ರಾಕೇಶ್ ಸೋಮಿನಕೊಪ್ಪ
ಶಿವಮೊಗ್ಗ, ಜ.೧೦:
ಸಾರ್ವಜನಿಕರು ಫುಟ್ಪಾತ್ ಮೇಲೆ ಓಡಾಡಲಿ ಎಂದು ಫುಟ್ಪಾತ್ ನಿರ್ಮಿ ಸಿದರೆ ಇಲ್ಲೊಬ್ಬ ಮಹಾನುಭಾವ ಜನರು ಓಡಾಡುವ ದಾರಿಯಲ್ಲಿ ಹೋಟೆಲ್ನ ಸಾಮಾಗ್ರಿಗಳನ್ನು ಇರಿಸಿ ರಸ್ತೆಯಲ್ಲಿ ಓಡಾಡುವಂತೆ ಮಾಡಿರುವುದು ಸಾಕಷ್ಟು ಕಿರಿಕಿರಿ ಉಂಟುಮಾಡಿದೆ ಎಂಬ ಬಗ್ಗೆ ಸಾರ್ವಜನಿಕರು ಗಂಭೀರವಾಗಿ ಆರೋಪಿಸಿದ್ದಾರೆ.

ಹೌದು, ಇದು ನಗರದ ಪೊಲೀಸ್ ಚೌಕಿಯಲ್ಲಿರುವ ವಿದಾರ್ಥಿ ಭವನದ ಮಾಲೀಕನ ಕೆಲಸಕ್ಕೆ ಸಾರ್ವಜನಿಕರು ಸಂಕಷ್ಠ ಎದುರಿಸುತ್ತಿದ್ದಾರೆ. ಫುತ್ಪಾತ್ ಇರುವುದು ಜನರ ಓಡಾಟಕ್ಕೆ ಹೊರತು ಹೋಟೆಲ್ನ ಸಾಮಾಗ್ರಿಗಳಾದ ಟೇಬಲ್ ಜನರೇಟರ್ ಹಾಗೂ ಶೋ ಗಿಡಗಳನ್ನು ಇಡುವುದಕ್ಕಲ್ಲ. ಈ ಕೂಡಲೇ ಇವುಗಳನ್ನು ತೆಗೆಸಲು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಹೋಟೆಲ್ ಪಕ್ಕದಲ್ಲೇ ಶಾಲೆಯಿದ್ದು, ಮಕ್ಕಳು, ಸಾರ್ವಜ ನಿಕರು, ಶಿಕ್ಷಕರು ಫುಟ್ಪಾ ತ್ನಲ್ಲಿ ಓಡಾಡುವುದನ್ನು ಬಿಟ್ಟು ರಸ್ತೆಯ ಮೇಲೆ ಓಡಾಡುತ್ತಿರು ವುದನ್ನು ಗಮನಿಸಬಹುದು.

ಕೂಡಲೇ ಪಾಲಿಕೆ ಅಧಿಕಾರಿಗಳು ಹಾಗೂ ಟ್ರಾಫಿಕ್ ಪೊಲೀಸರು ಇದರ ವಿರುದ್ದ ಕ್ರಮಕೈಗೊಳ್ಳಲು ಸಾರ್ವಜನಿಕರು ಆಗ್ರಹಿಸಿದ್ದಾರೆ.