ಶಿವಮೊಗ್ಗ, ಜು.03:

ಯಾವುದೇ ಆಮಿಷ, ಒತ್ತಡಗಳಿಗೆ ಮಣಿಯದೇ ಜಾತ್ಯಾತೀತ ಜನತಾದಳದೊಂದಿಗೆ ಹೊಂದಿದ್ದ ಬಾಂದವ್ಯವನ್ನು ಕಳೆದುಕೊಳ್ಳದ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ತಂಗಿಯಾಗಿ, ದೇವೇಗೌಡರ ಪ್ರೀತಿಯ ಮಗಳೂ ಆಗಿರುವ ಶಾರದಾ ಪೂರ್ಯಾನಾಯ್ಕ್ ಅವರಿಗೆ ಜೆಡಿಎಸ್ ಶಾಸಕಾಂಗ ಮಟ್ಟದಲ್ಲಿ ಉನ್ನತ ಹುದ್ದೆ ದೊರೆತಿದೆ.

ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶಾರದಾ ಪೂರ್ಯಾನಾಯ್ಕ ಅವರು ಜೆಡಿಎಸ್ ಶಾಸಕಾಂಗ ಪಕ್ಷದ ಉಪಸಭಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಅವರು ಜೆಡಿಎಸ್ ನ ರಾಷ್ಟೀಯ ಪ್ರಧಾನ ಕಾರ್ಯದರ್ಶಿಗಳೂ ಸಹ ಆಗಿದ್ದರು.


ಶಾರದಾ ಪೂರ್ಯಾನಾಯ್ಕ ಅವರನ್ನು ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕಿಯನ್ನಾಗಿಸುವ ಮೂಲಕ ದಲಿತ ಸಮುದಾಯದ ಮಹಿಳೆಯೋರ್ವರಿಗೆ ಜೆಡಿಎಸ್ ಮಹತ್ವದ ಜವಾಬ್ದಾರಿಯನ್ನು ಕೊಟ್ಟಿದೆ.


ಜೆಡಿಎಸ್ ನ ನಿಷ್ಟಾವಂತರಾದ
ಶಾರದಾ ಪೂರ್ಯಾನಾಯ್ಕ ಅವರು ಶಿವಮೊಗ್ಗದ ಜಿಲ್ಲಾ ಪಂಚಾಯ್ತಿ ಸದಸ್ಯರಾಗಿ, ಅಧ್ಯಕ್ಷರಾಗಿ ರಾಜಕೀಯ ಜೀವನ ಆರಂಭಿಸಿದ್ದು, 2013 ರ ವಿಧಾನಸಭಾ ಚುನಾವಣೆಯಲ್ಲಿ ಶಿವಮೊಗ್ಗ ಗ್ರಾಮಾಂತರ ಮೀಸಲು ಕ್ಷೇತ್ರದಿಂದ ಅಯ್ಕೆಯಾಗಿದ್ದು, 2023 ರ ಚುನಾವಣೆಯಲ್ಲೂ ಗೆದ್ದು ಬಂದಿದ್ದಾರೆ.

ಅವರು ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ತಮ್ಮದೇ ಆದ ಪ್ರೀತಿಯ ಹಿಡಿತ ಹಾಗೂ ಮನೆ ಮಗಳಾಗಿ ಗುರುತಿಸಿಕೊಂಡಿದ್ದಾರೆ.

By admin

ನಿಮ್ಮದೊಂದು ಉತ್ತರ

error: Content is protected !!