ಶಿವಮೊಗ್ಗ,
ನಗರ ಪೊಲೀಸರು ಕೈಗೊಂಡ ವಿಶೇಷ ಕಾರ್ಯಾಚರಣೆಯಲ್ಲಿ ಹಲವು ಪ್ರಕರಣಗ ಳನ್ನು ದಾಖಲಿಸಿ, ಬಹಳಷ್ಟು ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದಿದ್ದಾರೆ.

ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗ ಳನ್ನು ಒಳಗೊಂಡ ತಂಡ ವಿಶೇಷ ಕಾರ್ಯಾ ಚರಣೆ ನಡೆಸಿದ್ದು, ನಗರ ವ್ಯಾಪ್ತಿಯಲ್ಲಿ50 ಚೆಕ್ ಪೋಸ್ಟ್ ತೆರೆದು ಅನುಮಾನಾಸ್ಪದವಾಗಿ ಓಡಾಡುವವರ ವಿಚಾರಣೆ ನಡೆಸಿದ್ದಾರೆ.

ಅನುಮಾನಾಸ್ಪದವಾಗಿ ಓಡಾಡುವ ವಾಹನ ಮತ್ತು ವ್ಯಕ್ತಿಗಳ ತಪಾಸಣೆ (೩೦ ವರ್ಷದೊಳಗಿನ ವಯಸ್ಕರ ಮೇಲೆ) ನಡೆಸಿ ಅಪರಾಧ ಹಿನ್ನೆಲೆ ಉಳ್ಳವರ ಮನೆಗಳ ತಪಾಸಣೆ ನಡೆಸಿದ್ದಾರೆ. ಅಲ್ಲದೇ, ನಗರದ ವೈನ್ ಶಾಪ್ ಸುತ್ತ ಹಾಗೂ ನಿರ್ಜನ ಪ್ರದೇಶಗಳಲ್ಲಿ ಕುಡಿದು ಜನರಿಗೆ ತೊಂದರೆ ಕೊಡುವವರ ವಿರುದ್ದ ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದಾರೆ.

ಇದರಲ್ಲಿ ಒಟ್ಟು 11 ಅಬಕಾರಿ ಪ್ರಕರಣಗಳು, ೩೫೦ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳು, ೯೩ ಲಘು ಪ್ರಕರಣಗಳು, ೯೬ ತಂಬಾಕು ಪ್ರಕರಣಗಳು , ೧೦ ಗಾಂಜಾ ಸೇವನೆ ಮಾಡಿದ ಜನರ ಮೇಲೆ ಪ್ರಕರಣಗಳನ್ನು ದಾಖಲಿಸಿ, ೧ ತಲ್ವಾರ್, ೪ ಹರಿತವಾದ ಡ್ಯಾಗರ್ಗಳನ್ನೂ ವಶಕ್ಕೆ ಪಡೆದು ಕಾನೂನು ರೀತಿ ಕ್ರಮ ಕೈಗೊಳ್ಳಲಾಗಿದೆ.

ಈ ಕಾರ್ಯಾಚರಣೆಯು ನಿರಂತರವಾಗಿ ನಡೆಯುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಅಧಿಕಾರಿ ಸಿಬ್ಬಂದಿಗಳನ್ನು ನಿಯೋಜಿಸಿ ಒಂದು ಗಂಟೆಗಳ ವಿಶೇಷ ಕಾರ್ಯಾಚರಣೆ ಕೈಗೊಳ್ಳಲಾಗಿದೆ.