ಗೆಲುವು ಹತ್ತಿರವಾಗುತ್ತಿದೆ ಎಂದು ಜೆಡಿಎಸ್ ಅಭ್ಯರ್ಥಿ ಆಯನೂರು ಮಂಜುನಾಥ್ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಚುನಾವಣೆಯ ಕೊನೆಯ ಹಂತವನ್ನು ನಾವು ತಲು ಪುತ್ತಿದ್ದೇವೆ. ಎಲ್ಲಾ ವಾರ್ಡ್‌ಗಳಲ್ಲೂ ನಮ್ಮ ಮುಖಂ ಡರು, ಕಾರ್ಯಕರ್ತರು ಪ್ರಚಾರ ಮಾಡಿದ್ದಾರೆ. ಪ್ರತಿಕ್ರಿಯೆ ಅದ್ಭುತವಾಗಿದೆ. ಗೆಲುವು ಹತ್ತಿರವಾಗಿದೆ ಎಂದರು.


ಎರಡೂ ಪಕ್ಷಗಳು ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಮತ ಕೇಳುತ್ತಿದ್ದಾರೆ. ಆದರೆ, ನಾವು ಜಾತ್ಯತೀತವಾಗಿ ಮತ್ತು ಶಾಂತಿಗಾಗಿ ಮತ ಕೇಳುತ್ತಿ ದ್ದೇವೆ. ಅಲ್ಪಸಂಖ್ಯಾತರು, ತಮಿಳು ಸಂಘಟನೆಗಳು, ಬಂಜಾರ ಸಮಾಜ ಹೀಗೆ ಎಲ್ಲಾ ವರ್ಗದ ಸಮಾಜಗಳು ನಮ್ಮ ಜೊತೆಗಿವೆ. ಹೀಗಾಗಿ ನಮಗೆ ಆಶಾಭಾವನೆ ಮೂಡಿದೆ ಎಂದರು.


ಕಾಂಗ್ರೆಸ್ ಅಭ್ಯರ್ಥಿ ಜಾತಿಯ ಅದರಲ್ಲೂ ಒಳಪಂಗಡದ ಹೆಸರಲ್ಲಿ ಸಭೆ ನಡೆಸುತ್ತಿರುವುದು, ಮತ ಕೇಳುವುದು ನೀತಿಸಂಹಿತೆ ಉಲ್ಲಂಘನೆಯಾಗಿದೆ. ಈ ಬಗ್ಗೆ ಚುನಾವಣಾಧಿಕಾರಿಗಳಿಗೆ ದೂರು ನೀಡಲಾ ಗುವುದು ಎಂದರು. ಪ್ರಧಾನಿ ಮೋದಿ ಅವರು ಆಯನೂರಿಗೆ ಬಂದಾಗ ಜನ ಇರಬಹುದು. ಅದು ೧೦ ವಿಧಾನಸಭಾ ಕ್ಷೇತ್ರಗಳಿಂದ ಬಂದ ಜನರು ಅದಕ್ಕೆ ಲೆಕ್ಕ ಹಾಕಿದರೆ ತುಂಬಾ ಕಡಿಮೆ. ರಾಷ್ಟ್ರ ರಾಜಕಾರಣವೇ ಬೇರೆ.

ರಾಜ್ಯ ರಾಜಕಾರಣವೇ ಬೇರೆ ಎಂದ ಅವರು, ಬಿ.ಎಸ್. ಯಡಿಯೂರಪ್ಪ ಅವರು ನನಗೆ ಫೋನ್ ಮಾಡಿ ಶುಭ ಹಾರೈಸಿಲ್ಲ. ಆದರೆ, ಹಾರೈಸಿದ್ದಾರೆ ಎಂದು ಸುದ್ದಿಯಾಗಿದೆ. ಹಾಗೊಮ್ಮೆ ನಿಜವಾಗಿದ್ದರೆ ನಾನೇ ಭಾಗ್ಯಶಾಲಿ. ಅವರ ಗರಡಿಯಲ್ಲಿ ನಾವು ಬೆಳೆದವರು ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.


ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್, ಜೆಡಿಎಸ್ ಜಿಲ್ಲಾಧ್ಯಕ್ಷ ಎಂ. ಶ್ರೀಕಾಂತ್, ಮುಖಂಡರಾದ ವೈ.ಹೆಚ್. ನಾಗರಾಜ್, ಆಯನೂರು ಶಿವಾನಾಯ್ಕ್, ಹಿರಣ್ಣಯ್ಯ, ಸಂಪತ್, ಸಮೀವುಲ್ಲಾ, ಧೀರರಾಜ್ ಹೊನ್ನವಿಲೆ, ಹೆಚ್. ಪಾಲಾಕ್ಷಿ, ನಾಗರಾಜ್ ಕಂಕಾರಿ, ದೀಪಕ್ ಸಿಂಗ್, ಐಡಿಯಲ್ ಗೋಪಿ, ಶಿ.ಜು. ಪಾಶಾ

By admin

ನಿಮ್ಮದೊಂದು ಉತ್ತರ

error: Content is protected !!