ಶಿವಮೊಗ್ಗ : ನಗರ ವಿಧಾನಸಭಾ ಕ್ಷೇತ್ರದ ವಾರ್ಡ್ ನಂಬರ್ 20 ಹೊಸಮನೆ ಬಡಾವಣೆಯ ಬೂತ್ ನಂಬರ್ 74 ರಲ್ಲಿ ಮನೆ ಮನೆಗೆ ತೆರಳಿ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯ ಘೋಷಣೆಯಾದ

ಪ್ರತಿ ಮನೆಯ ಯಜಮಾನಿಗೆ ಎರಡು ಸಾವಿರ ರೂಪಾಯಿ ಹಾಗೂ 200 ಯೂನಿಟ್ ಉಚಿತ ವಿದ್ಯುತ್ ಗ್ಯಾರಂಟಿ ಕಾರ್ಡ್ ಗಳನ್ನು ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕಿ  ರೇಖಾ ರಂಗನಾಥ್ ರವರ ನೇತೃತ್ವದಲ್ಲಿ ವಿತರಿಸಲಾಯಿತು.

ಬಡಾವಣೆಯಲ್ಲಿನ ಮನೆ ಮನೆಗೆ ತೆರಳಿ ಕಾರ್ಡ್ ವಿತರಣೆ ಮಾಡುತ್ತಾ ಜನತೆಯೊಂದಿಗೆ ಮಾತನಾಡಿದ ರೇಖಾ ರಂಗನಾಥ್,  ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೂಡಲೇ ನಮ್ಮ ಪಕ್ಷದ ಪ್ರಣಾಳಿಕೆಯಾದ

ಪ್ರತಿ ಮನೆಯ ಯಜಮಾನಿಗೆ ಎರಡು ಸಾವಿರ ರೂಪಾಯಿ ಹಾಗೂ ಇನ್ನೂರು ಯೂನಿಟ್ ವಿದ್ಯುತ್ತನ್ನು ಉಚಿತವಾಗಿ ನೀಡಲಾಗುವುದು. ಇದು ಭರವಸೆಯಲ್ಲ, ಇದು ಬಡವರ ಬದುಕಿಗೆ ಕಾಂಗ್ರೆಸ್ ಪಕ್ಷ ನೀಡುತ್ತಿರುವ ಗ್ಯಾರಂಟಿ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಯುವ ಮುಖಂಡರಾದ ಕೆ. ರಂಗನಾಥ್ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಪಿ.ಗಿರೀಶ್, ಉತ್ತರ ಬ್ಲಾಕ್ ಯುವ ಕಾಂಗ್ರೆಸ್  ಕಾಂಗ್ರೆಸ್  ಉಪಾಧ್ಯಕ್ಷ ಕೆ.ಎಲ್. ಪವನ್,  ಹೊಸಮನೆ ವಾರ್ಡ್  ಯುವ ಕಾಂಗ್ರೆಸ್  ಅಧ್ಯಕ್ಷ ಪ್ರಸನ್ನ, ಧನಲಕ್ಷ್ಮಿ ರೇಣುಕಮ್ಮ ಹಾಗೂ ಇತರರು ಇದ್ದರು.

By admin

ನಿಮ್ಮದೊಂದು ಉತ್ತರ

error: Content is protected !!