ನವದೆಹಲಿ,
ಇಂದು ನಡೆಯುತ್ತಿರುವ ಉಪರಾಷ್ಟ್ರಪತಿ ಚುನಾವಣೆಯಲ್ಲಿ ಪಾಲ್ಗೊಂಡು ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಅವರು ಮತ ಚಲಾಯಿಸಿದರು.
ನವದೆಹಲಿಯಲ್ಲಿ ನಡೆಯುತ್ತಿರುವ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಮತ ಚಲಾಯಿಸಿದರು. ಪ್ರಧಾನಿಯವರೊಂದಿಗೆ ತೆರಳಿದ ರಾಘವೇಂದ್ರ
ಅವರು ಮತ ಚಲಾವಣೆ ಮಾಡಿದರು.
ಈ ಸಂದರ್ಭದಲ್ಲಿ ಕೇಂದ್ರದ ಸಂಸದೀಯ ವ್ಯವಹಾರ ಸಚಿವರಾದ ಪ್ರಹ್ಲಾದ ಜೋಷಿ ಅವರು ಇನ್ನಿತರ ಸಚಿವರು ಹಾಗೂ ಸಂಸದರು ಉಪಸ್ಥಿತರಿದ್ದರು.
ಜುಲೈ ೨೭ ರಂದು ಎನ್’ಡಿಎ ಅಭ್ಯರ್ಥಿಯಾದ ಜಗದೀಪ ದಾನಕರ್ ಅವರನ್ನು ರಾಘವೇಂದ್ರರವರು ಭೇಟಿ ಮಾಡಿ ಶುಭ ಹಾರೈಸಿದ್ದರು.