75 ನೇ ಸ್ವಾತಂತ್ರೋತ್ಸವ ಅಂಗವಾಗಿ ಕಾರ್ಯಕ್ರಮ
ಶಿವಮೊಗ್ಗ : 75 ನೇ ಸ್ವಾತಂತ್ರೋತ್ಸವ ಅಂಗವಾಗಿ ನಗರದಲ್ಲಿ ಭಾರತ ಸೇವಾದಳ ಸಹಕಾರದೊಂದಿಗೆ ವನ ಮಹೋತ್ಸವ, ಉಚಿತ ಆರೋಗ್ಯ ತಪಾಸಣೆ, ಶ್ರಮಾಧಾನ ಹಮ್ಮಿಕೊಳ್ಳಲಾಗುತ್ತಿದ್ದು, ಇದರ ಅಂಗವಾಗಿ ಇಂದು ಚಾಲನೆ ನೀಡಲಾಗಿದೆ ಎಂದು ಸರ್ಜಿ ಪೌಂಡೇಷನ್ನ ಮ್ಯಾನೇಜಿಂಗ್ ಡೈರೆಕ್ಟರ್ ಡಾ.ಧನಂಜಯ ಸರ್ಜಿ ಹೇಳಿದರು.
ಶಿವಮೊಗ್ಗ ಕೋಟೆ ರಸ್ತೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವನಮಹೋತ್ಸವ ಆಚರಿಸಲಾಯತು. ಸರ್ಜಿ ಪೌಂಡೇಷನ್ನ ಮ್ಯಾನೇಜಿಂಗ್ ಡೈರೆಕ್ಟರ್ ಡಾ.ಧನಂಜಯ ಸರ್ಜಿ, ಡಿಡಿಪಿಐ ಪರಮೇಶ್ವರಪ್ಪ , ಭಾರತ ಸೇವಾದಳ ಜಿಲ್ಲಾಧ್ಯಕ್ಷ ವೈ.ಎಚ್.ನಾಗರಾಜ್, ತಾಲೂಕು ಅಧ್ಯಕ್ಷ ರಮೇಶ್ ಬಾಬು, ಬಿಇಒ ಲೋಕೇಶ್, ಕೋಟೆ ಗೆಳಯರ ಬಳಗದ ಧನಂಜಯ, ಮಹಾನಗರ ಪಾಲಿಕೆ ಸದಸ್ಯ ಪ್ರಭು ಇತರರು ಇದ್ದರು.
ಅವರು ಬುಧವಾರ ಬೆಳಗ್ಗೆ ಭಾರತ ಸೇವಾದಳ ಜಿಲ್ಲಾ ಶಾಖೆ, ಸರ್ಜಿ ಪೌಂಡೇಷನ್ ಮತ್ತು ಕೋಟೆ ಗೆಳೆಯರ ಬಳಗ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಹಯೋಗದಲ್ಲಿ ಭಾರತ ಸ್ವಾತಂತ್ರದ ಅಮೃತ ಮಹೋತ್ಸವ ಅಂಗವಾಗಿ ಕೋಟೆ ರಸ್ತೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸ್ವಚ್ಛತಾ ಅಭಿಯಾನ, ಸಸ್ಯೋತ್ಸವ ಮತ್ತು ವಿದ್ಯಾರ್ಥಿಗಳಿಗೆ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಮುಂಬರುವ ದಿನಗಳಲ್ಲಿ ಟೈಪಾಯಿಡ್ ಉಚಿತ ಲಸಿಕೆ ಕಾರ್ಯಕ್ರಮ ಹಮ್ಮಿಕೊಳ್ಳುವ ಗುರಿ ಹೊಂದಲಾಗಿದೆ. ಆರೋಗ್ಯ ಅಭಿಯಾನಕ್ಕೆ ಶಿಕ್ಷಣ ಇಲಾಖೆ ಹಾಗೂ ಪೋಷಕರ ಸಹಕಾರ ಅಗತ್ಯ ಎಂದರು.
ಗಿಡ, ಮರ ಬೆಳೆಸುವುದರಿಂದ ಆಮ್ಲಜನಕ ಕೊರತೆ ಆಗದು, ಮಕ್ಕಳಲ್ಲಿ ಪರಿಸರ ಪ್ರೇಮ ಮೂಡಿಸುವ ಕೆಲಸವನ್ನು ಎಲರೂ ಸೇರಿ ಮಾಡೋಣ ಎಂದು ಹೇಳಿದರು.
ಡಿಡಿಪಿಐ ಪರಮೇಶ್ವರಪ್ಪ ಮಾತನಾಡಿ, ಮಕ್ಕಳಲ್ಲಿ ರಿಸರ ಪ್ರಜ್ಞೆ ಮೂಡಿಸುವ ಹಾಗೂ ಆರೋಗ್ಯ ತಪಾಸಣೆ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಭಾರತ ಸೇವಾದಳ ಜಿಲ್ಲಾಧ್ಯಕ್ಷ ವೈ.ಎಚ್.ನಾಗರಾಜ್ ಮಾತನಾಡಿ, ಸಮಾಜಮುಖಿ ಕಾರ್ಯಗಳನ್ನು ಎಲ್ಲರೂ ಒಂದಾಗಿ ಮಾಡೋಣ , ಇದಕ್ಕೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಹೇಳಿದರು.
ತಾಲೂಕು ಅಧ್ಯಕ್ಷ ರಮೇಶ್ ಬಾಬು, ಬಿಇಒ ಲೋಕೇಶ್, ಸರ್ಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಆಡಳಿತಾದಿಕಾರಿ ಕೆ.ಆರ್.ಪುರುಷೋತ್ತಮ್, ಕೋಟೆ ಗೆಳೆಯರ ಬಳಗದ ಧನಂಜಯ, ಮಹಾನಗರ ಪಾಲಿಕೆ ಸದಸ್ಯರಾದ ಪ್ರಭು, ಗಾಯತ್ರಿ, ರಂಜಿತ್, ರಾಘವೇಂದ್ರ ನಾಯ್್ಕ, ಶರಶ್ಚಂದ್ರ, ಜಿಲ್ಲಾ ಸಂಘಟಕ ಎಚ್.ಸಿ ಪ್ರಸನ್ನಕುಮಾರ್ ಇತರರು ಇದ್ದರು.


