ಶಿವಮೊಗ್ಗ
ಮಕ್ಕಳಿಗೆ ಬಾಲ್ಯದಿಂದಲೇ ಸಂಸ್ಕೃತವನ್ನು ಕಲಿಸಿಕೊಡುವುದರ ಮೂಲಕ ನಮ್ಮಬಾರತೀಯ ಪರಂಪರೆಯನ್ನು ಪರಿಚಯಿಸಿದಂತಾಗುತ್ತದೆ ಎಂದು ಶಿವಮೊಗ್ಗದ ವಾಸವಿ ಅಕಾಡೆಮಿ ಟ್ರಸ್ಟ್ ಕಾರ್ಯದರ್ಶಿ ಹಾಗೂ ಶಾಲಾ ಸುಸಂಸ್ಕೃತ ಯೋಜನೆಯ ರಾಜ್ಯಾಧ್ಯಕ್ಷ ಎಸ್.ಕೆ.ಶೇಷಾಚಲ ತಿಳಿಸಿದರು.

ಅವರು ಇಂದು ಹೊನ್ನಾಳಿ ನಗರದ ಪ್ರೇರಣಾ ಪಬ್ಲಿಕ್ ಶಾಲೆಯಲ್ಲಿ ಸಂಸ್ಕೃತ ಕಲಿಕಾ ತರಗತಿಯ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡುತ್ತಾ, ನಮ್ಮ ದೇಶದ ಐತಿಹಾಸಿಕ ಘಟನೆಗಳು, ಪುರಾಣ ಪುಣ್ಯಕಥೆಗಳೆಲ್ಲವೂ ಸಂಸ್ಕೃತ ದಲ್ಲಿದೆ, ಸಂಸ್ಕೃತ ದಲ್ಲಿ ವಿಜ್ಞಾನ, ತಂತ್ರಜ್ಞಾನ ಅಡಗಿದೆ, ಸಂಸ್ಕೃತ ವನ್ನು ಕಲಿತರೆ ಇವೆಲ್ಲವನ್ನು ತಿಳಿದಂತಾಗುತ್ತದೆ ಎಂದರು.

ಮಕ್ಕಳಿಗೆ ಸಾಂಕೇತಿಕವಾಗಿ ಪುಸ್ತಕವನ್ನು ವಿತರಿಸುತ್ತ ಹೊನ್ನಾಳಿ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥ ಸ್ವಾಮಿ ಎಂ, ಮಾತನಾಡಿದರು.

ಸಮಾರಂಭದಲ್ಲಿ ವಾಸವಿ ಅಕಾಡೆಮಿ ಟ್ರಸ್ಟ್ ಅಧ್ಯಕ್ಷ ಶಾಮಸುಂದರ್ ಶಾಲಾ ಕಾರ್ಯದರ್ಶಿ ಪುಟ್ಟಪ್ಪ, ಶಾಲಾ ಮುಖ್ಯೋಪಾಧ್ಯಾಯರಾದ ಕಲಾಶ್ರೀ ಜಯಪ್ಪ, ಉಪಸ್ಥಿತರಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ಪ್ರೇರಣಾ ಶಾಲೆಯ ಅಧ್ಯಕ್ಷರಾದ ಆರತಿ ಯೋಗೇಶ್ ವಹಿಸಿದ್ದರು. ಮಹೇಶ್ ಸ್ವಾಗತಿಸಿದರು, ಶೈಲಜಾ ವಂದಿಸಿದರು, ರೇಣುಕಾ ನಿರೂಪಿಸಿದರು.