ವೀರಶೈವ ಲಿಂಗಾಯತರಿಗೆ ಪ್ರಾಮುಖ್ಯತೆ ಕೊಡಬೇಡಿ ಎನ್ನುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿಯವರ ಹೇಳಿಕೆ ಖಂಡನೀಯ ಮತ್ತು ಇಡೀ ಸಮುದಾಯಕ್ಕೆ ಮಾಡಿದ ಅವಮಾನ. ಇದನ್ನು ನಾವು ಉಗ್ರವಾಗಿ ಖಂಡಿಸುತ್ತೇವೆ
ಎಂದು ಶಿವಮೊಗ್ಗ ಜಿಲ್ಲಾ ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ಜಿಲ್ಲಾಧ್ಯಕ್ಷ ಬಿ. ಶಿವರಾಜ್, ಪ್ರಧಾನ ಕಾರ್ಯದರ್ಶಿ ನವೀನ್ ವಾರದ್ ತಿಳಿಸಿದ್ದಾರೆ.
ಬಹುಸಂಖ್ಯಾತರಾದ ವೀರಶೈವ ಲಿಂಗಾಯುತರ ಬಲದಿಂದಲೇ ಬಿ.ಜೆ.ಪಿ. ಅಧಿಕಾರದಲ್ಲಿದೆ. ನಮ್ಮ ಸಮಾಜದ ಪ್ರಬಲ ಮುಖಂಡರನ್ನು ಕಡೆಗಣಿಸಿದ್ದಕ್ಕಾಗಿ ೨೦೧೩ರ ವಿಧಾನಸಭೆ ಚುನಾವಣೆಯಲ್ಲಿ ಬಿ.ಜೆ.ಪಿ.ಗೆ ಆದ ಗತಿ ನೆನಪಿರಲಿ
ನಿಮಗೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ. ವೀರಶೈವ ಲಿಂಗಾಯತ ಸಂಘಸಂಸ್ಥೆಗಳು, ಮಠ ಮಾನ್ಯಗಳು ಇಡೀ ಕರ್ನಾಟಕಕ್ಕೆ ಜಾತಿ-ಧರ್ಮಗಳನ್ನು ಮೀರಿ ಆರ್ಥಿಕವಾಗಿ, ಧಾರ್ಮಿಕವಾಗಿ, ಶೈಕ್ಷಣಿಕವಾಗಿ ಕೊಡುಗೆ ನೀಡಿರುವುದು ನಿಮಗೆ ತಿಳಿದಿಲ್ಲವೆ ಎಂದು ಪ್ರಶ್ನಿಸಿದ್ದಾರೆ.
ವೀರಶೈವ ಲಿಂಗಾಯುತ ಸಮಾಜಕ್ಕೆ ತಕ್ಷಣವೇ ಸಿ.ಟಿ.ರವಿ ಕ್ಷಮೆ ಕೇಳಬೇಕು. ಇಲ್ಲದೆ ಹೋದರೆ ಮುಂದಿನ ದಿನಗಳಲ್ಲಿ ನೀವು ಚುನಾವಣಾ ಪ್ರಚಾರದಲ್ಲಿ ಕಂಡುಬಂದಲ್ಲಿ ನಿಮಗೆ ಮುತ್ತಿಗೆ ಹಾಕುವುದಲ್ಲದೆ ಕಿತ್ತೋದ
ಸಿ.ಟಿ. ರವಿ ಎಂದು ಘೋಷಣೆ ಕೂಗಲಾಗುವುದು. ಸಿ.ಟಿ. ರವಿ ವಿರುದ್ಧ ತಕ್ಷಣವೇ ಕ್ರಮ ಕೈಗೊಂಡು ಅವರ ಎಲ್ಲಾ ಸ್ಥಾನಮಾನ ರದ್ದುಗೊಳಿಸಿ ಅವರನ್ನು ಪಕ್ಷದಿಂದ ಉಚ್ಛಾಟಿಸಬೇಕು ಎಂದು ಒತ್ತಾಯಿಸಿದ್ದಾರೆ.