ಶಿವಮೊಗ್ಗ, ಜ.27:

ಶಿವಮೊಗ್ಗ ತೋಟಗಾರಿಕೆ ಇಲಾಖೆ ಫಲಪುಷ್ಪ ಪ್ರದರ್ಶನ ಹಿನ್ನೆಲೆಯಲ್ಲಿ ಡಿಡಿಪಿಐ ಮೂಲಕ ಶಿವಮೊಗ್ಗದ ಹಲವು ಶಾಲಾ ಮಕ್ಕಳನ್ನು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ಆಹ್ವಾನಿಸಿದ್ದು ಸರಿಯಷ್ಟೇ.

ಆದರೆ ಅಲ್ಲಿ ಸರಿಯಾದ ವೇದಿಕೆ ಇಲ್ಲ. ಮಕ್ಕಳ ಕಾರ್ಯಕ್ರಮಕ್ಕೆ ಪೂರಕ ವ್ಯವಸ್ಥೆ ಇಲ್ಲ. ಸಂಜೆ 6 ಕ್ಕೆ ಆರಂಭವಾಗಬೇಕಿದ್ದ ಕಾರ್ಯಕ್ರಮವನ್ನು ಸಂಜೆ ಏಳುಮುವತ್ತರವರೆಗಿನ ಇಲ್ಲಿಯವರೆಗೂ ಆರಂಭಿಸಿಲ್ಲ.
ಕಾರ್ಯಕ್ರಮದಲ್ಲಿ ಬೆಳಕಿನ ವ್ಯವಸ್ಥೆಯು ಇಲ್ಲ. ಕತ್ತಲಲ್ಲಿ ಮಕ್ಕಳ ಮುಕ್ತ ಪ್ರದರ್ಶನ ಯಾರಿಗೆ ಬೇಕಿತ್ತು? ಇಂತಹ ವ್ಯವಸ್ಥೆಗೆ ಶಿಕ್ಷಣ ಇಲಾಖೆ ಅಧಿಕಾರಿಗಳು ಯಾಕೆ ಒಪ್ಪಿಕೊಂಡರು ಎಂಬ ಪ್ರಶ್ನೆ ಸಹಜವಾಗಿ ಪೋಷಕ ವಲಯದಿಂದ ಕೇಳಿ ಬಂದಿದೆ.

ತೋಟಗಾರಿಕೆ ಇಲಾಖೆಯ ಅಧಿಕಾರಿಗಳ ನಿರ್ಲಕ್ಷತನ ಹಾಗೂ ಬೇಜವಬ್ದಾರಿತನದ ವಿರುದ್ಧ ಮಕ್ಕಳ ಪೋಷಕರು ಹಾಗೂ ಅವರ ಜವಾಬ್ದಾರಿ ಹೊತ್ತು ಕರೆತಂದಿದ್ದ ಶಿಕ್ಷಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.