ಶಿವಮೊಗ್ಗ, ಜು.28:
ಗುತ್ತಿಗೆದಾರನ ಆತ್ಮಹತ್ಯೆ ಪ್ರಕರಣದಲ್ಲಿ ಸಿಲುಕಿ ಪಕ್ಷದ ಮುಜುಗರಕ್ಕೆ ದಕ್ಕೆಯಾಗಬಾರದೆಂದು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಮಾಜಿ ಉಪಮುಖ್ಯ ಮಂತ್ರಿ ಕೆ.ಎಸ್. ಈಶ್ವರಪ್ಪ ಅವರನ್ನು ಬಿಜೆಪಿ ಸರ್ಕಾರ ಈ ಅವಧಿಯಲ್ಲಿ ಗೃಹಸಚಿವರನ್ನಾಗಿ ಮಾಡಲು ನಿರ್ಧರಿಸಿದೆ ಎಂದು ಉನ್ನತ ಮೂಲಗಳು ಈಗಷ್ಟೇ ಮಾಹಿತಿ ನೀಡಿವೆ. ಇತ್ತೀಚಿಗೆ ಈಶ್ವರಪ್ಪ ಆರೋಪ ಮುಕ್ತರಾಗಿದ್ದರು.
ಮಂಗಳೂರಿನಲ್ಲಿ ಪ್ರವೀಣ್ ನೆಟ್ಟಾರು ಹತ್ಯೆ ವಿಚಾರದಲ್ಲಿ ಸಾಂತ್ವಾನ ಹೇಳಲು ಹೋದ ಬಿಜೆಪಿ ಪ್ರಮುಖರಿಗೆ ಅವರ ಕುಟುಂಬ ಹಾಗೂ ಅಲ್ಲಿನ ಬಿಜೆಪಿ ಕಾರ್ಯಕರ್ತರು ಹಿಗ್ಗಾ ಮುಗ್ಗಾ ಜಾಡಿಸುತ್ತಿರುವುದರಿಂದ ಹೊರಬರಲು ಬಿಜೆಪಿ ಹೈಕಮಾಂಡ್ ಇಂದು ದೆಹಲಿಯಲ್ಲಿ ಈ ಕುರಿತು ಚರ್ಚಿಸುತ್ತಿದೆ ಎಂದು ಹೇಳಲಾಗುತ್ತಿದೆ.
ಗೃಹಖಾತೆ ಭದ್ರತೆಯ ಜೊತೆಗೆ ಈಶ್ವರಪ್ಪರ ಕಾರ್ಯ ಪಕ್ಷದ ವರ್ಚಸ್ಸನ್ನು ಹೆಚ್ಚಿಸುತ್ತದೆ ಎಂಬ ನಂಬಿಕೆ ಹೈಕಮಾಂಡ್ ನದಾಗಿದೆ ಎನ್ನಲಾಗಿದೆ.

