ಶಿವಮೊಗ್ಗ,
ಮಕ್ಕಳಿಗೆ ಭಾಷೆ ಕಲಿಸುವ ಕಾರ್ಯದಲ್ಲಿ ಪ್ರಾಥಮಿಕ, ಪ್ರೌಢಶಾಲೆಗಳ ಪಾತ್ರ ಮಹತ್ವದಾಗಿದೆ. ಭಾಷಾ ಕಲಿಕೆಯ ಕೌಶಲ್ಯದಲ್ಲಿನ ವಿಫಲತೆಗಳನ್ನು ಹೊಗಲಾಡಿಸಿ ಪರಿಣಾಮಕಾರಿ ಕಲಿಕೆಯತ್ತ ಹೆಚ್ಚು ಗಮನವಹಿಸಬೇ ಕಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ವಿ. ನಾಗರಾಜ್ ಅಭಿಪ್ರಾಯಪಟ್ಟರು


ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಸಹ್ಯಾದ್ರಿ ಪ್ರೌಢಶಾಲೆ, ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಬೆಳಿಗ್ಗೆ ಕಡಿದಾಳು ರಾಮಪ್ಪಗೌಡ ಸ್ಮಾರಕ ಸಭಾಂಗಣದಲ್ಲಿ ಏರ್ಪಡಿಸಿದ್ದ ಶಿವಮೊಗ್ಗ ತಾಲ್ಲೂಕು ಪ್ರೌಢಶಾಲಾ ಕನ್ನಡ ಭಾಷಾ ಶಿಕ್ಷಕರಿಗೆ ಭಾಷೆ – ಸಾಹಿತ್ಯ ರಸಗ್ರಹಣ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.


ಮಾತೃಭಾಷೆ ಶುದ್ಧವಾಗಿ ಮಾತನಾಡುಲು, ಓದಲು ಶೇ. ೫೦ ರಷ್ಟು ಮಕ್ಕಳಿಗೆ ಸಾಧ್ಯವಾಗದೆಯಿರುವುದು ಸಮೀಕ್ಷೆಗಳಿಂದ ಹೊರಹೊಮ್ಮಿದೆ. ಏಳನೇಯ ತರಗತಿ ಉತ್ತೀರ್ಣರಾದ ಮಕ್ಕಳಿಗೆ ಪತ್ರಿಕೆ ಓದಲು ಬಾರದ ಸ್ಥಿತಿಯಿದೆ. ಭಾಷಾ ಕಲಿಕೆಯ ವಿಫಲತೆ ಮನವರಿಕೆಯಾಗಿ ಹೊಸ ಚೈತನ್ಯ ಮೂಡಿಸಲು ಭಾಷಾ ಶಿಕ್ಷಕರ ಪಾತ್ರ ಪ್ರಮುಖವಾಗಿದೆ ಎಂದು ಹೇಳಿದರು


ಅಧ್ಯಕ್ಷತೆ ವಹಿಸಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಿ. ಮಂಜುನಾಥ ಮಾತನಾಡಿ ಬದಲಾವಣೆ ಜಗದ ನಿಯಮ. ಎಲ್ಲರೂ ಬದಲಾವಣೆಯನ್ನು ಬಯ ಸುತ್ತೇವೆ. ಆ ಬದಲಾವಣೆ ಇಂದಿನಿಂದಲೇ ಆಗಲಿ. ಆದರೂ ಸರಿಯಾಗಿ ಕಲಿಸಲು ಸಂಕಲ್ಪ ಮಾಡುವ ಕಾಲ ನಮ್ಮ ಮುಂದಿದೆ. ಆ ನಿಟ್ಟಿನಲ್ಲಿ ಏನೆಲ್ಲಾ ಪ್ರಯತ್ನ ಮಾಡಬಹುದು ಎಂಬುದು ಎರಡು ದಿನಗಳ ಶಿಬಿರದಲ್ಲಿ ಮಂಥನವಾಗಲಿ ಎಂದು ಆಶಿಸಿದರು.


ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಭದ್ರಾವತಿ ಕ್ಷೇತ್ರ ಶಿಕ್ಷಣಾಧಿಕಾರಿ ಎ. ಕೆ. ನಾಗೇಂದ್ರಪ್ಪ ಮಾತನಾಡಿ ಜ್ಞಾನ, ಅನುಭವಗಳನ್ನು ಸಮೀಕರಿಸುವ ಈ ವೇದಿಕೆ ಉಪಯುಕ್ತವಾಗಿದೆ. ಕಸಾಪ ನಮ್ಮ ಕ್ಷೇತ್ರದಲ್ಲಿ ಈ ಕಾರ್ಯಕ್ರಮ ಮಾಡಲು ಆತಿಥ್ಯ ನೀಡುವುದಾಗಿ ಆಹ್ವಾನ ನೀಡಿದರು.


ವಿಷಯ ಪರಿವೀಕ್ಷಕರಾದ ಕಪ್ಪನಹಳ್ಳಿ ಸತೀಶ್, ಟಿ.ಡಿ.ಆರ್. ಶ್ರೀಕಂಠಯ್ಯ, ಕೊಳಿಗೆ ವಾಸಪ್ಪಗೌಡ, ಡಾ. ಮೇಟಿ ಮಲ್ಲಿಕಾರ್ಜುನ, ವೈ. ಎಂ. ಧರ್ಮಪ್ಪ ಉಪಸ್ಥಿತರಿದ್ದರು. ಶ್ರೀನಿಧಿ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಟಿ. ಪಿ. ನಾಗರಾಜ್ ಸ್ವಾಗತಿಸಿ, ತಾಲ್ಲೂಕು ಕಸಾಪ ಅಧ್ಯಕ್ಷರಾದ ಮಹಾದೇವಿ ನಿರೂಪಿಸಿ, ಕಸಾಸಾಂ ವೇದಿಕೆ ಕಾರ್ಯದರ್ಶಿ ಪಿ. ಕೆ. ಸತೀಶ್ ವಂದಿಸಿದರು.

By admin

ನಿಮ್ಮದೊಂದು ಉತ್ತರ

You missed

error: Content is protected !!