ಶಿವಮೊಗ್ಗ ನಗರದಲ್ಲಿ ನಿನ್ನೆ ಪ್ರತಿಷ್ಟಿತ ಉದ್ಯಮಿಯ ಮನೆಗೆ ಅಗ್ನಿ ಅವಘಡ ಸಂಭವಿಸಿದ್ದು, ಈ ಸಂದರ್ಭದಲ್ಲಿ ಉದ್ಯಮಿ ಒಳಗಿದ್ದು ಅವರನ್ನು ರಕ್ಷಿಸಲು ಅಗ್ನಿ ಶಾಮಕದಳದವರು ಆಗಮಿಸಿದರು.

ಈ ಸಂದರ್ಭದಲ್ಲಿ ಅಗ್ನಿ ಶಾಮಕ ಸಿಬ್ಬಂದಿಯವರಿಗೆ ಮಾಸ್ಕ್ನಲ್ಲಿ ಆಕ್ಸಿಜನ್ ವ್ಯವಸ್ಥೆ ಸರಿಯಾಗಿ ಇರುವುದಿಲ್ಲ ಹಾಗೂ ಟೋಪಿಯಲ್ಲಿ ಲೈಟ್ನ ವ್ಯವಸ್ಥೆ ಇರುವುದಿಲ್ಲ, ಬೆಂಕಿಯನ್ನು ಮೈಗೆ ಹತ್ತದೆ ನಿಯಂತ್ರಿಸುವ ಜಾಕೆಟ್ ಕೂಡ ಇರುವುದಿಲ್ಲ, ನಿನ್ನೆ ನಡೆದಂತಹ ಅವಗಡದಲ್ಲಿ ಮೊದಲನೆ ಅಂತಸ್ತಿನ ಮಹಡಿಗೆ ಹೋಗಲು ಯಾವುದೇ ರೀತಿಯ ಉಪಕರಣಗಳು ಇಲ್ಲದೆ ತೊಂದರೆ ಆಗ್ಗಿದ್ದು, ಶಿವಮೊಗ್ಗ ನಗರದಲ್ಲಿ ಮಲ್ಟಿ ಸ್ಪೆ?ಲಿಟಿ

ಆಸ್ಪತ್ರೆಗಳು ಹಾಗೂ ಅಪಾರ್ಟ್ಮೆಂಟ್ಗಳು ಆಗಿದ್ದು, ಹಾಗೂ ಇನ್ನು ಎತ್ತರವಾದ ಕಟ್ಟಡಗಳು ಮುಂದಿನ ದಿನಗಳಲ್ಲಿ ನಿರ್ಮಾಣವಾಗಲಿದ್ದು, ಈ ರೀತಿ ಅವಘಡಗಳು ಸಂಭವಿಸಿದ್ದಾಗ ಅಗ್ನಿ ಶಾಮಕ ಸಿಬ್ಬಂದಿಯವರಿಗೆ ತುಂಬಾ ತೊಂದರೆಯಾಗುತ್ತದೆ. ಉದ್ಯಮಿ ಶರತ್ ಭೂಪಾಳಂ ನವರ ಕಾರ್ಖಾನೆಯಲ್ಲಿ ಸುಮಾರು ೮೦೦ ಜನ ಕೆಲಸಮಾಡುತ್ತಿದ್ದು ಇವರೆಲ್ಲರು ಇಂದು ದುಃಖದಲ್ಲಿದ್ದಾರೆ. ಆದ್ದರಿಂದ ಈ ಬಗ್ಗೆ ಜಿಲ್ಲಾಧಿಕಾರಿಗಳು ಪರಿಶೀಲಿಸಿ ಅಗ್ನಿ ಶಾಮಕ ಇಲಾಖೆಗೆ ಬೇಕಾಗಿರುವಂತಹ ಉಪಕರಣಗಳ ವ್ಯವಸ್ಥೆ ಮಾಡಿಕೊಡಬೇಕಾಗಿ ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕಿ ರೇಖಾ ರಂಗನಾಥ್ ರವರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು

ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ಎಚ್.ಸಿ.ಯೋಗೇಶ್, ನಾಗರಾಜ್ ಕಂಕಾರಿ , ಮಂಜುಳಾ ಶಿವಣ್ಣ , ಮಾಜಿ ಉಪ ಮಹಾಪೌರರಾದ ಹೆಚ್. ಪಾಲಾಕ್ಷಿ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಎಚ್.ಪಿ.ಗಿರೀಶ್ ಪ್ರಮುಖರಾದ ಭಾಸ್ಕರ್ ಪ್ರಶಾಂತ್ ರಾಯ್ , ಮೋಹನ್ ಇತರರು ಇದ್ದರು