ಶಿವಮೊಗ್ಗ,ಅ.19:
ಸಮಾಜ ಸೇವೆ ಹಾಗೂ ಜನಪರ ಹೋರಾಟಗಳ ಮೂಲಕ ಗುರುತಿಸಿಕೊಂಡು ರಾಜ್ಯದಲ್ಲಿ ಜನಾನುರಾಗಿಯಾಗಿದ್ದ ಕರ್ನಾಟಕ ರಾಜ್ಯ ಗೆಳೆಯರ ಬಳಗ ಮತ್ತೆ ಹೊಸತನದಲ್ಲಿ ಹೊರಬಂದಿದೆ.
ಕಳೆದ ಆರು ವರ್ಷಗಳ ನಂತರ ಮತ್ತೆ ಹೊಸ ಪಡೆಯೊಂದಿಗೆ ಅಸ್ತಿತ್ವಕ್ಕೆ ಬಂದಿರುವ ಈ ಗೆಳೆಯರ ಬಳಗ ಎಂದಾಕ್ಷಣ ಶಿವಮೊಗ್ಗ ಜಿಲ್ಲೆಯಾದ್ಯಂತ ಸಾಮಾಜಿಕ ಹೋರಾಟ, ಸಮಾಜದ ಕಡುಬಡ ನೊಂದವರ ಪರವಾಗಿ ನಿಂತುಕೊಂಡಿದ್ದ ಸಂಘಟನೆ ಎಂಬ ಹೆಸರು ಮೂಡಿಸಿತ್ತು. ಇಂತಹ ಸಂಘಟನೆ ಕಳೆದ ಆರು ವರ್ಷಗಳಿಂದ ತಾತ್ಕಾಲಿಕ ತೊಂದರೆಗಳಿಗೋಸ್ಕರ ಚಟುವಟಿಕೆಗಳಿಂದ ಹಾಗೂ ಹೋರಾಟಗಳಿಂದ ಒಂದಿಷ್ಟು ದೂರ ಸರಿದಿತ್ತು.
ಈಗ ಇದೇ ಸಂಘಟನೆ ಮತ್ತೆ ಹೊಸ ಹುರುಪಿನೊಂದಿಗೆ ಹೊಸತನದ ಯುವಕರೊಂದಿಗೆ ಶಿವಮೊಗ್ಗ ಜಿಲ್ಲೆಯಲ್ಲಿ ಚಾಲನೆಗೆ ಬಂದಿದ್ದು, ಜಿಲ್ಲೆಯಾದ್ಯಂತ ಹಾಗೂ ರಾಜ್ಯದಾದ್ಯಂತ ಸಂಘಟನಾತ್ಮಕ ಮನೋಭಾವದ ಯುವಕರನ್ನು ಕೂಡಿಸಿ ನೊಂದವರಿಗೆ ನೆರಳಾಗುವ ಪ್ರಯತ್ನದಲ್ಲಿ ಮುಂದಾಗಿದೆ. ಶಿವಮೊಗ್ಗದ ದೀನದಯಾಳು ರಸ್ತೆ, ದುರ್ಗಿಗುಡಿಯ ಕಾಯಕ ಕಾಂಪ್ಲೆಕ್ಸ್ ನಲ್ಲಿ ಕಛೇರಿ ಆರಂಭಗೊಂಡಿದೆ. ಡಿ.2 ರಂದು ಸಂಘದ ಅಧಿಕೃತ ಕಛೇರಿ ಉದ್ಘಾಟನೆಯಾಗಲಿದೆ.


ಶಿವಮೊಗ್ಗ ಜಿಲ್ಲೆಯಲ್ಲಿ ಆರಂಭಗೊಂಡ ಈ ಸಂಘಟನೆ ರಾಜ್ಯಾದ್ಯಂತ ಕರ್ತವ್ಯ ನಿರ್ವಹಿಸುತ್ತಿದ್ದು ಈ ಸಂಘಟನೆಯ ರಾಜ್ಯಾಧ್ಯಕ್ಷರಾಗಿ ಎಂ. ಆರ್ ಅನಿಲ್ ಕುಂಚಿ ನೇಮಕಗೊಂಡಿದ್ದಾರೆ. ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಂತೋಷ್ ಕುಮಾರ್ ಅವರನ್ನು ನೇಮಿಸಲಾಗಿದ್ದು, ಖಜಾಂಚಿಯಾಗಿ ಗುಡ್ಡೋಜಿ ರಾವ್ ಅವರು ಆಯ್ಕೆಯಾಗಿದ್ದಾರೆ.


ಸಂಘಟನೆಯ ರಾಜ್ಯ ಉಪಾಧ್ಯಕ್ಷರಾಗಿ ನಟರಾಜ್, ರುದ್ರಾಚಾರ್, ಲೋಹಿತ್ ನಾಗಸಮುದ್ರ, ಕಾರ್ಯದರ್ಶಿಯಾಗಿ ಹುಲಿಗೇಶ್, ರವಿಕುಮಾರ್, ಸಂಘಟನಾ ಕಾರ್ಯದರ್ಶಿಯಾಗಿ ತಿಮ್ಮಪ್ಪ ವಡ್ಡಿನನಕೊಪ್ಪ, ಗಿರೀಶ್, ಕ್ಯಾಂಟೀನ್ ಚಂದ್ರು ಅವರುಗಳು ಆಯ್ಕೆಯಾಗಿದ್ದಾರೆ.


ಈ ರಾಜ್ಯ ಕಮಿಟಿಯು ಇಡೀ ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾ ಹಾಗೂ ತಾಲೂಕಿನ ಸಮಿತಿಗಳನ್ನು ವಿಶೇಷವಾಗಿ ಶಿವಮೊಗ್ಗ ಜಿಲ್ಲೆಗೆ ಆದ್ಯತೆ ನೀಡಿ ಶಿವಮೊಗ್ಗ ಜಿಲ್ಲೆಯ ಗೆಳೆಯರ ಬಳಗವನ್ನು ಅತ್ಯಂತ ಸದೃಢವಾಗಿ ಕಟ್ಟಲು ನಿರ್ಧರಿಸಿದ್ದಾರೆ. ಕರ್ನಾಟಕ ರಾಜ್ಯ ಗೆಳೆಯರ ಬಳಗಕ್ಕೆ ಸೇರಲಿಚ್ಚಿಸುವವರು, ಸಮಾಜದ ಸಮಸ್ಸೆಗಳ ಬಗ್ಗೆ ಸಾರ್ವಜನಿಕರು ತಮ್ಮ ಅಹವಾಲುಗಳನ್ನು 9880218253, 9902777580 ಹಾಗೂ ಕಚೇರಿ ಮೇಲ್ವಿಚಾರಕರು ಶ್ವೇತ T. M. ಅವರಿಗೆ 08182-477608 ಮೂಲಕ ತಲುಪಿಸಬಹುದಾಗಿದೆ.

By admin

ನಿಮ್ಮದೊಂದು ಉತ್ತರ

error: Content is protected !!