ಶಿವಮೊಗ್ಗ: ಧರ್ಮಸ್ಥಳಕ್ಕೆ ಹೋಗಿ ಬರುತ್ತಿದ್ದ ಟಾಟಾ ಇಂಡಿಕಾ ಕಾರು ವಿದ್ಯುತ್ ಕಂಬವೊಂದಕ್ಕೆ ಹೊಡೆದ ಪರಿಣಾಮ ವಿದ್ಯುತ್ ಶಾಕ್ ನಿಂದ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಇಂದು ಬೆಳಗಿನ ಜಾವದ ಎರಡೂವರೆ ಹೊತ್ತಿನಲ್ಲಿ ನಡೆದ ಅಫಘಾತದಲ್ಲಿ ರಿಪ್ಪನ್‌ಪೇಟೆ ವಿನಾಯಕ ನಗರದ ರವಿಭಟ್ಟ ಅವರ ಭಾವ ಲೋಹಿತ್ (36) ಮಗ ಶಶಾಂಕ್ (9) ಅತ್ತೆ ಆಯನೂರಿನ ಕಲಾವತಿ (65) ಮೃತ ದುರ್ದೈವಿಗಳಾಗಿದ್ದಾರೆ. ಕಾರಿನಲ್ಲಿದ್ದ ಇನ್ನುಳಿದ ಮೂರು ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ಪೊಲೀಸ್ ಮೂಲ ಗಳು ತುಂಗಾತರಂಗ ಕ್ಕೆ ತಿಳಿಸಿವೆ.
ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಗರ್ತಿಕೆರೆ ಸಮೀಪ ಈ ಘಟನೆ ನಡೆದಿದೆ. ಕಾರು ಧರ್ಮ ಸ್ಥಳದಿಂದ ರಿಪ್ಪನ್ ಪೇಟೆಗೆ ವಾಪಸ್ ಬರುತ್ತಿದ್ದ ವೇಳೆ ಈ ಘಟನೆ ನಡೆದಿದೆ.
ರಿಪ್ಪನ್ ಪೇಟೆಯ ನಿವಾಸಿಗಳಾದ ಇವರು ಧರ್ಮಸ್ಥಳಕ್ಕೆ ತೆರಳಿದ್ದರು. ರಿಪ್ಪನ್ ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ