ಸಂಸದ ಬಿ.ವೈ. ರಾಘವೇಂದ್ರ ಅವರ ಬಂಡಿ ಬೈರನಹಳ್ಳಿಯ ಮನೆಯಲ್ಲಿನ ಶ್ರೀಗಂಧದ ಮರ ಕಳವು ಮಾಡಿದ್ದ, ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ೧೬ ಬೈಕ್ ಗಳನ್ನು ಕಳವು ಮಾಡಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇಬ್ಬರು ತಲೆಮರೆಸಿಕೊಂಡಿ ದ್ದಾರೆ

ಶಿಕಾರಿಪುರ ತಾಲ್ಲೂಕು ಸಂಡ ಗ್ರಾಮದ ಸೈಯದ್ ಇಸ್ರಾರ್(೨೬), ಪುನೇದಹಳ್ಳಿಯ ರಾಕೇಶ್(೨೪), ಶಿಕಾರಿಪುರದ ಗೋಪಾಲ (೨೮) ಬಂಧಿತ ಆರೋಪಿಗಳು. ಪುನೇದಹಳ್ಳಿ ಹಬೀಬುಲ್ಲಾ (೨೦), ಚಿಕ್ಕಜಂಬೂರಿನ ಮುಸ್ಸು(೨೦) ಇನ್ನೂ ಪತ್ತೆಯಾಗಿಲ್ಲ.

ಶಿರಾಳಕೊಪ್ಪ, ಶಿಕಾರಿಪುರ ಟೌನ್, ಬೆನ್ನೂರು, ಹೊನ್ನಾಳಿ, ತಿಪಟೂರು, ಕಡೂರು ಪೊಲೀಸ್ ಠಾಣೆಗಳಲ್ಲಿ ಇವರ ಮೇಲೆ ಪ್ರಕರಣಗಳಿವೆ. ? ೧೨ ಲಕ್ಷ ಮೌಲ್ಯದ ೧೬ ಬೈಕ್, ಒಂದು

ಕಾರು ಹಾಗೂ ಶ್ರೀಗಂಧ ತುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಡಿವೈಎಸ್ಪಿ ಶಿವಾನಂದ ಮದರಕಂಡಿ ಮಾರ್ಗದರ್ಶನದಲ್ಲಿ ಪಟ್ಟಣದ ಸಬ್ಇನ್ ಸ್ಪೆಕ್ಟರ್ ರಮೇಶ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ.