![4smgkp06](https://tungataranga.com/wp-content/uploads/2022/08/4smgkp06.jpg)
ಶಿವಮೊಗ್ಗ,
ಅಪ್ಪನ ಕನಸನ್ನು ನನಸು ಮಾಡಲು ೨೧ನೇ ವಯಸ್ಸಿನಲ್ಲಿ ಏಕಾಂಗಿಯಾಗಿ ಬೈಕಿನಲ್ಲಿ ಭಾರತ ಪರ್ಯಾಟನೆ ಆರಂಭಿಸಿದ್ದ ಕಾಸರಗೋಡು ಜಿಲ್ಲೆಯ ಕುಂಬಳೆ ನಿವಾಸಿ ಅಮೃತಾ ಜೋಶಿ ಇನ್ನೊಂದು ವಾರದಲ್ಲಿ ತವರಿಗೆ ತಲುಪಲಿದ್ದಾರೆ.
![](http://tungataranga.com/wp-content/uploads/2022/08/06-08-2022-683x1024.jpg)
ಇದುವರೆಗೆ ೨೩ ಸಾವಿರ ಕಿ.ಮೀ. ಪೂರೈಸಿದ್ದಾಗಿ ಗುರುವಾರ ಶಿವಮೊಗ್ಗ ತಲುಪಿದ್ದ ಅಮೃತ ಅವರು, ಕಳೆದ ಫೆಬ್ರವರಿ ೫ರಂದು ಕೇರಳದ ಕಲ್ಲಿಕೋಟೆಯಿಂದ ಸಂಚಾರ ಆರಂಭಿಸಿದ್ದ ಅಮೃತಾ ಜ್ಯೋಶಿ ಪ್ರತಿನಿತ್ಯ ೧೦ರಿಂದ ೧೨ ಗಂಟೆ ಬೈಕ್ ರೈಡ್ ಮಾಡಿ ತಮಿಳು ನಾಡು, ಆಂಧ್ರಪ್ರದೇಶ, ಒಡಿಸ್ಸಾ, ನಾಗಾಲ್ಯಾಂಡ್, ಅರುಣಾಚಲ ಪ್ರದೇಶ ಸೇರಿದಂತೆ ಈಶ್ಯಾನ್ಯ ರಾಜ್ಯಗಳನ್ನು ಸಂದರ್ಶಿಸಿದ್ದಾರೆ.
![](http://tungataranga.com/wp-content/uploads/2022/08/06-08-2022-1-683x1024.jpg)
ಅಮೃತ ತಂದೆ ಕಳೆದುಕೊಂಡ ಹುಡುಗಿ, ತಾಯಿ ಗೃಹಿಣಿ. ಈಕೆ ಚಿಕ್ಕವಳಿದ್ದಾಗ ಈಕೆಯ ತಂದೆ ನನ್ನ ಮಗಳು ಬೈಕ್ನಲ್ಲಿ ದೇಶ ಸುತ್ತಬೇಕು ಎಂದು ಕನಸು ಕಂಡಿದ್ದರಂತೆ. ತಂದೆಯ ಕನಸನ್ನು ನನಸು ಮಾಡುವ ಉದ್ದೇಶದಿಂದ ಚಿಕ್ಕವಯಸ್ಸಿನಲ್ಲಿ ಬೈಕ್ ರೈಡ್ ಅಭ್ಯಾಸ ಮಾಡಿದ ಈಕೆ ನಂತರ ೧೮ ವರ್ಷ ತುಂಬಿದ ಬಳಿಕ ಬೈಕ್ ರೈಡ್ ಬಗ್ಗೆ ಹೆಚ್ಚು ಆಸಕ್ತಿ ತೋರಿದ್ದಾಳೆ. ಈಕೆ ಬೈಕ್ ರೈಡ್ ಮಾಡುವಾಗ ಹೆಣ್ಣು ನೀನು. ನಿನ್ನಿಂದ ಇವೆಲ್ಲ ಅಸಾಧ್ಯ ಎಂದು ಈಶಾನ್ಯ ರಾಜ್ಯದ ಪ್ರಯಾಣದ ಬಗ್ಗೆ ಎಲ್ಲರೂ ಅಪಹಾಸ್ಯ ಮಾಡಿದ್ದರು.
![](http://tungataranga.com/wp-content/uploads/2022/08/IMG-20220803-WA0053-846x1024.jpg)
ಆದರೂ, ಇವುದ್ಯಾವುದಕ್ಕೂ ಕಿವಿಕೊಡದೆ ಮೊದಲು ಈಶಾನ್ಯ ರಾಜ್ಯದ ಪ್ರಯಾಣ ಆರಂಭಿಸಿದೆ. ಅಲ್ಲಿನ ಜನರ ಪ್ರೀತಿ ಮತ್ತು ಬೆಂಬಲದಿಂದಾಗಿ ಇಡೀ ಭಾರತದ ಯಾನವನ್ನು ಪೂರ್ಣಗೊಳಿಸಲು ಸಾಧ್ಯವಾಯಿತು ಎಂದು ಅವರು ಹೇಳಿದರು.
![](http://tungataranga.com/wp-content/uploads/2022/08/for-paper-ads-27-7-22-2-655x1024.jpg)
ಫೆಬ್ರವರಿಯಲ್ಲಿ ಬೈಕ್ ಯಾನ ಆರಂಭಿಸಿದ ಅಮೃತ ಜೂನ್ ೮ರಂದು ಅಪಘಾತಕ್ಕೆ ಒಳಗಾಗಿದ್ದರು. ಆಗ ಗಾಯಗಳಾಗಿ, ಬೈಕ್ ಕೂಡ ಹಾನಿಯಾಗಿತ್ತು. ಆದರೂ, ಬೈಕ್ ರೈಡ್ನ ಗುರಿ ತಲುಪಲು ಹಠ ಬಿಡದೇ, ಬಿದ್ದ ಜಾಗದಿಂದಲೇ ಮತ್ತೆ ಬೈಕ್ಯಾನ ಆರಂಭಿಸಿದ್ದರು. ಈ ಬಗ್ಗೆ ಬೈಕ್ಯಾನದ ರೋಚಕ ಸಂಗತಿಗಳನ್ನು ಹಂಚಿಕೊಂಡರು.
![](http://tungataranga.com/wp-content/uploads/2022/08/IMG-20220726-WA0003-1-473x1024.jpg)
ಸದ್ಯ ಶಿವಮೊಗ್ಗ ತಲುಪ್ಪಿರುವ ಅಮೃತ ಇಲ್ಲಿಂದ ಉಡುಪಿಗೆ ಪಯಣ ಬೆಳಸಲಿದ್ದು, ಇನ್ನೊಂದು ವಾರದಲ್ಲಿ ಪುನಃ ಕಾಸರಗೋಡು ತಲುಪುವುದಾಗಿ ತಿಳಿಸಿದರು.