ಇದನ್ನೂ ಓದಿ…
ತಲೆಯೇ ಇಲ್ಲದ ಸ್ಮಾರ್ಟ್‌ಸಿಟಿ ಇಂಜಿನಿಯರ್‌ಗಳು..! ಶಿವಮೊಗ್ಗ ನೆಹರೂ ರಸ್ತೆಯ ಈ ದುರಂತ ಕಥನ ಕೇಳಿ, ವೀಡಿಯೋ ನೋಡಿ https://tungataranga.com/?p=13588
ಶಿವಮೊಗ್ಗ, ಜು.30:
ನಿನ್ನೆ ರಾತ್ರಿ ಮತ್ತೆ ಸುರಿದ ದಾರಾಕಾರ ಮಳೆಗೆ ಶಿವಮೊಗ್ಗ ನಗರ ತಲ್ಲಣಗೊಂಡಿದೆ. ಸಮರ್ಪಕವಾಗಿ ನೀರು ಚರಂಡಿ ಮೂಲಕ ಹೊರ ಹೋಗದಿರುವ ಕಾಮಗಾರಿಗಳ ಹಿನ್ನೆಲೆಯಲ್ಲಿ ನಗರದ ಬಹುತೇಕ ಕಡೆ ಮನೆ, ಅಂಗಡಿ ಮುಂಗಟ್ಟು ಹಾಗೂ ಕಛೇರಿಗಳಿಗೆ ನೀರು ನುಗ್ಗಿದೆ.
ನೋಡಿ ವೀಡಿಯೋ https://youtube.com/shorts/d-1mw11McHc?feature=share
ಆರ್ ಎಂ ಎಲ್ ನಗರದ ಸ್ಥಿತಿ ಅದೋಗತಿ
ಇಲ್ಲಿನ ಆರ್‌ಎಂಎಲ್ ನಗರದ ಬಹಳಷ್ಟು ಮನೆಗಳಿಗೆ ನುಗ್ಗಿದ ಮಳೆ ನೀರು ನಾನಾ ಅವಾಂತರಗಳನ್ನು ಸೃಷ್ಟಿಸಿದೆ.
ಸ್ಥಳಕ್ಕೆ ಪಾಲಿಕೆ ಆಯುಕ್ತರು ಭೇಟಿ ನೀಡಿ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವ ಹಾಗೂ ಪರಿಹಾರ ಕೊಡಿಸುವ ಭರವಸೆ ನೀಡಿದರು.
ಮದ್ಯರಾತ್ರಿ ಮಳೆಗೆ ಬೆಂಕಿನಗರದಲ್ಲಿ ಜನರ ಜಾಗರಣೆ.. ಹೊಸ ಚರಂಡಿ ಪ್ರಭಾವ!
ಬೆಂಕಿನಗರದಲ್ಲಿ ಮನೆಗೆ ಮಳೆ ನೀರು!
ಅಂತೆಯೇ, ಶಿವಮೊಗ್ಗ ವಿನೋಬನಗರದ ಬೆಂಕಿನಗರದಲ್ಲಿ ಮಳೆ ನೀರು ಮನೆಯೊಳಗೆ ನುಗ್ಗಿ ಅಲ್ಲಿನ ಮನೆಯವರ ಬದುಕನ್ನೇ ಹಾಳು ಮಾಡಿದೆ. ಕನಿಷ್ಟ ಪಾಲಿಕೆ ಸದಸ್ಯರು ಸಹ ಬೇಟಿ ನೀಡುವ ಔಚಿತ್ಯ ತೋರದಿರುವುದು ದುರಂತದ ಸಂಗತಿ.
ಮಳೆ ಬಿದ್ದ ಹೊತ್ತಿನಿಂದ ಇಡೀ ರಾತ್ರಿ ಮನೆಯವರು ಜಾಗರಣೆ ಮಾಡಿದ್ದಾರೆ. ಕನಿಷ್ಟ ಪಾಲಿಕೆ ಊಟದ ವ್ಯವಸ್ಥೆ ಮಾಡಿಲ್ಲ. ಇಲ್ಲಿಯವರೆಗೂ ನೀರಿನ ದರುಶನವನ್ನೇ ಕಾಣದಿದ್ದ ಮನೆಗಳಿಗೆ ಈಚೆಗಷ್ಟೇ ಆಗಿರುವ ಚರಂಡಿ ಕಾಮಗಾರಿ ಈ ಅನಾಹುತ ತಂದಿದೆ.
ವೀಡಿಯೋ ನೋಡಿ https://youtube.com/shorts/dqBXHh9iBiM?feature=share