ಹೊಸನಗರ,
ಹೊಸನಗರ ಹಾಗೂ ಸಾಗರ ತಾಲ್ಲೂಕಿನಲ್ಲಿ ನಾಲ್ಕು ದಿನದಿಂದ ಮಳೆಯ ಪ್ರಮಾಣ ಹೆಚ್ಚು ತ್ತಿದ್ದು, ಇಡೀ ರಾಜ್ಯದಲ್ಲಿ ಹೊಸನಗರ ತಾಲ್ಲೂಕಿ ನಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿರುವ ವರದಿ ಪ್ರಕಟವಾಗಿದ್ದು, ಮಳೆಯಿಂದ ತಾಲ್ಲೂಕಿನಲ್ಲಿ ಹೆಚ್ಚು ಪ್ರಮಾಣದಲ್ಲಿ ಮನೆ ಕುಸಿತ, ಕೊಟ್ಟಿಗೆ ಕುಸಿತ, ನಾಟಿ ಮಾಡಿದ ಗದ್ದೆಗಳು ತೋಟಗಳು ಮೋರಿಗಳು ರಸ್ತೆಗಳು ಹಾಳಾಗಿದ್ದು, ತಕ್ಷಣ ನೊಂದವರಿಗೆ ಪರಿಹಾರ ಘೋಷಿಸಬೇಕೆಂದು ಮಾಜಿ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಒತ್ತಾಯಿಸಿದ್ದಾರೆ.

ಅವರು ಇಂದು ಸುದ್ಧಿಗೋಷ್ಠಿಯಲ್ಲಿ ಮಾತನಾ ಡುತ್ತಾ, ತಾಲ್ಲೂಕಿನಲ್ಲಿ ಸುಮಾರು 20ಕೋಟಿ ಗಳಿಗಿಂತಲ್ಲೂ ಹೆಚ್ಚು ಪ್ರಮಾಣದಲ್ಲಿ ಹಾನಿಯಾ ಗಿದೆ. ಸಾರ್ವಜನಿಕರು ಮಳೆಯ ಅಬ್ಬರಕ್ಕೆ ಕಂಗಲಾಗಿದ್ದು, ತಕ್ಷಣ ಅಧಿಕಾರಿ ವರ್ಗದವರು ತಮ್ಮ ಮೂಲ ಸ್ಥಾನದಲ್ಲಿದ್ದು, ಸಾರ್ವಜನಿಕ ರೊಂದಿಗೆ ಸ್ವಂಧಿಸಬೇಕು ಹಾಗೂ ಅನಾಹುತವಾದ ಸ್ಥಳಕ್ಕೆ ಬೇಟಿ ನೀಡಿ ಜನರಿಗೆ ಅನುಕೂಲಕರವಾದ ವಾತವರಣ ಸೃಷ್ಠಿಸಬೇಕೆಂದರು.

ಹೊಸನಗರ ತಾಲ್ಲೂಕಿನಲ್ಲಿ ಇರುವ ಸರ್ಕಾರಿ ಅಧಿಕಾರಿಗಳು ಸಾಗರ ಶಿವಮೊಗ್ಗದಿಂದ ಓಟಾಟ ನಡೆಸುತ್ತಿದ್ದು, ಹೊಸನಗರದಲ್ಲಿ ನಡೆಯುವ ಯಾವುದೇ ಅನಾಹುತಗಳು ಅವರ ಗಮನಕ್ಕೆ ಬರುತ್ತಿಲ್ಲ ಅವರ ಗಮನಕ್ಕೆ ಬರುವುದರೊಳಗೆ ಕಾಲ ಕಳೆದಿರುತ್ತದೆ ಎರಡು ದಿನದಿಂದ ಬಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿದ್ದರೂ ಸಹ ತಾಲ್ಲೂಕಿನ ಶಿಕ್ಷಣಾಧಿಕಾರಿಗಳ ಗಮನಕ್ಕೆ ಬಂದಿಲ್ಲ. ಶಾಲೆಯ ಮಕ್ಕಳು ಮಳೆಯಿಂದ ನೆನೆದುಕೊಂಡು ಶಾಲೆಗೆ ಹೋಗುತ್ತಿರುವುದು ನೋಡಿವುದೇ ಕಷ್ಟಕರವಾ ಗುತ್ತಿದೆ. ಶಾಲೆಗೆ ಬರುವಾಗ ಅನಾಹುತವಾದರೆ ಯಾರು ಹೊಣೆ ಎಂದು ಪ್ರಶ್ನಿಸಿದರು.

ಅಧಿಕಾರಿಗಳಿಗೆ ಶಾಸಕರ ಹಿಡಿತವಿಲ್ಲದಿರುವು ದರಿಂದ ಸರಿಯಾದ ಸಮಯಕ್ಕೆ ಕಛೇರಿಗೆ ಬಂದು ಹಾಗೂ ಹೋಗೂಗಳ ಬಗ್ಗೆ ಚರ್ಚಿಸುತ್ತಿಲ್ಲ. ತಕ್ಷಣ ಶಾಸಕ ಹರತಾಳು ಹಾಲಪ್ಪನವರು ಅಧಿಕಾರಿಗಳ ಸಭೆ ನಡೆಸಿ ಹೊಸನಗರ ತಾಲ್ಲೂಕಿನ ಸರ್ಕಾರಿ ಅಧಿಕಾರಿಗಳು ಮೂಲ ಸ್ಥಾನದಲ್ಲಿರಬೇಕೆಂದು ಆದೇಶಿಸಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರದಾನ ಕಾರ್ಯದರ್ಶಿ ಸದಾಶಿವ ಶ್ರೇಷ್ಠಿ, ಜಿಲ್ಲಾ ಸದಸ್ಯ ಪ್ರಬಾಕರ್ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಕೃಷ್ಣಮೂರ್ತಿ, ಟೌನ್ ಘಟಕ ಅಧ್ಯಕ್ಷ ಗುರುರಾಜ್ ಮತ್ತಿತರರಿದ್ದರು.