ಒತ್ತಡದ ಬದುಕಿನಿಂದ ಹೊರಬರಲು ಕ್ರೀಡೆಗಳು ಸಹಕಾರಿ ಎಂದು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷ ಶಂಕರ್ ಶೇಟ್ ಅಭಿಪ್ರಾಯಪಟ್ಟರು.
ಅವರು ಜನಸಂಗ್ರಾಮ ಪರಿಷತ್, ಯುವಾ ಬ್ರಿಗೇಡ್, ನಮ್ಮೂರು ಸಂಸ್ಥೆ ಇವರ ಸಂಯುಕ್ತಾಶ್ರಯದಲ್ಲಿ ಎಲ್ಲಿ ಸಾಧನೆಯೋ ಅಲ್ಲಿ ನಮ್ಮ ನಡೆ ಕಾರ್ಯಕ್ರಮದ ಅಡಿಯಲ್ಲಿ ಮೈಸೂರಿನಲ್ಲಿ ನಡೆದ ರಾಜ್ಯಮಟ್ಟದ ೧೨೭.೧೩೨ ಕೆ. ಜಿ ವೇಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಹಳೇಸೊರಬ ಪ್ರೌಢಶಾಲೆಯ ವಿದ್ಯಾರ್ಥಿನಿ ರೇಷ್ಮಾ.ಎನ್ ಹಾಗೂ ದ್ವಿತೀಯ ಸ್ಥಾನ ಗಳಿಸಿದ ಕೀರ್ತನ.ಆರ್ ಅವರನ್ನು ಸನ್ಮಾನಿಸಿ ಮಾತನಾಡಿದರು.
ಕ್ರೀಡಾಪಟು, ವೇಗದ ಓಟಗಾರ್ತಿ ಪಿ.ಟಿ ಉಷಾ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿರುವುದು ಸಂತಸದ ವಿಚಾರ ಇದು ಕ್ರೀಡಾ ಕ್ಷೇತ್ರಕ್ಕೆ ಸಂದ ಗೌರವ.
ಪ್ರತಿಯೊಂದು ಮಗುವಿನಲ್ಲಿ ಒಂದೊಂದು ಪ್ರತಿಭೆ ಅಡಗಿರುತ್ತದೆ ಅದನ್ನು ಗುರುತಿಸಿ ಪ್ರೋತ್ಸಾಹಿಸಬೇಕಾದ ದ್ದು ಪೋಷಕರ ಕರ್ತವ್ಯ ವಾಗಿದೆ ಎಂದರು. ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಆರೋಗ್ಯ ವೃದ್ಧಿಸುವುದರ ಜೊತೆಗೆ ಉತ್ಸಾಹ ದೊರೆಯುತ್ತದೆ. ಈ ವಿದ್ಯಾರ್ಥಿಗಳು ಇನ್ನೂ ಹೆಚ್ಚಿನ ಸಾಧನೆ ಮಾಡಿ ಸೊರಬ ತಾಲೂಕಿನ ಕೀರ್ತಿಯನ್ನು ಹೆಚ್ಚಿಸಲಿ ಎಂದು ಶುಭ ಹಾರೈಸಿದರು. ಈ ರೀತಿ ಸಾಧನೆ ಮಾಡಿದವರನ್ನು ಗುರುತಿಸಿ ಗೌರವಿಸಬೇಕಾದದ್ದು ಸಂಘ-ಸಂಸ್ಥೆಗಳ ಕರ್ತವ್ಯವಾಗಿದೆ ಈ ರೀತಿ ಗುರುತಿಸಿ ಗೌರವಿಸಿದಾಗ ಅವರು ಇನ್ನಷ್ಟು ಸಾಧನೆ ಮಾಡಲು ಪ್ರೇರಣೆ ನೀಡಿದಂತಾಗುತ್ತದೆ ಎಂದರು ಎಂದರು.
ಕಾರ್ಯಕ್ರಮದಲ್ಲಿ ಯುವಾ ಬ್ರಿಗೇಡ್ ಸಂಚಾಲಕ ಮಹೇಶ್ ಖಾರ್ವಿ, ರಾಘವೇಂದ್ರ.ಎಸ್, ರಂಗನಾಥ ಮೊಗವೀರ, ಮಂಜು, ವಿನೋದ್ ವಾಲ್ಮೀಕಿ, ರಮೇಶ್ ಕಲ್ಲoಬಿ, ಗಂಧರ್ವ,ಅನಿಲ್, ಶ್ವೇತ ನಾಗಪ್ಪ, ರವಿಕುಮಾರ್, ರಾಮಪ್ಪ, ನಾಗವೇಣಿ, ನಾಗರಾಜ್, ಲಲಿತ, ನಿಂಗಪ್ಪ, ಹುಚ್ಚಪ್ಪ, ಲೋಕೇಶ್, ಪುಟ್ಟಪ್ಪ, ಗಣಪತಪ್ಪ, ಕಾಳಪ್ಪ, ಲಕ್ಷ್ಮೀಶ್, ಸುರೇಶ್, ದಿನೇಶ್, ಉಮೇಶ್, ಗಣೇಶ್, ಶಶಿಧರ್ ಮತ್ತಿತರರು ಉಪಸ್ಥಿತರಿದ್ದರು.