ಶಿವಮೊಗ್ಗ: ಇತ್ತೀಚಿನ ದಿನಗಳಲ್ಲಿ ಬಾಂಬ್ ಸ್ಪೋಟ ಮಾಮೂಲಿ ಎನ್ನುವಂತಾಗಿದ್ದು, ಇಂತಹ
ಕೃತ್ಯ ನಡೆಸುವವರಿಗೆ ಭಯವೇ ಇಲ್ಲದಂತಾಗಿದೆ. ಹೀಗಾಗಿ ಸರ್ಕಾರ ಉಗ್ರ ಶಿಕ್ಷೆ ನೀಡಲು
ಕಠಿಣ ಕಾನೂನು ಜಾರಿಗೊಳಿಸುವಂತೆ ಶಾಸಕ ಕೆ.ಎಸ್.ಈಶ್ವರಪ್ಪ ಆಗ್ರಹಿಸಿದರು.

ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಗ್ರಕೃತ್ಯಗಳಲ್ಲಿ `ಭಾಗಿಯಾಗುವವರಿಗೆ
ಅಧಿಕಾರಿಗಳೇ ನೇರ ಶಿಕ್ಷೆ ನೀಡುವಂತೆ ಕಾನೂನು ರೂಪಿಸಬೇಕಾದ ಅಗತ್ಯವಿದೆ. ಈ ಸಂಬಂಧ
ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಃ ಸಚಿವ ಅಮಿತ್ ಶಾ ಅವರಿಗೆ ಮನವಿ ಮಾಡಲಾಗುತ್ತದೆ
ಎಂದರು.

ರಾಷ್ಟ್ರದ್ರೋಹಿ ಸಂಘಟನೆಗಳಿಗೆ ಸೇರುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಪೋಷಕರು
ಮಕ್ಕಳಿಗೆ ತಿದ್ದಿ ಬುದ್ದಿ ಹೇಳದಿದ್ದರೆ ಸಮಸ್ಯೆ ಇನ್ನಷ್ಟು ಜಟಿಲವಾಗಲಿದೆ.
ಮುಖ್ಯವಾಗಿ ಪೋಷಕರಲ್ಲಿ ಮಕ್ಕಳ ಬಗ್ಗೆ ಜಾಗೃತಿ ಮೂಡಬೇಕೆಂದು ಹೇಳಿದರು.

ಚಿಲುಮೆ ಸಂಸ್ಥೆ ವೋಟರ್ ಲಿಸ್ಟ್ ನಲ್ಲಿ ಮತದಾರರ ಹೆಸರು ಡಿಲಿಟ್ ಮಾಡಿರುವುದು ಇಡೀ
ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಳಂಕವಾಗಿದೆ. ಇದನ್ನೇ ಮುಂದಿಟ್ಟುಕೊಂಡು ಪ್ರತಿಪಕ್ಷದ
ನಾಯಕ ಸಿದ್ದರಾಮಯ್ಯ ಬಿಜೆಪಿ ಮೇಲೆ ಆರೋಪಿಸುವುದು, ಅದಕ್ಕೆ ಸಿಎಂ ಸ್ಪಷ್ಟನೆ
ನೀಡುವುದು ಆಗಿದೆ. ಹೀಗಾಗಿ ಎರಡೂ ಪಕ್ಷಗಳ ಮೇಲೆ ಜನರು ಅನುಮಾನ
ವ್ಯಕ್ತಪಡಿಸುವಂತಾಗಿದೆ ಎಂದರು.

ಈ ಸಮಸ್ಯೆಯನ್ನು ಎಲ್ಲಾ ನಾಯಕರು ಒಟ್ಟಿಗೆ ಕುಳಿತು ಪಕ್ಷಾತೀತವಾಗಿ ಪರಿಹರಿಸಬೇಕಿದೆ.
ಮತದಾರರ ಪಟ್ಟಿ ಸಿನಿಮಾ ರೀತಿ ಆಗಬಾರದು. ಈ ರೀತಿ ಆದರೆ ಮತದಾನಕ್ಕೆ ಮೌಲ್ಯವೇ
ಇಲ್ಲದಂತಾಗುತ್ತದೆ ಎಂದು ಹೇಳಿದರು.

By admin

ನಿಮ್ಮದೊಂದು ಉತ್ತರ

error: Content is protected !!