ಬೆಂಗಳೂರು,ಜು.12:
ರಾಜ್ಯವ್ಯಾಪಿ ಬೀಕರ ಮಳೆ ಬಂದಾಗ ಹಿರಿಯ ಅಧಿಕಾರಿಗಳು ರಜೆ ಕೊಡ್ತಾರೋ ಇಲ್ವೋ ಎಂದು ಕಾಯಬೇಕಾದ ಪರಿಸ್ಥಿತಿಗೆ ಇನ್ನುಂದೆ ಬ್ರೇಕ್ ಬಿದ್ದಿದ್ದು, ಅತ್ಯಂತ ಅಗತ್ಯವಿದ್ದರೆ ಆಯಾ ಶಾಲಾ ಮುಖ್ಯ ಶಿಕ್ಷಕರೇ ರಜೆ ನೀಡಬಹುದು.
ಇಂತಹದೊಂದು ತೀರ್ಮಾನಕ್ಕೆ ಶಿಕ್ಷಣ ಇಲಾಖೆ ಬಂದಿರುವುದು ಶ್ಲಾಘನೀಯ. ಶಾಲೆಗೆ ಬರುವ ಮಕ್ಕಳ, ಪೋಷಕರ ಹಾಗೂ ಶಿಕ್ಷಕರ ಗೊಂದಲಗಳಿಗೆ ತಿಲಾಂಜಲಿ ಬಿದ್ದಿದೆ.


ರಾಜ್ಯಾದ್ಯಂತ ವ್ಯಾಪಕವಾಗಿ ಮಳೆಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಮಳೆ ಹೆಚ್ಚಾಗಿರುವ ಕೆಲ ಶಾಲೆಗಳಿಗೆ ಇಂದಿಗೂ ರಜೆ ಘೋಷಿಸಲಾಗುತ್ತಿದೆ.
ಮಕ್ಕಳು ಸುಗಮವಾಗಿ ಶಾಲೆಗೆ ಬಂದು ಹೋಗಲು ಸಾಧ್ಯವಾಗದ ಪ್ರದೇಶಗಳ ಶಾಲೆಗಳಿಗೆ ಆಯಾ ಶಾಲಾ ಮುಖ್ಯೋಪಾಧ್ಯಾಯರೇ ಅಧಿಕಾರಿಗಳ ಸಹಮತ ಪಡೆದು ರಜೆ ಘೋಷಿಸಬಹುದು ಎಂದು ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ ಎಂದು ತಿಳಿದುಬಂದಿದೆ.


ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳಿಂದ ಮಕ್ಕಳನ್ನು ದೂರ ಇರಿಸಬೇಕು ಎಂದು ತಿಳಿಸಲಾಗಿದ್ದು, ಕಟ್ಟಡಗಳು ಕುಸಿದು ಬೀಳುವ ಸಾಧ್ಯತೆ ಇರುವುದರಿಂದ ಅಲ್ಲಿ ತರಗತಿಗಳನ್ನು ನಡೆಸುವುದಾಗಲಿ ಅಥವಾ ಶೌಚಾಲಯ ಬಳಸುವುದನ್ನು ನಿಲ್ಲಿಸಬೇಕು ಎಂದು ಸೂಚಿಸಲಾಗಿದೆ. ಅಲ್ಲಿ ರಜೆ ನೀಡಬಹುದು. ಮುಖ್ಯ ಶಿಕ್ಷಕರದೇ ತೀರ್ಮಾನವಿರುತ್ತದೆ.

By admin

ನಿಮ್ಮದೊಂದು ಉತ್ತರ

error: Content is protected !!