ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಶಿವಮೊಗ್ಗ ಗ್ರಾಮಾಂತರ ಪ್ರದೇಶದ ಅಭ್ಯರ್ಥಿಗೆ ಸಂಬಂಧಿಸಿದಂತೆ ಬೋವಿ ಸಮಾಜಕ್ಕೆ ಅನ್ಯಾಯ ಮಾಡಿದ್ದು, ಬೋವಿ ಸಮಾಜವು ಈ ಕ್ಷೇತ್ರದಲ್ಲಿ ಬಂಡಾಯ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತದೆ ಎಂದು ಸಮಾಜದ ಜಿಲ್ಲಾಧ್ಯಕ್ಷ ಎಸ್. ರವಿಕುಮಾರ್ ಹೇಳಿದರು.
ಅವರು ಇಂದು ಹೋಟೆಲ್ ಮಥುರಾ ಪ್ಯಾರಾಡೈಸ್ ಸಭಾಂಗಣದಲ್ಲಿ ನಡೆದ ಪತ್ರಿಕಾ ಗೋಷ್ಢಿಯಲ್ಲಿ ಮಾತನಾಡಿ, ಗ್ರಾಮಾಂತರ ಮೀಸಲು ಕ್ಷೇತ್ರಕ್ಕೆ ಬೋವಿ ಸಮಾಜಕ್ಕೆ ಟಿಕೆಟ್ ಸಿಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಕಳೆದ ಚುನಾವಣೆಯಲ್ಲಿ ಹೀನಾಯವಾಗಿ ಸೋತ ಕಾಂಗ್ರೆಸ್ ಅಭ್ಯರ್ಥಿಗೆ ಟಿಕೆಟ್ ನೀಡ ಲಾಗಿದೆ. ಹಾಗೆಯೇ ಬಿಜೆಪಿಯಿಂದಲೂ ಕೂಡ ನಮ್ಮ ಸಮಾಜದವರಿಗೆ ಟಿಕೆಟ್ ನೀಡಿಲ್ಲ. ಇದನ್ನು ನಮ್ಮ ಸಮಾಜ ತೀವ್ರವಾಗಿ ಖಂಡಿಸು ತ್ತದೆ. ಅಲ್ಲದೆ ಸಮರ್ಥ ಅಭ್ಯರ್ಥಿಯನ್ನು ಚುನಾವಣೆಗೆ ಬಂಡಾಯವಾಗಿ ನಿಲ್ಲಿಸುತ್ತೇವೆ ಎಂದರು.
ರಾಜ್ಯ ವಿಧಾನಸಭೆ ಚುನಾವಣೆಗೆ ಭೋವಿ ಸಮಾಜಕ್ಕೆ ರಾಜಕೀಯ ಪಕ್ಷಗಳಿಂದ ಸೂಕ್ತ ರಾಜಕೀಯ ಪ್ರಾತ್ಯನಿಧ್ಯ ಸಿಗಬಹು ದೆನ್ನುವ ನಿರೀಕ್ಷೆ ಹುಸಿಯಾಗಿದೆ. ಟಿಕೆಟ್ ನೀಡುವ ವಿಚಾರದಲ್ಲಿ ಕಾಂಗ್ರೆಸ್-ಬಿಜೆಪಿ ಪಕ್ಷಗಳಿಂದ ಭಾರೀ ಅನ್ಯಾಯವಾಗಿದೆ. ಇದು ಇಡೀ ಸಮಾಜಕ್ಕೆ ಆಘಾತ ತಂದಿದೆ ಎಂದರು.
ರಾಜ್ಯದಲ್ಲಿ ಸುಮಾರು ೩೫ರಿಂದ ೪೦ ಲಕ್ಷದಷ್ಟು ಜನ ಸಂಖ್ಯೆಯನ್ನು ಭೋವಿ ಸಮಾಜ ಹೊಂದಿದೆ. ಶಿವಮೊಗ್ಗ ಜಿಲ್ಲೆಯಲಿನಾವು ಒಂದೂವರೆ ಲಕ್ಷದಷ್ಟು ಜನಸಂಖ್ಯೆ ಹೊಂದಿದ್ದೇವೆ. ಇಷ್ಟಾಗಿಯೂ ಸಮಾಜವನ್ನು ಎರಡು ರಾಷ್ಟ್ರೀಯ ಪಕ್ಷಗಳು ಕಡೆಗಣಿಸಿರುವುದು ಅಕ್ಷಮ್ಯ ಅಪರಾಧವೇ ಆಗಿದೆ ಎಂದು ಕಿಡಿಕಾರಿದರು.
ಸುದ್ದಿಗೋಷ್ಟಿಯಲ್ಲಿ ಸಮಾಜದ ಮುಖಂಡರಾದ ಧೀರರಾಜ್ ಹೊನ್ನವಿಲೆ, ತಿಮ್ಮರಾಜು, ಹರ್ಷ ಭೋವಿ, ವಿರೇಶ್ ಕ್ಯಾತಿನಕೊಪ್ಪ, ಮಾರಪ್ಪ, ಟಿ.ಕೃಷ್ಣಪ್ಪ ಹಾಗೂ ಹುತ್ತೇಶ್ ಸೇರಿದಂತೆ ಹಲವರಿದ್ದರು.