ಶಿವಪ್ಪ ನಾಯಕ ಮಾರುಕಟ್ಟೆಯ ಗುತ್ತಿಗೆ (ಬ್ಯಾರೀಸ್ ಮಾಲ್) ಅವಧಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ವರದಿ ಬಂದು ೫ ತಿಂಗಳಾದರೂ ಪಾಲಿಕೆಯ ಮೇಯರ್ ಆಗಲಿ,ಆಯುಕ್ತರಾಗಲಿ ಅದನ್ನು ಬಹಿರಂಗ ಗೊಳಿಸಿಲ್ಲ. ಕೂಡಲೇ ಬಹಿರಂಗ ಗೊಳಿಸಬೇಕು ಎಂದು ಪಾಲಿಕೆ ವಿರೋಧ ಪಕ್ಷದ ನಾಯಕಿ ರೇಖಾ ರಂಗನಾಥ್ ಆಗ್ರಹಿಸಿದರು.


ಅವರು ಇಂದು ಮೀಡಿಯಾ ಹೌಸ್ನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶಿವಪ್ಪ ನಾಯಕ ಮಾರುಕಟ್ಟೆಯಲ್ಲಿ ಬ್ಯಾರೀಸ್ ಸಂಸ್ಥೆಯವರು ಗುತ್ತಿಗೆಗೆ ಸಂಬಂಧಿಸಿದಂತೆ ಬಾಡಿಗೆ ಆಧಾರದಲ್ಲಿ ೯೯ ವರ್ಷಗಳ ಕಾಲ ಮುಂದುವರಿಸಲು ಅವಕಾಶ ಕೇಳಿಕೊಂಡಿದ್ದರು. ಸ್ಥಾಯಿ ಸಮಿತಿಯಲ್ಲಿ ಈ ವಿಷಯದ ಪ್ರಸ್ತಾಪಕ್ಕೆ ವಿರೋಧ ವ್ಯಕ್ತಪಡಿಸಲಾಗಿತ್ತು. ಆದರೂ ಕೂಡ ಸಾಮಾನ್ಯ ಸಭೆಯ ಅಜೆಂಡಾದಲ್ಲಿ ಅದು ಹೇಗೋ ಸೇರ್ಪಡೆಗೊಂಡಿತ್ತು. ಸಾಮಾನ್ಯ ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಪಾಲಿದೆ ಸದಸ್ಯರು ಹಾಗೂ ಜೆಡಿಎಸ್ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದರು ಅಂದು ಸಾಮಾನ್ಯ ಸಭೆಯಲ್ಲಿ ದೊಡ್ಡ ಗಲಾಟೆಯೇ ಆಗಿತ್ತು ಎಂದರು.


ಈ ಘಟನೆ ನಡೆದು ಸಮಿತಿ ರಚನೆಯಾಗಿ ಸುಮಾರು ೧೪ ತಿಂಗಳು ಕಳೆದಿವೆ. ಜುಲೈ ತಿಂಗಳಲ್ಲಿ ವರದಿ ಪಾಲಿಕೆ ಕೈ ಸೇರಿದೆ ಎಂದು ತಿಳಿದುಬಂದಿದೆ. ವರದಿ ಬಂದಿದ್ದರೂ ಕೂಡ ಇದನ್ನು ಬಹಿರಂಗಪ ಡಿಸಿಲ್ಲ. ಕ್ಷೇತ್ರದ ಶಾಸಕರಾಗಲಿ, ಸಂಸದರಾಗಲಿ ಅಥವಾ ತನಿಖಾ ಸಮಿತಿ ರಚನೆಗೆ ಅಗ್ರಹಿಸಿದ ಆಯನೂರು ಮಂಜುನಾಥ್ ಅವರಾಗಲಿ, ಅಂದಿನ ಇಂದಿನ ಮೇಯರ್ ಆಗಲಿ, ಆಯುಕ್ತರಾಗಲಿ ತುಟಿ ಬಿಚ್ಚದೆ ಇದ್ದಾರೆ. ಆದ್ದರಿಂದ ತಕ್ಷಣವೇ ತನಿಖಾ ವರದಿ ಬಹಿರಂ ಗಪಡಿಸಬೇಕು ಒಂದು ವಾರದೊಳಗೆ ಬಹಿರಂಗಪಡಿಸದೆ ಇದ್ದರೆ ಕಾಂಗ್ರೆಸ್ ಪಕ್ಷದ ಪಾಲಿಕೆ ಸದಸ್ಯರು ಮೇಯರ್ ಹಾಗೂ ಆಯುಕ್ತರ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.


ಸದಸ್ಯ ಹೆಚ್.ಸಿ. ಯೋಗೇಶ್ ಮಾತನಾಡಿ, ವರದಿ ಬಂದು ಹಲವು ತಿಂಗಳು ಕಳೆದರೂ ಬಹಿರಂಗಪಡಿಸದೆ ಇರುವುದನ್ನು ನೋಡಿದರೆ ಕೆಲವರಿಗೆ ಬ್ಯಾರೀಸ್ ಸಂಸ್ಥೆಯಿಂದ ಕಿಕ್ಬ್ಯಾಕ್ ಬಂದಿದೆ ಎಂಬ ಸಂಶಯ ಬಂದಿದೆ. ಈ ಕಿಕ್ಬ್ಯಾಕ್ನಲ್ಲಿ ಕಾಂಗ್ರೆಸ್ ಸದಸ್ಯರು ಯಾರೂ ಇಲ್ಲ. ಇದ್ದರೆ ಕ್ರಮ ಕೈಗೊಳ್ಳಲಿ ಇನ್ನುಮೇಲಾದರೂ ಶಾಸಕರಾಗಲಿ, ಸಂಸದರಾಗಲಿ ಈ ಬಗ್ಗೆ ಎಚ್ಚರ ವಹಿಸಿ ಕೂಡಲೆ ವರದಿಯನ್ನು ಬಹಿರಂಗಪಡಿಸುವಂತೆ ತಿಳಿಸಬೇಕು ಇಲ್ಲದಿದ್ದರೆ ಶಾಸಕರುಗಳ ಕಚೇರಿ ಮುಂದೆಯೂ ಪ್ರತಿಭಟನೆ ಮಾಡುತ್ತೇವೆ.

ಶಿವಪ್ಪ ನಾಯಕ ಮಾರುಕಟ್ಟೆ ಮಹಾನಗರ ಪಾಲಿಕೆಯ ಸ್ವತ್ತು ಅಷ್ಟೇ ಅಲ್ಲ. ಸಾರ್ವಜನಿಕರ ಆಸ್ತಿ ಕೂಡ. ೯೯ ವರ್ಷಕ್ಕೆ ಗುತ್ತಿಗೆ ಕೊಡುವ ವಿಷಯಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರು ಕೂಡ ಧ್ವನಿ ಎತ್ತಿದ್ದರು. ಈಗ ವರದಿ ಬಹಿರಂಗಗೊಳಿಸಿ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪಾಲಿಕೆ ಸದಸ್ಯರಾದ ಆರ್.ಸಿ. ನಾಯ್ಕ್, ಯುಮುನಾ ರಂಗೇಗೌಡ ಇದ್ದರು.

By admin

ನಿಮ್ಮದೊಂದು ಉತ್ತರ

error: Content is protected !!