ಶಿವಮೊಗ್ಗ, ನ.೦3:
ಶಿವಮೊಗ್ಗದ 16 ಕಡೆ ಲೇ-ಔಟ್‌ಗಳನ್ನು ನಿರ್ಮಿಸಿ ಸುಮಾರು 10 ಸಾವಿರದಷ್ಟು ಜನರಿಗೆ ರಿಯಾಯಿತಿ ದರದಲ್ಲಿ ಅತ್ಯುನ್ನತ ಮಟ್ಟದ ನಿವೇಶನಗಳನ್ನು ನೀಡಿರುವ ಶಿವಮೊಗ್ಗ ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರವು ಬರುವ ದಿನಗಳಲ್ಲಿ ನೆನೆಗುದಿಗೆ ಬಿದ್ದಿರುವ ಅಟಲ್‌ ಬಿಹಾರಿ ವಾಜಪೇಯಿ ಬಡಾವಣೆಯ ಸಮಸ್ಯೆಯನ್ನು ಬಗೆಹರಿಸುವ ಜೊತೆಗೆ ಅರ್ಹರಿಗೆ ನಿವೇಶನದಲ್ಲಿ ಮನೆ ಕಟ್ಟಿಕೊಳ್ಳಲು ಅನುಕೂಲವಾಗುವಂತಹ ವಾತಾವರಣವನ್ನು ನಿರ್ಮಿಸಿಕೊಡತ್ತದೆ ಎಂದು ಸೂಡಾದ ಅಧ್ಯಕ್ಷ ಎಸ್.ಎಸ್.ಜ್ಯೋತಿ ಪ್ರಕಾಶ್ ಇಂದಿಲ್ಲಿ ತಿಳಿಸಿದರು.
ಅವರು ಇಂದು ಬೆಳಗ್ಗೆ ಶಿವಮೊಗ್ಗ ಪ್ರೆಸ್‌ಟ್ರಸ್ಟ್ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡುತ್ತಾ, ೨೦೧೦-೧೧ರ ಸಾಲಿನಲ್ಲಿ ಆರಂಭಗೊಂಡಿದ್ದ ಈ ಬಡಾವಣೆಯ ಬಗ್ಗೆ ಲೋಕಾಯುಕ್ತದಲ್ಲಿ ದೂರು ದಾಖಲಾಗಿದ್ದು, ಇಲ್ಲಿಯವರೆಗೂ ತೀರ್ಪು ನೀಡಿಲ್ಲ. ಇಲ್ಲಿ ಜಮೀನು ನೀಡಿ ನಿವೇಶನ ಪಡೆದ ರೈತರಿಗೂ ಅದನ್ನು ಬಳಸಿಕೊಳ್ಳುವ ಅವಕಾಶ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಅಧ್ಯಕ್ಷನಾದ ದಿನದಿಂದಲೇ ಇದರತ್ತ ಗಮನಹರಿಸಿದ್ದು, ಈಗಾಗಲೇ ೨ಭಾರಿ ಲೋಕಾಯುಕ್ತಕ್ಕೆ ಮನವಿ ಸಲ್ಲಿಸಿ ಅದಷ್ಟು ಬೇಗನೆ ತೀರ್ಪು ನೀಡಲು ಕೋರಿದ್ದೇನೆ. ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಹೇಳಿದರು.
ಶಿವಮೊಗ್ಗ ನಗರದ ಆರ್‌ಎಂಎಲ್ ನಗರ, ಕಲ್ಲಳ್ಳಿ, ಎಲ್‌ಎಲ್‌ಬಿ ನಗರ ಇಸ್ಲಾಪುರ, ಜೆ.ಹೆಚ್.ಪಟೇಲ್ ಬಡಾವಣೆ, ಕುವೆಂಪುನಗರ, ಭದ್ರಾವತಿ ಸೇರಿದಂತೆ ಸೂಡಾದಿಂದ  ನಿವೇಶನಗಳನ್ನು ಹಂಚಲಾಗಿದ್ದು, ಹಿಂದೆ ಭೂಮಿಯ ಬೆಲೆ ಕಡಿಮೆ ಇತ್ತು. ಈಗ ಭೂಮಿಯ ಬೆಲೆ ಹೆಚ್ಚಿರುವುದರಿಂದ ನಿವೇಶನ ಬದಲಿ ಮಧ್ಯಮ ಹಾಗೂ ಬಡವರ್ಗದ ಜನರಿಗೆ ವಸತಿ ಸೌಲಭ್ಯ ಕಲ್ಪಿಸುವ ಯೋಜನೆಗಳನ್ನು ರೂಪಿಸಲಾಗುತ್ತದೆ ಎಂದು ಹೇಳಿದರು.
ವಾಜಪೇಯಿ ಬಡಾವಣೆ ವಿಚಾರದಲ್ಲಿ ೯೪೬೩  ಅರ್ಜಿದಾರರು ವಾಪಾಸ್ ಪಡೆದುಕೊಂಡಿದ್ದಾರೆ. ಈಗ  6460 ಅರ್ಜಿ ಹಂಚಿಕೆಯ ಬಾಕಿ ಇವೆ ಎಂದ ಅವರು, ಅವರಿಗೆಲ್ಲಾ ನಿವೇಶನ ನೀಡುವುದು ಆದ್ಯತೆಯಾಗಿದೆ ಎಂದರು.
ಶಿವಮೊಗ್ಗ ನಗರದ ಹಾಗೂ ಭದ್ರಾವತಿ ನಗರದ ಕೆರೆಗಳ ಅಭಿವದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು,  35ಲಕ್ಷ ರೂ ವೆಚ್ಚದಲ್ಲಿ ತೇವರೆ ಚಟ್ನಳ್ಳಿ ಕೆರೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ ಎಂದ ಅವರು ಕುವೆಂಪು ನಗರ ನಿಧಿಗೆ, ರಾಗಿಗುಡ್ಡ, ಆಲ್ಕೋಳ, ವಿಕಾಸ ಶಾಲೆ ಹಿಂಭಾಗ, ವಾಜಪೇಯಿ ಲೇ-ಔಟ್ ಸೇರಿದಂತೆ 12 ಕೆರೆಗಳ ಒಟ್ಟಾರೆ ಅಭಿವೃಧ್ಧಿಗೆ ಕ್ರಮಕೈಗೊಳ್ಳಲಾಗುವುದು ಎಂದರು.
ನಗರದಲ್ಲಿ 160 ಪಾರ್ಕ್ ಇದೆ. ಖಾಸಗಿ ಮತ್ತು ಸೂಡದಿಂದ ನಿರ್ಮಿಸಲಾದ ಈ ಪಾರ್ಕ್ ಅಭಿವೃದ್ಧಿಗೆ ಸೂಡಾ ಚಿಂತಿಸುತ್ತಿದೆ.  ಆರೋಗ್ಯ ದೃಷ್ಠಿಯಿಂದ ಪಾರ್ಕ್ ಅಭಿವೃದ್ಧಿ ಪಡಿಸಲಾಗುತ್ತಿದ್ದು ಒಪನ್ ಜಿಮ್ ಆರಂಭಿಸಲು ಯೋಜನೆ ಮಾಡಲಾಗಿದೆ. ಸಿಎಂ, ಸಂಸದ ಹಾಗೂ ಜಿಲ್ಲಾ ಉಸ್ತುವರಿ ಸಚಿರಿಂದ ಅಭಿವೃದ್ಧಿಗೆ ಸಹಾಯ ಮಾಡಲಾಗುತ್ತಿದೆ ಎಂದರು.
ಬಡ, ಮಧ್ಯಮ ವರ್ಗದವರಿಗೆ ಅಪಾರ್ಟ್‌ಮೆಂಟ್ ಮನೆ:
ಶಿವಮೊಗ್ಗ ಹಾಗೂ ಭದ್ರಾವತಿ ನಗರದ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ನಿವೇಶನ ನೀಡುವ ಮಹತ್ತರ ಯೋಜನೆಗೆ ಪೂರಕವಾಗಿ ನಿವೇಶನದ ಬದಲು ಅಪಾರ್ಟ್‌ಮೆಂಟ್‌ಗಳ ಮೂಲಕ ಮನೆಗಳನ್ನೇ ನೀಡುವ ಚಿಂತನೆ ನಡೆಸಲಾಗಿದೆ.. ಮುಖ್ಯಮಂತ್ರಿಗಳು ಹಾಗೂ ಸಹಕಾರದೊಂದಿಗೆ ನಗರದ ಹಲವೆಡೆ ಇರುವ ಜಾಗವನ್ನು ಬಳಸಿಕೊಂಡು ಕನಿಷ್ಠ ಒಂದು ಸಾವಿರ ಮನೆಗಳನ್ನು ನಿರ್ಮಿಸಿಕೊಡುವ ಉದ್ದೇಶವಿದೆ ಎಂದು ಹೇಳಿದರು.
ಟ್ರಸ್ಟ್‌ನ ಅಧ್ಯಕ್ಷ ಎನ್. ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ನಾಗರಾಜ್ ನೇರಿಗೆ ಉಪಸ್ಥಿತರಿದ್ದರು.

ನಾನು ಬಿಜೆಪಿಯವನು ಬಂಗಾರಪ್ಪ ಪರಮಾಪ್ತರು!
ಜ್ಯೋತಿ ಪ್ರಕಾಶ್ ಮೂಲತಃ ಬಿಜೆಪಿ ಪಕ್ಷದವನೇ ಆಗಿದ್ದೇನೆ. ಬಂಗಾರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನಾನು ಲಾರಿ ಮಾಲೀಕರ ಸಂಘದ ಅಧ್ಯಕ್ಷನಾಗಿದ್ದೇ. ಬರಗಾಲದಲ್ಲಿ ಬಂಗಾರಪ್ಪ ಉಚಿತ ಧಾನ್ಯ ವಿತರಿಸುವಾಗ ಅವುಗಳ ಸಾಗಾಣಿಕೆಗೆ ಸಂಘದ ಸಹಕಾರಿ ಕೋರಿದ್ದರು. ಪಕ್ಷ ಯಾವುದೇ ಇರಲಿ ಮೂಲಭೂತ ನೆಲೆಗಟ್ಟಿನಲ್ಲಿ ಸ್ಪಂದಿಸಬೇಕು ಎಂಬ ಆಶಯದೊಂದಿಗೆ ಸಹಕರಿಸಿದ್ದೇವು. ನಂತರ ಬಂಗಾರಪ್ಪ ಅವರು ಎಲ್ಲಾ ಸಭೆ ಸಮಾರಂಭಗಳಿಗೆ ನನ್ನನ್ನು ಅತ್ಯಂತ ಪ್ರೀತಿಯಿಂದ ಕರೆಯುತ್ತಿದ್ದರು. ಬಂಗಾರಪ್ಪ ಹಾಗೂ ಯಡಿಯೂರಪ್ಪ ನಾ ಕಂಡ ಮುತ್ಸದ್ದಿ ನಾಯಕರು. ಅವರ ಆಶೀರ್ವಾದವೇ ನಮಗೆ ಸ್ಪೂರ್ತಿ.

By admin

ನಿಮ್ಮದೊಂದು ಉತ್ತರ

You missed

error: Content is protected !!