![cropped-Tunga-taranga-LOgo.jpg](https://tungataranga.com/wp-content/uploads/2021/12/cropped-Tunga-taranga-LOgo.jpg)
2022 ನೇ ಶೈಕ್ಷಣಿಕ ಸಾಲಿನಲ್ಲಿ ಪದವಿ/ಸ್ನಾತಕೋತ್ತರ ಪದವಿ/ಇಂಜಿನಿಯರಿಂಗ್/ವೆಟರ್ನರಿ/ಅಗ್ರಿಕಲ್ಚರ್/ಮೆಡಿಕಲ್ ಕೋರ್ಸುಗಳಲ್ಲಿ ಎಲ್ಲಾ ಸೆಮಿಸ್ಟರ್ಗಳಲ್ಲಿ ಹೆಚ್ಚು ಅಂಕ ಗಳಿಸಿ ಪ್ರಥಮ ಪ್ರಯತ್ನದಲ್ಲಿ ಪ್ರಥಮ ಬಾರಿಗೆ ಉತ್ತೀರ್ಣರಾದ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಬಹುಮಾನ ಹಣ ಮಂಜೂರಾತಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
![](http://tungataranga.com/wp-content/uploads/2022/08/IMG-20220803-WA0053-846x1024.jpg)
ಆಸಕ್ತ ಅರ್ಹ ಅಭ್ಯರ್ಥಿಗಳು ಇಲಾಖಾ ವೆಬ್ಸೈಟ್ www.sw.kar.nic.in ನಲ್ಲಿ ದಿ:31/10/2022 ರೊಳಗೆ ಅರ್ಜಿ ಸಲ್ಲಿಸುವುದು. ಅರ್ಜಿಯೊಂದಿಗೆ ಎಸ್ ಎಸ್ಎಲ್ಸಿ ಅಂಕಪಟ್ಟಿ, ದ್ವಿತೀಯ ಪಿಯುಸಿ ಅಂಕಪಟ್ಟಿ, ವಿದ್ಯಾಭ್ಯಾಸ ಮಾಡಿದ ಕೋರ್ಸಿಗೆ ಸಂಬಂಧಿಸಿದ ಎಲ್ಲಾ ಸೆಮಿಸ್ಟರ್ ಅಂಕಪಟ್ಟಿಗಳು,
![](http://tungataranga.com/wp-content/uploads/2022/08/IMG-20220726-WA0003-1-473x1024.jpg)
ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳು, ರಾಷ್ಟ್ರೀಕೃತ ಬ್ಯಾಂಕಿನ ಬ್ಯಾಂಕ್ ಖಾತೆ ಸಂಖ್ಯೆ ಮತ್ತು ಆಧಾರ್ ಕಾರ್ಡ್ ಈ ದಾಖಲೆಗಳ ಪ್ರತಿಗಳನ್ನು ಸಂಬಂಧಿಸಿದ ಕಾಲೇಜು ಪ್ರಾಂಶುಪಾಲರಿಂದ ದೃಢೀಕರಣ ಮಾಡಿಸಿಕೊಂಡು, ಕಾಲೇಜು ಸಂಸ್ಥೆಗಳು ಯಾವ ತಾಲ್ಲೂಕಿಗೆ ಸಂಬಂಧಿಸಿರುತ್ತವೆಯೋ
![](http://tungataranga.com/wp-content/uploads/2022/07/for-paper-ads-27-7-22-2-655x1024.jpg)
ಆಯಾ ತಾಲ್ಲೂಕು ಸಹಾಯಕ ನಿರ್ದೇಶಕರ ಕಚೇರಿ, ಸಮಾಜ ಕಲ್ಯಾಣ ಇಲಾಖೆ ಕಚೇರಿಗೆ ಮುದ್ದಾಂ ಭೇಟಿ ಮೂಲ ದಾಖಲೆಗಳ ಪರಿಶೀಲನೆಯೊಂದಿಗೆ ಅರ್ಜಿ ಸಲ್ಲಿಸುವಂತೆ
![](http://tungataranga.com/wp-content/uploads/2022/08/IMG-20220726-WA0006-2-1024x773.jpg)
ಶಿವಮೊಗ್ಗ ತಾಲ್ಲೂಕಿನ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ಗ್ರೇಡ್-1 ತಿಳಿಸಿದ್ದಾರೆ.