ಹೊಸನಗರ,
ಸುಮಾರು ೮ವರ್ಷಗಳ ಕಾಲ ಈ ದೇಶದ ಪ್ರಧಾನಮಂತ್ರಿ ನರೆಂದ್ರಮೋದಿಯ ವರು ಒಂದು ನಿಮಿಷವೂ ಬಿಡುವಿಲ್ಲದೇ ಯಾವುದೇ ಅಪೇಕ್ಷೆಗಳನ್ನು ಹೊಂದದೇ ಈ ದೇಶದ ಜನರಿಗಾಗಿ ದುಡಿಯುತ್ತಿದ್ದಾರೆ ಅವರ ಆದರ್ಶ ಗುಣಗಳೇ ನನಗೆ sಸ್ಪೂರ್ತಿಯಾಗಿದೆ ಎಂದು ಕರ್ನಾಟಕದ ಮಾಜೀ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಹೇಳಿದರು.

ಹೊಸನಗರ ತಾಲ್ಲೂಕು ಬ್ರಹ್ಮೇಶ್ವರದ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲ್ಲೂಕು ಘಟಕದ ವತಿ ಯಿಂದ ಸನ್ಮಾನ ಸಮಾರಂಭವನ್ನು ಏರ್ಪಡಿ ಸಲಾಗಿದ್ದು ಸನ್ಮಾನ ಸ್ವೀಕರಿಸಿ ಮಾತನಾಡಿದರು.
ನರೇಂದ್ರ ಮೋದಿಯವರು ದೇಶ- ವಿದೇಶಗಳಲ್ಲಿ ಸಂಚರಿಸಿ ಯಾವುದೇ ವಿಶ್ರಾಂತಿ ಪಡೆಯದೇ ಕಛೇರಿಯ ಕಾರ್ಯ ನಿರ್ವಹಿಸುತ್ತಿದ್ದಾರೆ ಇಂಥಹ ಪ್ರಧಾನಿಯನ್ನು ಪಡೆದಿರುವುದು ನಮಗೂ ನಿಮಗೂ ಸ್ಪೂರ್ತಿ ಪಡೆದಂತಾಗಿದೆ

ನಾನು ಹೋರಾಟದಿಂದ ಮುಖ್ಯಮಂತ್ರಿಯಾಗಿ ಅನೇಕ ಜನಪರವಾದ ಕೆಲಸ ನಿರ್ವಹಿಸಿದ್ದೇನೆ ನಾನು ಶಾಸಕರಾದ ಸಂದರ್ಭದಲ್ಲಿ ಬಿಜೆಪಿಯಿಂದ ಇಬ್ಬರು ಶಾಸಕರು ಮಾತ್ರ ವಿದಾನಸಬೆಯಲ್ಲಿ ಇದ್ದೆವು ಅಂದು ನಾನು ರೈತರ ಪರ ದೀನದಲಿತರ ಪರ ಹೋರಾಟದ ಫಲದಿಂದ ಹಾಗೂ ಹೋರಾಟದ ಛಲದಿಂದ ಇಂದು ಕೇಂದ್ರಕ್ಕೆ ೨೮ ಸಂಸದರನ್ನು ಕಳುಹಿಸಿದ್ದೇವೆ ಕರ್ನಾಟಕ ದಲ್ಲಿ ಬಿಜೆಪಿ ಪಕ್ಷ ಆಡಳಿತ ನಡೆಸುತ್ತಿದೆ ನಮ್ಮ ಜನಪರವಾದ ಕೆಲಸದಿಂದ ಮುಂದಿನ ವಿದಾ ನಸಭೆಯ ಚುನಾವಣೆಯಲ್ಲಿ ಕರ್ನಾಟಕದಲ್ಲಿ ೧೪೦ ಸೀಟ್ಗಳನ್ನು ಗೆಲ್ಲಿಸುವ ಹೊಣೆ ಹೊಂದಿದ್ದು ಅದಕ್ಕಾಗಿ ನಮ್ಮ ಪಕ್ಷದ ಕಾರ್ಯಕರ್ತರು ವಾರದಲ್ಲಿ ಒಂದು ದಿನ ಸರ್ಕಾರದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮನೆ-ಮನೆಗಳಿಗೆ ಹೋಗಿ ಹೇಳುವ ಕೆಲಸಕ್ಕೆ ಮುಂದಾಗಲೀ ಎಂದರು.

ಈ ಸಂದರ್ಭದಲ್ಲಿ ಶಾಸಕ ಹಾಲಪ್ಪ ನವರು ಮಾತನಾಡಿ ಯಡಿಯುರಪ್ಪ ಸಂಸದ ರಾಘವೇಂದ್ರರವರು ಈ ಮಲೆನಾಡು ಭಾಗಕ್ಕೆ ಸಾಕಷ್ಟು ಅಭಿವೃದ್ಧಿ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ ಇವರ ಸಹಕಾರದಿಂದ ಕೇಂದ್ರ-ರಾಜ್ಯದಲ್ಲಿ ಡಬ್ಬಲ್ ಇಂಜನ್ ಸರ್ಕಾರ ವಿರುವ ಕಾರಣ ರಸ್ತೆ ಅಬಿವೃದ್ಧಿ ಕುಡಿಯುವ ನೀರಿನ ಯೋಜನೆ, ಕಾಲೇಜ್ ಗಳು ಸಾಕಷ್ಟು ಅಭಿವೃದ್ಧಿ ಕಾಣುತ್ತಿದೆ ಯಡಿ ಯೂರಪ್ಪನವರು ಎಲ್ಲ ಜನಾಂಗದವರಿಗೂ ಸಮಾಜಕ್ಕೂ ಸಾಕಷ್ಟು ಹಣ ಬಿಡುಗಡೆ ಮಾಡುವುದರ ಜೊತೆಗೆ ಎಲ್ಲ ಜನಾಂಗದ ನಾಯಕರೆನಿಸಿಕೊಂಡಿದ್ದಾರೆ ಈ ರಾಜ್ಯ ಕಂಡ ಅಪ್ರತಿಮಾ ಮುಖ್ಯಮಂತ್ರಿಗಳಲ್ಲಿ ಯಡಿಯೂ ರಪ್ಪನವರು ಒಬ್ಬರು ಎಂದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಕಾರ್ಯದರ್ಶಿ ಬಿ.ಯುವರಾಜ್ರವರು ವಹಿಸಿದ್ದರು.

ಮುಖ್ಯ ಅತಿಥಿಯಾಗಿ ಮಳನೀ ಮಠದ ಡಾ|| ಗುರುನಾಗಭೂಷಣ ಸಿವಾಚಾರ್ಯ ಹಾಗೂ ಮೂಲಗದ್ದೆ ಮಠದ ಅಭಿನವ ಚನ್ನಬಸವ ಸ್ವಾಮೀಜಿ ಶಿವಮೊಗ್ಗ ಸಂಸದ ಬಿ.ವೈ ರಾಘವೇಂದ್ರ, ದುಮ್ಮ ವಿನಯ್ ಕುಮಾರ್, ಜಬಗೋಡು ಹಾಲಪ್ಪ ಗೌಡ, ವಸವೆ ಕಲ್ಯಾಣಪ್ಪ ಗೌಡ, ಚಂದ್ರ ಮೌಳಿ, ತೀಥೇಶ ಹೆಚ್.ಆರ್, ಚಿಕ್ಕಮಣತಿ ಹಾಲಪ್ಪ, ಈಶ್ವರಪ್ಪ ಗೌಡ, ಜಿ.ಟಿ ಈಶ್ವರಪ್ಪ ಗೌಡ, ಚನ್ನಬಸಪ್ಪ ಗೌಡ, ಎ.ವಿ. ಮಲ್ಲಿಕಾರ್ಜುನ, ಎನ್ .ಆರ್ ದೇವಾನಂದ್ ಇತರರಿದ್ದರು.