ಸಾಗರ : ಕಾಂಗ್ರೇಸ್ ಅಭ್ಯರ್ಥಿ ಬಿಜೆಪಿಯವರನ್ನು ಓಡಾಡಲು ಬಿಡಬೇಡಿ ಎಂದು ತಮ್ಮ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. ಕ್ಷೇತ್ರದಲ್ಲಿ ಪರಸ್ಪರ ದ್ವೇಷಾಸೂಯೆ ಸೃಷ್ಟಿಸುವ ಕೆಲಸ ಕಾಂಗ್ರೇಸ್ ಅಭ್ಯರ್ಥಿ ಮಾಡುತ್ತಿದ್ದು, ಬಿಜೆಪಿ ಕಾರ್ಯಕರ್ತರು ಯಾವುದೇ ಗಲಾಟೆಗೂ ಮುಂದಾಗಬಾರದು ಎಂದು ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ಹರತಾಳು ಹಾಲಪ್ಪ ಕರೆ ನೀಡಿದ್ದಾರೆ.


ಇಲ್ಲಿನ ಚಾಮರಾಜಪೇಟೆ ರಸ್ತೆಯಲ್ಲಿ ಸೋಮವಾರ ಬಿಜೆಪಿ ಪ್ರಚಾರ ರ‍್ಯಾಲಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜಗಳ ಹಚ್ಚಿಹಾಕಿ ಅಭ್ಯರ್ಥಿ ಮೇ ೧೩ರ ನಂತರ ಸೋತು ಬೆಂಗಳೂರು ಸೇರಿ ಕೊಳ್ಳುತ್ತಾರೆ. ಆಮೇಲೆ ಸಮಸ್ಯೆ ಎದುರಿಸುವವರು ಕಾರ್ಯಕರ್ತರು. ಇಂತಹ ಗಲಾಟೆ ಹಚ್ಚಿಹಾಕುವವರ ವಿರುದ್ದ ಎರಡೂ ಪಕ್ಷದವರು ಎಚ್ಚರಿಕೆಯಿಂದ ಇರಬೇಕು. ನಮ್ಮ ಕಾರ್ಯಕರ್ತರ ರಕ್ಷಣೆ ನಮ್ಮ ಆದ್ಯ ಕರ್ತವ್ಯ ಎಂದು ಹೇಳಿದರು.


ಕಾಂಗ್ರೇಸ್ ಪಕ್ಷ ಅಧಿಕಾರಕ್ಕೆ ಬಂದರೆ ದೇಶದಲ್ಲಿ ಭಯೋತ್ಪಾದಕ ಶಕ್ತಿಗಳಿಗೆ ಕುಮ್ಮಕ್ಕು ಕೊಟ್ಟಂತೆ ಆಗುತ್ತದೆ. ಭಜರಂಗ ದಳ ನಿಷೇದ, ಗೋಹತ್ಯಾ ಕಾಯ್ದೆ ವಾಪಾಸ್ ಪಡೆಯುವುದು ಕಾಂಗ್ರೆಸ್ ಅಜೆಂಡವಾಗಿದೆ. ಕಾಂಗ್ರೇಸ್‌ನವರು ಮತಿಭ್ರಮಣೆಗೆ ಒಳಗಾದವರಂತೆ ಪ್ರಣಾಳಿಕೆ ಘೋಷಣೆ ಮಾಡಿದ್ದಾರೆ. ಕಾಂಗ್ರೇಸ್ ಗೆದ್ದರೆ ಸಾಗರದಿಂದ ದೆಹಲಿವರೆಗೂ ದೇಶವಿರೋಧಿ ಶಕ್ತಿಗಳಿಗೆ ಬೆಂಬಲ ಸಿಕ್ಕಂತೆ ಆಗುತ್ತದೆ. ಮತದಾರರು ಕಾಂಗ್ರೇಸ್ ಪಕ್ಷವನ್ನು ಸೋಲಿಸುವ ಕೆಲಸ ಮಾಡಬೇಕು ಎಂದು ಕರೆ ನೀಡಿದರು.


ರಾಜ್ಯದಲ್ಲಿ ಯಡಿಯೂರಪ್ಪ ಅವರು ಕೃಷ್ಣನಾಗಿ, ಬಸವರಾಜ ಬೊಮ್ಮಾಯಿ ಅವರು ಅರ್ಜುನನಾಗಿ ಬಿಜೆಪಿ ಚುನಾವಣಾ ರಥವನ್ನು ಮುನ್ನಡೆಸುತ್ತಿದ್ದು, ಅಂತಿಮವಾಗಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯುವುದು ನಿಶ್ಚಿತ. ಎಲ್ಲರೂ ಸೇರಿ ಒಟ್ಟಾಗಿ ಸಾಗರ ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಗೆ ಶ್ರಮಿಸೋಣ ಎಂದು ಹೇಳಿದರು.


ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಮಾತನಾಡಿ, ಕ್ಷೇತ್ರದ ಎಲ್ಲ ಹೋಬಳಿಗಳಲ್ಲೂ ಬಿಜೆಪಿ ಮುನ್ನಡೆ ಸಾಧಿಸುತ್ತಿದ್ದು ಹರತಾಳು ಹಾಲಪ್ಪ ಅವರು ೨೧ಸಾವಿರ ಮತಗಳ ಅಂತರದಿಂದ ಗೆಲ್ಲುವುದು ನಿಶ್ಚಿತ. ಪಕ್ಷದ ಪ್ರಮುಖರು, ಕಾರ್ಯಕರ್ತರು ಮೈಮರೆಯದೆ ಮನೆಮನೆಗೆ ತೆರಳಿ ಬಿಜೆಪಿ ಇನ್ನಷ್ಟು ಹೆಚ್ಚಿನ ಅಂತರದಿಂದ ಜಯಗಳಿಸಲು ಮತದಾರರ ಮನವೊಲಿಸಿ ಬಿಜೆಪಿಗೆ ಮತಹಾಕಿಸಬೇಕು ಎಂದು ಮನವಿ ಮಾಡಿದರು.
ಡಾ. ರಾಜನಂದಿನಿ ಕಾಗೋಡು, ರಾಕೇಶ್ ನೈನಿತಾಲ್, ಮಧುರಾ ಶಿವಾನಂದ್, ಲೋಕನಾಥ ಬಿಳಿಸಿರಿ,

ಗಣೇಶಪ್ರಸಾದ್, ಆರ್.ಶ್ರೀನಿವಾಸ್ ಮೇಸ್ತ್ರಿ, ಹು.ಭಾ.ಅಶೋಕ್, ಸಂತೋಷ್ ಶೇಟ್, ಸತೀಶ್ ಕೆ., ಭರ್ಮಪ್ಪ ಅಂದಾಸುರ, ರೇವಪ್ಪ ಹೊಸಕೊಪ್ಪ ಇನ್ನಿತರರು ಹಾಜರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!