ಶಿವಮೊಗ್ಗ: ಸೋಗಾನೆ ಬಳಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣವನ್ನು ಫೆಬ್ರವರಿ 12ಕ್ಕೆ ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಲಿದ್ದಾರೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.
ನಗರದ ಕೃಷಿ ಕಾಲೇಜು ಎದುರು ಚನ್ನಮುಂಬಾಪುರದಲ್ಲಿ ಜಿಲ್ಲಾ ಜಂಗಮ ಸಮಾಜದಿಂದ ನಿರ್ಮಿಸಲಾಗುತ್ತಿರುವ ಜಂಗಮ ಸಮಾಜದ ಸಾಂಸ್ಕೃತಿಕ ಭವನ ಶಿಲಾನ್ಯಾಸ ಹಾಗೂ ಭೂಮಿಪೂಜೆ ಸಮಾರಂಭವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.