ಶಿವಮೊಗ್ಗ, ಸೆ.24:
ಮನೆಗಳ್ಳತನ ಪ್ರಕರಣದ ಇಬ್ಬರು ಆರೋಪಿತರ ಬಂಧಿಸುವ ಜೊತೆಗೆ 50 ಗ್ರಾಂ ತೂಕದ ಬಂಗಾರದ ಆಭರಣಗಳು ಹಾಗೂ 240 ಗ್ರಾಂ ತೂಕದ ಬೆಳ್ಳಿಯ ಆಭರಣಗಳು ಸೇರಿ ಒಟ್ಟು ಅಂದಾಜು ಮೌಲ್ಯ ರೂ 2,32,500/- (ರೂಪಾಯಿ ಎರಡು ಲಕ್ಷದ ಮೂವತ್ತೆರಡು ಸಾವಿರದ ಐದು ನೂರು) ಆಭರಣಗಳ ವಶಕ್ಕೆ ಪಡೆದಿರುವ ಘಟನೆ ಭದ್ರಾವತಿ ಗ್ರಾಮಾಂತರ ಸಿಪಿಐ ಹಾಗೂ ಹೊಳೆಹೊನ್ನೂರು ಪೊಲೀಸರಿಂದ ನಡೆದಿದೆ.
ಭದ್ರಾವತಿ ಗ್ರಾಮಾಂತರ ವೃತ್ತ ವ್ಯಾಪ್ತಿಯಲ್ಲಿ ದಾಖಲಾದ ಮನೆಗಳ್ಳತನ ಪ್ರಕರಣಗಳಲ್ಲಿ ಆರೋಪಿತರು ಹಾಗೂ ಕಳುವಿನ ಮಾಲಿನ ಪತ್ತೆ ಬಗ್ಗೆ
ಸುಧಾಕರ್ ನಾಯಕ್ ,‌ ಡಿವೈಎಸ್.ಪಿ ಭದ್ರಾವತಿ ಉಪ ವಿಭಾಗ ರವರ ಮಾರ್ಗದರ್ಶನದಲ್ಲಿ
ಮಂಜುನಾಥ್ ಈ. ಸಿಪಿಐ ಭದ್ರಾವತಿ ಗ್ರಾಮಾಂತರ ವೃತ್ತ ರವರ ನೇತೃತ್ವದ, ಪಿಎಸ್ಐ ಹಾಗೂ ಸಿಬ್ಬಂದಿಗಳನ್ನೊಳಗೊಂಡ ತಂಡವು ಕಾರ್ಯಾಚರಣೆ ನಡೆಸಿ, ಪ್ರಕರಣಗಳ ಆರೋಪಿತರಾದ ನಾಗರಾಜನಾಯ್ಕ, ಮಾವಿನಕಟ್ಟೆ ಚನ್ನಗಿರಿ ದಾವಣಗೆರೆ, ಗಣೇಶ ನಾಯ್ಕ ಮಾವಿನಕಟ್ಟೆ ಚನ್ನಗಿರಿ ದಾವಣಗೆರೆ ರವರನ್ನು ಬಂಧಿಸಿ ವಸ್ತುಗಳನ್ನು ವಶಕ್ಕೆ‌ಪಡೆಯಲಾಗಿದೆ.
ಹೊಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯ* ಅಶೊಕನಗರದ ವಾಸದ ಮನೆಯೊಂದರಲ್ಲಿ ಕಳ್ಳತನ ಮಾಡಿದ 40 ಗ್ರಾಂ ತೂಕದ ಬಂಗಾರದ ಆಭರಣಗಳು ಹಾಗೂ 240 ಗ್ರಾಂ ತೂಕದ ಬೆಳ್ಳಿಯ ಆಭರಣಗಳು, ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳ್ಳಿಗೆರೆ ಗ್ರಾಮದ ವಾಸದ ಮನೆಯೊಂದರಲ್ಲಿ ಕಳ್ಳತನ ಮಾಡಿದ 10 ಗ್ರಾಂ ಬಂಗಾರದ ಆಭರಣಗಳು ಸೇರಿ
ಒಟ್ಟು ರೂ 2,32,500/- (ರೂಪಾಯಿ ಎರಡು ಲಕ್ಷದ ಮೂವತ್ತೆರಡು ಸಾವಿರದ ಐದು ನೂರು) ಮೌಲ್ಯದ
50 ಗ್ರಾಂ ತೂಕದ ಬಂಗಾರದ ಆಭರಣಗಳು ಹಾಗೂ 240 ಗ್ರಾಂ ತೂಕದ ಬೆಳ್ಳಿಯ ಆಭರಣಗಳ ನ್ನು ವಶಕ್ಕೆ ಪಡೆಯಲಾಗಿದೆ.
ಮುಖ ಕವಚ ಮರೆತವರಿಗೆ ದಂಡ!
ಶಿವಮೊಗ್ಗ ಜಿಲ್ಲೆಯಾದ್ಯಂತ Face ಮಾಸ್ಕ್ ಧರಿಸದವರ ವಿರುದ್ಧ ಒಟ್ಟು 477 ಪ್ರಕರಣಗಳನ್ನು ದಾಖಲಿಸಿ ರೂ 81,400/- (ರೂಪಾಯಿ ಎಂಬತ್ತೊಂದು ಸಾವಿರದ ನಾಲ್ಕು ನೂರು) ದಂಡ ವಿಧಿಸಿದೆ.
ಇಂದು ಶಿವಮೊಗ್ಗ ಜಿಲ್ಲೆಯಾದ್ಯಂತ Face mask ಧರಿಸದವರ ವಿರುದ್ಧ ಪೊಲೀಸ್ ಇಲಾಖೆ ಯಿಂದ ಕಾರ್ಯಾಚರಣೆ ನಡೆಸಿ ಒಟ್ಟು 477 ಪ್ರಕರಣಗಳನ್ನು ದಾಖಲಿಸಿ ರೂ 81,400/- (ರೂಪಾಯಿ ಎಂಬತ್ತೊಂದು ಸಾವಿರದ ನಾಲ್ಕು ನೂರು) ದಂಡ ವಿಧಿಸಿ ಕ್ರಮ ಕೈಗೊಂಡಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಶಾಂತರಾಜ್ ಅವರು ತಿಳಿಸಿದ್ದಾರೆ.

ಗಾಂಜಾ ಬೇಟೆ


ಗಾಂಜಾ ವಶ
ಮಾದಕ ವಸ್ತು 28 ಗಾಂಜಾ ಗಿಡಗಳ ವಶ ಹಾಗೂ ಸೊರಬ ಪೊಲೀಸ್ ಠಾಣೆಯಲ್ಲಿ NDPS ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಿದೆ.

ಸೊರಬ ಪೊಲೀಸ್ ಠಾಣಾ ವ್ಯಾಪ್ತಿಯ ಕಣ್ಣೂರು ಗ್ರಾಮದ ವಾಸಿ ಆರೋಪಿ ಪರಶುರಾಮನು ತನ್ನ ಜಮೀನಿನಲ್ಲಿ ಮಾದಕ ವಸ್ತು ಗಾಂಜಾ ಗಿಡಗಳನ್ನು ಮಾರಾಟ ಮಾಡುವ ಉದ್ದೇಶದಿಂದ ಅಕ್ರಮವಾಗಿ ಬೆಳೆದಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆಬಶ್ರೀನಿವಾಸಲು IPS, ಎ.ಎಸ್.ಪಿ ಶಿಕಾರಿಪುರ ಉಪ ವಿಭಾಗ ರವರ ಮಾರ್ಗದರ್ಶನದಲ್ಲಿ ಮರುಳಸಿದ್ದಪ್ಪ ಪೊಲೀಸ್ ನಿರೀಕ್ಷಕರು, ಸೊರಬ ವೃತ್ತ ನೇತೃತ್ವದಲ್ಲಿ ಪ್ರಶಾಂತ್ ಕುಮಾರ್, ಪಿಎಸ್ಐ, ಸೊರಬ ಪೊಲೀಸ್ ಠಾಣೆಯ ಸಿಬ್ಬಂದಿಗಳನ್ನೊಳಗೊಂಡ ತಂಡವು ಕಾರ್ಯಾಚರಣೆ ನಡೆಸಿ, ಆರೋಪಿ ಪರಶುರಾಮ ಈತನು ಕಣ್ಣುರು ಗ್ರಾಮದಲ್ಲಿನ ತನ್ನ ಜಮೀನಿನಲ್ಲಿ ಅಕ್ರಮವಾಗಿ ಬೆಳೆದಿದ್ದ ಒಟ್ಟು 28 ಗಾಂಜಾ ಗಿಡಗಳನ್ನು ವಶಪಡಿಸಿಕೊಂಡಿರುತ್ತದೆ. ಆರೋಪಿ ಪರಶುರಾಮನು ತಲೆ ಮರೆಸಿಕೊಂಡಿದ್ದು, ಆತನ ವಿರುದ್ಧ ಸೊರಬ ಪೊಲೀಸ್ ಠಾಣೆಯಲ್ಲಿ NDPS ಕಾಯ್ದೆ ರೀತ್ಯ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದೆ. ಮತ್ತೊಂದು ಗಾಂಜಾ ವಿಷಯ ಮಾದಕ ವಸ್ತು ಗಾಂಜಾ ಗಿಡಗಳನ್ನು ಬೆಳೆದ ಆರೋಪಿಯ ಬಂಧನ ಹಾಗೂ ಒಟ್ಟು 216 ಗಾಂಜಾ ಗಿಡಗಳನ್ನು ವಶಪಡಿಸಿಕೊಂಡು, ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ NDPS ಕಾಯ್ದೆ ರೀತ್ಯಾ ಪ್ರತ್ಯೇಕ 02 ಪ್ರಕರಣಗಳನ್ನು ದಾಖಲಿಸಿದೆ.

ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮಾಸ್ತಿಬೈಲು ಗ್ರಾಮದಲ್ಲಿ ಆರೋಪಿತರು ತಮ್ಮ ಜಮೀನುಗಳಲ್ಲಿ ಮಾದಕ ವಸ್ತು ಗಾಂಜಾ ಗಿಡಗಳನ್ನು ಮಾರಾಟ ಮಾಡುವ ಉದ್ದೇಶದಿಂದ ಅಕ್ರಮವಾಗಿ ಬೆಳೆದಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಶ್ರೀನಿವಾಸಲು IPS, ಎ.ಎಸ್.ಪಿ ಶಿಕಾರಿಪುರ ಉಪ ವಿಭಾಗ ರವರ ಮಾರ್ಗದರ್ಶನದಲ್ಲಿ ಗುರುರಾಜ್ ಎನ್ ಮೈಲಾರ್ ಪೊಲೀಸ್ ನಿರೀಕ್ಷಕರು, ಶಿಕಾರಿಪುರ ವೃತ್ತ ನೇತೃತ್ವದಲ್ಲಿ ರವಿ ಕುಮಾರ್, ಪಿಎಸ್ಐ ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆ ನೇತೃತ್ವದಲ್ಲಿ,
ಸಿಬ್ಬಂದಿಗಳನ್ನೊಳಗೊಂಡ ತಂಡವು *ಕಾರ್ಯಾಚರಣೆ ನಡೆಸಿ ಆರೋಪಿ ಕುಮಾರ 28 ವರ್ಷ, ವಾಸ ಮಾಸ್ತಿಬೈಲು ಗ್ರಾಮ, ಶಿಕಾರಿಪುರ ಈತನನ್ನು ಬಂಧಿಸಿ ಆರೋಪಿಯ ಜಮೀನಿನಲ್ಲಿ ಬೆಳೆದಿದ್ದ *ಒಟ್ಟು 207 ಗಾಂಜಾ ಗಿಡಗಳನ್ನು* ವಶಪಡಿಸಿಕೊಂಡಿರುತ್ತದೆ.
ಆರೋಪಿ ಕನ್ನಪ್ಪ @ ಗುಂಡ, 40 ವರ್ಷ* ವಾಸ ದೇವರಹಳ್ಳಿ ಶಿಕಾರಿಪುರ ಈತನು ತಲೆ ಮರೆಸಿಕೊಂಡಿದ್ದು ಆರೋಪಿಯ ಜಮೀನಿನಲ್ಲಿ ಬೆಳೆದಿದ್ದ ಒಟ್ಟು 09 ಗಾಂಜಾ ಗಿಡಗಳನ್ನು ಅಮಾನತ್ತು ಪಡಿಸಿಕೊಂಡಿರುತ್ತದೆ. ಆರೋಪಿತರ ವಿರುದ್ಧ ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ NDPS ಕಾಯ್ದೆ ರೀತ್ಯ ಪ್ರತ್ಯೇಕ 02 ಪ್ರಕರಣಗಳನ್ನು ದಾಖಲಿಸಿ ತನಿಖೆ ಕೈಗೊಂಡಿದೆ.

ಗಾಂಜಾ ವಿಷಯದ ಮಾಹಿತಿ ನೀಡಿ. ನಿಮ್ಮ ಗುಟ್ಟು ಬಿಟ್ಟುಕೊಡೊಲ್ಲ ಹಾಗೂ ಮರೆಯದೇ ಮಾಹಿತಿ ನೀಡಲು ಎಸ್ಪಿ ಶಾಂತರಾಜ್ ಅವರು ಕೋರಿದ್ದಾರೆ.

ಗಾಂಜಾ

By admin

ನಿಮ್ಮದೊಂದು ಉತ್ತರ

error: Content is protected !!