ಶಿವಮೊಗ್ಗ, ಆ.19:

Tungataranga Special News.

ಶಿವಮೊಗ್ಗದ ದುರ್ಗಿಗುಡಿ ಸರ್ಕಾರಿ ಆಂಗ್ಲಮಾದ್ಯಮ ಹಿರಿಯ ಪ್ರಾಥಮಿಕ ಶಾಲೆ ಇಡೀ ರಾಜ್ಯದಲ್ಲಿಯೇ ಅತ್ಯಂತ ವಿಶೇಷ ಸ್ಥಾನದಲ್ಲಿ ಗುರುತಿಸಿಕೊಳ್ಳುತ್ತದೆ. ಈ ಜಿಲ್ಲೆಯಲ್ಲಿ ಮೊಟ್ಟ ಮೊದಲ ಸರ್ಕಾರಿ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ ಎಂಬ ಕೀರ್ತಿಯನ್ನು ಪಡೆದುಕೊಂಡಿರುವ ಈ ಶಾಲೆಯಲ್ಲಿಗ ಕರೋನಾ ನಂತರದ ಅವಧಿಯಲ್ಲಿ ಪ್ರವೇಶ ಪಡೆದ ಮಕ್ಕಳ ಸಂಖ್ಯೆ ಅತಿ ಹೆಚ್ಚಾಗಿದ್ದು 1021 ಮಕ್ಕಳು ಒಂದರಿಂದ ಏಳನೇ ತರಗತಿಯೊಳಗೆ ವ್ಯಾಸಂಗ ಮಾಡುತ್ತಿದ್ದಾರೆ.


ಪ್ರತಿ ತರಗತಿಯಲ್ಲಿ ಕನಿಷ್ಠ ಮೂರರಿಂದ ನಾಲ್ಕು ಸೆಕ್ಷನ್ ಗಳನ್ನು ಹೊಂದಲಾಗಿದೆ. 30 ಶಿಕ್ಷಕರು ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ, ಆದರೆ ಇಲ್ಲಿನ ಶಾಲೆಗಳ ಕೊಠಡಿ ಸಂಖ್ಯೆ ಅತ್ಯಂತ ಕಡಿಮೆಯಾಗಿದೆ.
ಪಕ್ಕದ ಹೈಸ್ಕೂಲ್ ನಿಂದ ಎರಡು ಹಾಗೂ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಿಂದ ಎರಡು ಕೊಠಡಿಗಳನ್ನು ಇಲ್ಲಿನ ಶಾಲೆಗೆ ಪಡೆಯಲಾಗಿದೆ. ಆದರೂ ಇಲ್ಲಿಯವರೆಗೆ ಶಿಕ್ಷಕರು ಕುಳಿತುಕೊಳ್ಳುವ ಒಂದೂ ಕೊಠಡಿ ಇಲ್ಲ. ಆಯಾ ಶಿಕ್ಷಕರು ಆಯಾ ತರಗತಿಯಲ್ಲಿ ಇರಬೇಕಾದ ಅನಿವಾರ್ಯತೆ ಬಂದಿದೆ.


ಶಿಕ್ಷಕರ ಸ್ಠಾಫ್ ರೂಮ್ ಕೊರತೆ ಒಂದಾದರೆ, ಇಲ್ಲಿ ಅತ್ಯಂತ ಅಗತ್ಯವಾಗಿರುವ ಮುಖ್ಯ ಶಿಕ್ಷಕರ ಕೊಠಡಿ, ಗ್ರಂಥಾಲಯ, ಪ್ರಯೋಗಾಲಯ ಹಾಗೂ ಎಲ್ಲಾ ಸೆಕ್ಷನ್ ಗಳಿಗೆ ಅಗತ್ಯವಿರುವ ಇನ್ನೂ ಹೆಚ್ಚುವರಿ ಯಾದ ಐದಾರು ಕೊಠಡಿಗಳು ಸೇರಿದಂತೆ ಕನಿಷ್ಠ 10 ಕೊಠಡಿಗಳು ನಿರ್ಮಾಣವಾಗಬೇಕಿದೆ.
ಸ್ಥಳೀಯ ಶಾಸಕರು ಹಾಗೂ ಮಾಜಿ ಉಪಮುಖ್ಯಮಂತ್ರಿಗಳಾದ ಕೆಎಸ್ ಈಶ್ವರಪ್ಪ ಅವರು ಹಾಗೂ ಸ್ಥಳೀಯ ವಿಧಾನಪರಿಷತ್ ಶಾಸಕರಾದ ಡಿ. ಎಸ್. ಅರುಣ್, ಎಸ್ ರುದ್ರೇಗೌಡ,ಆಯನೂರು ಮಂಜುನಾಥ್ ಅವರುಗಳು ಸಹ ಇತ್ತ ಗಮನ ಹರಿಸುವುದು ಅತ್ಯಂತ ಅಗತ್ಯವಾಗಿದೆ.


ಇಲ್ಲಿನ ಒಂದನೇ ತರಗತಿಯಲ್ಲಿ ಮೂರು ಸೆಕ್ಷನ್ನಲ್ಲಿ 103 ಮಕ್ಕಳು ಕಲಿಯುತ್ತಿದ್ದಾರೆ. ಎರಡನೇ ತರಗತಿಯಲ್ಲಿ ನಾಲ್ಕು ವಿಭಾಗಗಳಿದ್ದು 145 ಮಕ್ಕಳು, ಮೂರನೇ ತರಗತಿಯಲ್ಲಿ ನಾಲ್ಕು ಸೆಕ್ಷನ್ಗಳಲ್ಲಿ 116 ಮಕ್ಕಳು, ನಾಲ್ಕನೇ ತರಗತಿಯಲ್ಲಿ 139 ಮಕ್ಕಳಿದ್ದು, ಮೂರು ಸೆಕ್ಷನ್ ಗಳನ್ನು ಹೊಂದಿದೆ. ಐದನೇ ತರಗತಿಯಲ್ಲಿ ಮೂರು ಸೆಕ್ಷನ್ ಗಳ ಕಲಿಕೆಯಲ್ಲಿ 147 ಮಕ್ಕಳು, 6ನೇ ತರಗತಿಯ ನಾಲ್ಕು ಸೆಕ್ಷನ್ ನಲ್ಲಿ 169 ಮಕ್ಕಳು, 7ನೇ ತರಗತಿಯ 4 ಸೆಕ್ಷನ್ಗಳಲ್ಲಿ 202 ಮಕ್ಕಳು ಕಲಿಯುತ್ತಿದ್ದಾರೆ.
ಕೊರೋನಾ ನಂತರದ ಅವಧಿಯಲ್ಲಿ ಖಾಸಗಿ ಶಾಲೆಗಳ ಶುಲ್ಕ ಹೆಚ್ಚಳ ಹಾಗೂ ಮಕ್ಕಳ ಕಲಿಕೆಯ ಆನ್ಲೈನ್ ಹೊಣೆಗಾರಿಕೆ ನಡುವೆ ಬಹಳಷ್ಟು ವಿದ್ಯಾರ್ಥಿಗಳನ್ನು ಪೋಷಕರು ಈ ಶಾಲೆಗೆ ಸೇರಿಸಿದ್ದಾರೆ. ಚಂದ ಪಾಠ ಪ್ರವಚನ ನಡೆಯುತ್ತಿದೆ.
ಶಿವಮೊಗ್ಗದ ಹೆಮ್ಮೆಯ ಸರ್ಕಾರಿ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಗೆ ಅಗತ್ಯವಿರುವ ಸೌಕರ್ಯಗಳನ್ನು ಕಲ್ಪಿಸಲು ಪೋಷಕರು ಹಾಗೂ ಸಾರ್ವಜನಿಕರು ಒತ್ತಾಯಿಸಿದ್ದಾರೆ.

By admin

ನಿಮ್ಮದೊಂದು ಉತ್ತರ

error: Content is protected !!