಾ. ಸುರೇಶ್ ಬಿ.ಎನ್. ಕರೆ ನೀಡಿದರು.
ಕುವೆಂಪು ವಿಶ್ವವಿದ್ಯಾಲಯದ ಜ್ಞಾನ ಸಹ್ಯಾದ್ರಿಯಲ್ಲಿ ಇಂದು ಆಯೋಜಿಸಿದ್ದ 33ನೇ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಸುಸ್ಥರ ಅಭಿವೃದ್ಧಿ, ನೀರು, ತ್ಯಾಜ್ಯ ವಿಲೇವಾರಿ, ಪರಿಸರ ಸಂರಕ್ಷಣೆ, ನವೀಕರಿಸಬಹುದಾದ ಇಂಧನ, ಹವಾಮಾನ ಬದಲಾವಣೆ ಮುಂತಾದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಶ್ರಮಿಸುವಂತೆ ಹೇಳಿದರು
.
ವಿಶಿಷ್ಟ ರೀತಿಯ ಬಹುಶಾಸ್ತಿçÃಯ ತಂಡಗಳನ್ನು ಕಟ್ಟಿ, ರ್ನಿಷ್ಟವಾಗಿ ಭಾರತದ ಹಳ್ಳಿಗಳ ಪರಿವರ್ತನೆಗೆ ಸಹಾಯ ಮಾಡುವ ಕಾರ್ಯ ಮಾಡಬೇಕು. ವೃತ್ತಿ ಬದುಕಿಗೆ ಧುಮುಕುತ್ತಿದ್ದಂತೆ ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಸಕಾರಾತ್ಮಕ ವಿಷಯಗಳ ಪ್ರಸರಣ ಮಾಡುವುದನ್ನು ಮರೆಯಬಾರದೆಂದು ಕಿವಿ ಮಾತು ಹೇಳಿದರು.
ಭವಿಷ್ಯದಲ್ಲಿ ಪ್ರತಿ ದಿನ ಹೊಸ ಸಂಗತಿಗಳನ್ನು ಕಲಿಯಲು, ಹೊಸ ಮಾಹಿತಿಯನ್ನು ವಿಶ್ಲೇಷಿಸಲು ಮತ್ತು ಸ್ವಂತ ವಿಶಿಷ್ಟ ಆಲೋಚನೆಗಳನ್ನು ತರಲು ಮುಂದಾಗಬೇಕು. ಯಾವುದೇ ಕೆಲಸ ಮಾಡುವಾಗ ಅದರಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಬೇಕು ಎಂದರು.
ಭಾರತ ಜಾಗತಿಕ ಆರ್ಥಿಕ ವ್ಯವಸ್ಥೆಯಲ್ಲಿ ಇಂದು 5 ನೇ ಸ್ಥಾನದಲ್ಲಿದೆ. ಶೀಘ್ರದಲ್ಲಿ 3 ನೇ ಸ್ಥಾನಕ್ಕೆ ಏರಲಿದೆ. ಬಾಹ್ಯಾಕಾಶ ಸಂಶೋಧನೆಯಲ್ಲಿಯೂ ಉನ್ನತ ಸ್ಥಾನದಲ್ಲಿದೆ. ಮಾಹಿತಿ ತಂತ್ರಜ್ಞಾನ ಅಭಿವೃದ್ಧಿ ಹಾಗೂ ರಫ್ತಿನಲ್ಲಿ ಮೊದಲ ಸ್ಥಾನದಲ್ಲಿದೆ. ಕೊರೋನಾಕ್ಕೆ ಔಷಧ ಕಂಡು ಹಿಡಿದ ಭಾರತವನ್ನು ಇಂದು ವಿಶ್ವದ ಔಷಧಾಲಯ ಎಂದು ಕರೆಯಲಾಗುತ್ತಿದೆ. ಹೀಗಾಗಿ 21ನೇ ಶತಮಾನ ಭಾರತೀಯರದ್ದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮೂವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿ ಮಾತನಾಡಿದ ಕುಲಾಧಿಪತಿ ಥಾವರ್ ಚಂದ್ ಗೆಹ್ಲೋಟ್ ಮಾತನಾಡಿ, ವಿವಿಧ ಕ್ಷೇತ್ರಗಳ ಅಭಿವೃದ್ಧಿಯಲ್ಲಿ ದೇಶ ಅಗ್ರ ಪಂಥಿಯಲ್ಲಿ ನಿಂತಿದೆ. ಇನಷ್ಟು ಅಭೀವೃದ್ಧಿ ಮಾಡಲು ಪದವೀಧರರು ಪಣ ತೊಡಬೇಕಿದೆ ಎಂದು ಹೇಳಿದರು.
ಶಿಕ್ಷಣ ಶಕ್ತಿಯಾಗಿದೆ. ಅದರಲ್ಲೂ ಉನ್ನತ ಶಿಕ್ಷಣ ಪರಿವರ್ತನೆಯ ದೊಡ್ಡ ಶಕ್ತಿಯಾಗಿದೆ. ವಿಶ್ವವಿದ್ಯಾಲಯದಲ್ಲಿ ಪಡೆದ ಜ್ಞಾನವನ್ನು ಬಳಸಿಕೊಂಡು ನೀವು ಅಭಿವೃದ್ಧಿಯಾಗುವುದರ ಜತೆಗೆ ದೇಶದ ಏಳಿಗೆ ಮಾಡಬೇಕಿದೆ. ನಾವಿನ್ಯ ಸಂಶೋಧನೆಗಳ ಕಡೆ ಹೆಚ್ಚು ತೊಡಗಿಸಕೊಳ್ಳುವಂತೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಕುಲಪತಿ ಪ್ರೊ. ಬಿ.ಪಿ. ವೀರಭದ್ರಪ್ಪ, ಕುಲಸಚಿವೆ ಪ್ರೊ. ಸಿ. ಗೀತಾ, ಪರೀಕ್ಷಾಂಗ ವಿಭಾಗದ ಕುಲಸಚಿವ ಪ್ರೊ. ಎಸ್.ಕೆ. ನವೀನ್‌ಕುಮಾರ್, ಹಣಕಾಸು ನಿಯಂತ್ರಣಾಧಿಕಾರಿ ನರಸಿಂಹಮೂರ್ತಿ ಸೇರಿದಂತೆ ಸಿಂಡಿಕೇಟ್ ಸದಸ್ಯರು ಪಾಲ್ಗೊಂಡಿದ್ದರು.
ಪದವಿ ಪ್ರದಾನ
ಘಟಿಕೋತ್ಸವದಲ್ಲಿ 98 ಪುರುಷರು ಹಾಗೂ 61 ಮಹಿಳೆಯರಿಗೆ ವಿವಿಧ ವಿಭಾಗಗಳಲ್ಲಿ ಪಿಎಚ್‌ಡಿ ಪದವಿ, 5499 ಪುರುಷರು ಹಾಗೂ 9251 ಮಹಿಳೆಯರು ಸೇರಿ ಒಟ್ಟು 14750 ವಿದ್ಯಾರ್ಥಿಗಳಿಗೆ ವಿರ್ವಿ ಪದವಿ ಪ್ರದಾನ ಮಾಡಲಾಯಿತು.
ವಿವಿಯ ವಿವಿಧ ವಿಭಾಗಗಳಲ್ಲಿ ಪ್ರತಿಷ್ಠಾಪಿಸಲಾಗಿರುವ 141 ಸ್ವರ್ಣ ಪದಕಗಳನ್ನು 16 ಪುರುಷರು ಹಾಗೂ 58 ಮಹಿಳೆಯರು ಸೇರಿ ಒಟ್ಟು 74 ವಿದ್ಯಾರ್ಥಿಗಳಿಗೆ ಹಾಗೂ 18 ನಗದು ಬಹುಮಾನವÀನ್ನು ಮೂವರು ಪುರುಷರು ಮತ್ತು 13 ಮಹಿಳೆಯರು ಸೇರಿ ಒಟ್ಟು 16 ವಿದ್ಯಾರ್ಥಿಗಳಿಗೆ ನೀಡಲಾಯಿತು.
ಉದ್ಯಮಿ ಉಡುಪಿಯ ಸದಾನಂದ ಶೆಟ್ಟಿ, ಸಂಗೀತ ಕ್ಷೇತ್ರದಲ್ಲಿ ಸಾಧನೆಗೈದ ವಿಜಯಪುರ ಜಿ¯್ಲೆಯ ಕಲಗೇರಿಯ ಪಂ.ರಾಜಗುರು ಗುರುಸ್ವಾಮಿ, ಗ್ರಾಮೀಣಾಭಿವೃದ್ಧಿಯಲ್ಲಿ ಸಾಧನೆ ಮಾಡಿರುವ ದಾವಣಗೆರೆ ಜಿ¯್ಲÉಯ ಅಣಜಿಗೊಲ್ಲರಹಳ್ಳಿಯ ಎಂ. ಚಂದ್ರಪ್ಪ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.
ರಾಜ್ಯಪಾಲರ ಭಾಷಣ ಆರಂಭವಾಗುತ್ತಿದ್ದAತೆ ಎನ್‌ಎಸ್‌ಯುಐ ಕಾರ್ಯಕರ್ತರು ಕುಲಪತಿ ಪ್ರೊ. ವೀರಭದ್ರಪ್ಪ ಅವರ ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದರು. ಇದರಿಂದಾಗಿ ಒಂದು ಕ್ಷಣ ಸಭಾಂಗಣದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಘಟಿಕೋತ್ಸವದಲ್ಲಿ ಪ್ರತಿಭಟನೆಗೆ ಅವಕಾಶವಿಲ್ಲ. ಪಾಸ್ ಕೂಡ ವಿತರಣೆ ಮಾಡಲಾಗಿತ್ತು. ಆದರೂ ಪಾಸ್ ಪಡೆದು ಒಳ ಬಂದ ಎನ್‌ಎಸ್‌ಯುಐ ಕಾರ್ಯಕರ್ತರು ಪ್ರತಿಭಟನೆಗೆ ಮುಂದಾದಾಗ ಪೊಲೀಸರು ಅವರನ್ನು ವಶಕ್ಕೆ ಪಡೆದರು. ಬಳಿಕ ರಾಜ್ಯಪಾಲರು ಅವರನ್ನು ಭೇಟಿ ಮಾಡಿ ಅಹವಾಲು ಪಡೆದರು.