ಮಕ್ಕಳಲ್ಲಿ ಇತ್ತೀಚಿನ ದಿನಗಳಲ್ಲಿ ಆತ್ಮವಿಶ್ವಾಸದ ಕೊರತೆ ಎದ್ದು ಕಾಣುತ್ತಿದ್ದು, ಪೋಷಕರು ಮತ್ತು ಗುರುಗಳು ಧನಾತ್ಮಕ ಚಿಂತನೆಗಳನ್ನು ತುಂಬಿ ಆತ್ಮವಿಶ್ವಾಸ ಹೆಚ್ಚಿಸುವ ಕೆಲಸ ಮಾಡಬೇಕು ಎಂದು ಡಾ. ಧನಂಜಯ ಸರ್ಜಿ ಹೇಳಿದ್ದಾರೆ.


ಅವರು ಇಂದು ಗುರು ಪೂರ್ಣೀಮೆ ಅಂಗವಾಗಿ ನಗರದ ದುರ್ಗಿಗುಡಿ ಆಂಗ್ಲಮಾ ಧ್ಯಮ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿರಂತರ ಸಂಸ್ಥೆ ವತಿಯಿಂದ ಹಮ್ಮಿಕೊಂಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ಮನೆಯೇ ಮೊದಲ ಪಾಠಶಾಲೆ. ತಾಯಿಯೇ ಮೊದಲ ಗುರು. ನಾವು ಈ ಹಂತಕ್ಕೆ ಬೆಳೆಯಲು ಗುರುಗಳೇ ಕಾರಣ. ಜಗತ್ತಿನ ಖ್ಯಾತ ವ್ಯಕ್ತಿಗಳಾದ ಥಾಮಸ್ ಆಲ್ವಾ ಎಡಿಸನ್, ಛತ್ರಪತಿ ಶಿವಾಜಿ ಮಹಾರಾಜ್ ಸೇರಿದಂತೆ ಅನೇಕ ಮಹಾನ್ ವ್ಯಕ್ತಿಗಳ ಯಶಸ್ಸಿಗೆ ತಾಯಂದಿರೇ ಕಾರಣ ಎಂದರು.


ಮಕ್ಕಳಿಗೆ ಹಸಿವಿನ ಬೆಲೆ ತಿಳಿಸಬೇಕು. ಅವರಿಗೆ ಸ್ವಂತ ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಇದ್ದು, ಅವರ ವಿವೇಚನೆಗೆ ಬಿಡಿ. ಕೇಳಿದ್ದಕ್ಕೆಲ್ಲಾ ಎಸ್ ಎಂದು ಹೇಳಬೇಡಿ. ಸಣ್ಣಪುಟ್ಟ ಮಕ್ಕಳ ಎಲ್ಲಾ ಸಮಸ್ಯೆಗಳಿಗೆ, ಜಗಳಕ್ಕೆ ಪೋಷಕರು ಮಧ್ಯ ಪ್ರವೇಶ ಮಾಡಬಾರದು. ಹಂಚಿ ತಿನ್ನುವ ಅಭ್ಯಾಸ ಕಲಿಸಿ. ದುಡ್ಡಿನ ಕೊರತೆಯ ಮತ್ತು ಮಹತ್ವದ ಬಗ್ಗೆ ತಿಳಿಸಿ ಎಂದರು.


ಮಕ್ಕಳಿದಂದ ಪೋಷಕರ ಪಾದಪೂಜೆ ನಡೆಯಿತು. ಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯ ಬಿ.ವಿ. ಹೊಳ್ಳುರು, ಕಾರ್ಯಕ್ರಮ ಸಂಘಟಿಸಿದ ನಿರಂತರ ಸಂಸ್ಥೆಯ ಚೈತ್ರಾ ಸಜ್ಜನ್ ಇದ್ದರು.

By admin

ನಿಮ್ಮದೊಂದು ಉತ್ತರ

error: Content is protected !!